ಡಿ.23ಕ್ಕೆ 545 PSI ಹುದ್ದೆಗಳಿಗೆ ಮರು ಪರೀಕ್ಷೆ : ಪಿಎಸ್ಐ ನೇಮಕಾತಿ ಹಗರಣ
ಬೆಂಗಳೂರು: ಮರು ಪರೀಕ್ಷೆ ಯಾವಾಗ ಎಂದು ಎದುರು ನೋಡುತ್ತಿದ್ದ ಅಭ್ಯರ್ಥಿಗಳಿ ಕೆಇಎ ಇದೀಗ ಸಿಹಿ ಸುದ್ದಿಯನ್ನು ನೀಡಿದ್ದು, ಡಿಸೆಂಬರ್ 23ಕ್ಕೆ ಮರು ಪರೀಕ್ಷೆ ನಡೆಯುವುದಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಗೆ ಮರು ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮರು ಪರೀಕ್ಷಾ ದಿನಾಂಕವನ್ನು ಇಂದು (ನ.22) ಪ್ರಕಟಿಸಿದೆ. 2021ರ ಜನವರಿ 21 ರಂದು ಕರ್ನಾಟಕ ಪೊಲೀಸ್ ಇಲಾಖೆಯಿಂದ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕಟವಾಗಿತ್ತು. […]
ಹೊಸ ಪ್ರಭೇದದ ‘ಮ್ಯೂಸಿಕ್ ಕಪ್ಪೆ’ ಪತ್ತೆ :ಗಂಡು – ಹೆಣ್ಣಿನ ಧ್ವನಿಯಲ್ಲಿ ವಟಗುಟ್ಟುವ ಹೊಸ ಜಾತಿಯ ಕಪ್ಪೆ
ಇಟಾನಗರ (ಅರುಣಾಚಲಪ್ರದೇಶ) :ಪತ್ತೆಯಾದ ಹೊಸ ಜಾತಿಯ ಕಪ್ಪೆಯು ಧ್ವನಿಯು ಸಂಗೀತದಂತೆ ಕೇಳಿಬರುತ್ತಿದ್ದು ‘ಮ್ಯೂಸಿಕ್ ಫ್ರಾಗ್’ ಎಂದು ವಿಜ್ಞಾನಿಗಳು ಕರೆದಿದ್ದಾರೆ. ಈ ಕಪ್ಪೆಯು ಮೂರು ರೀತಿಯಲ್ಲಿ ಧ್ವನಿ ಮಾಡುವ ವಿಶೇಷತೆ ಹೊಂದಿದೆ. ನಾವು ನೋವಾ ಡಿಹಿಂಗ್ ನದಿ ಬಳಿಯ ಜೌಗು ಪ್ರದೇಶದಲ್ಲಿ ಪತ್ತೆ ಮಾಡಿದೆವು. ಇದು ಹೆಚ್ಚೂ ಕಮ್ಮಿ ಕಾಡು ಬಾತುಕೋಳಿ ಜಾತಿಗೆ ಹೋಲುತ್ತದೆ. ಇದರ ಧ್ವನಿಯನ್ನೂ ನಾವು ಹಿಂದೆಂದೂ ಕೇಳಿರಲಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾಗಿ ಝೂಟಾಕ್ಸಾ ಜರ್ನಲ್ನಲ್ಲಿ ನವೆಂಬರ್ 15 ರಂದು ಪ್ರಕಟವಾದ ಲೇಖನದಲ್ಲಿ ಪ್ರಕಟವಾಗಿದೆ. ನೋವಾ […]
ಡಿಸೆಂಬರ್ 2 ಹಾಗೂ 3 ರಂದು ಮತ್ಸ್ಯಮೇಳ: ಪೋಸ್ಟರ್ ಬಿಡುಗಡೆ ಮಾಡಿದ ಶಾಸಕ ಯಶ್ ಪಾಲ್ ಸುವರ್ಣ
ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿ. ಮಂಗಳೂರು ಇವರ ನೇತೃತ್ವದಲ್ಲಿ, ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ಸ್ಕೋಡ್ವೆಸ್ ಸಂಸ್ಥೆ ಶಿರಸಿ ಇವರ ಸಹಭಾಗೀತ್ವದಲ್ಲಿ ರಚನೆಗೊಂಡ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯು ಡಿ. 2 ಮತ್ತು 3 ರಂದು ಆಯೋಜಿಸುತ್ತಿರುವ “ಮತ್ಸ್ಯ ಮೇಳ” – 2023 ರ ಪೋಸ್ಟರ್ ಅನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ […]
ಮಣಿಪಾಲ: ಬೈಕ್- ಸ್ಕೂಟರ್ ಮಧ್ಯೆ ಅಪಘಾತ: ಯುವತಿ ಮೃತ್ಯು, ಮೂವರಿಗೆ ಗಾಯ
ಮಣಿಪಾಲ: ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಯುವತಿಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಮಣಿಪಾಲದ ರೋಯಲ್ ಅಂಬೆಸಿ ಅಪಾರ್ಟ್ಮೆಂಟ್ ಸಮೀಪ ನಡೆದಿದೆ. ಮೃತರನ್ನು ಹಿರಿಯಡಕ ನಿವಾಸಿ ಸುಶ್ಮಿತಾ(19) ಎಂದು ಗುರುತಿಸಲಾಗಿದೆ. ಬೈಕ್ ಸವಾರ ರಾಹುಲ್, ಸ್ಕೂಟರ್ ಸವಾರರಾದ ಅನೂಜ್ ಮತ್ತು ಆದರ್ಶ ಎಂಬವರು ಗಾಯಗೊಂಡಿದ್ದಾರೆ. ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಕಾಯಿನ್ ಸರ್ಕಲ್ ನಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಬೈಕಿಗೆ, ಅದೇ ದಿಕ್ಕಿನಲ್ಲಿ ಬಂದ ಸ್ಕೂಟರ್ ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ […]
ಮಂಗಳೂರು: ನ 26ರಂದು ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಮಂಗಳಾದೇವಿ ದಶಮಾನೋತ್ಸವ ಸಮಾರಂಭ
ಮಂಗಳೂರು: ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ, ಮಂಗಳಾದೇವಿ, ಇದರ ದಶಮಾನೋತ್ಸವ ಸಮಾರಂಭವು ಶ್ರೀ ಮಂಗಳಾದೇವಿ ದೇವಸ್ಥಾನದ ಅಂಗಣದೊಳಗೆ ನವೆಂಬರ್ 26ರಂದು ಜರಗಲಿದ್ದು ಆ ಪ್ರಯುಕ್ತ “ತ್ರಿಜನ್ಮ ಮೋಕ್ಷ ” ಕನ್ನಡ ಯಕ್ಷಗಾನ ಬಯಲಾಟ ನಡೆಯಲಿದೆ. ಯಕ್ಷಗಾನ ಬಯಲಾಟದ ಪೂರ್ವಭಾವಿಯಾಗಿ ಬೆಳಗ್ಗೆ 9 ರಿಂದ 10.30 ರವರೆಗೆ ಷಣ್ಮುಖಪ್ರಿಯ ಭಜನಾ ತಂಡ, ಪಡೀಲ್ ಇವರಿಂದ ಭಜನಾ ಕಾರ್ಯಕ್ರಮವಿದೆ. 10.30 ಕ್ಕೆ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಆರಂಭವಾಗಿ 11.30 ರಿಂದ ಖ್ಯಾತ ಭಾಗವತ ದಯಾನಂದ್ ಕೋಡಿಕಲ್ ಮತ್ತು ಇವರ ಶಿಷ್ಯ […]