ಹೊಸ ಪ್ರಭೇದದ ‘ಮ್ಯೂಸಿಕ್​ ಕಪ್ಪೆ’ ಪತ್ತೆ :ಗಂಡು – ಹೆಣ್ಣಿನ ಧ್ವನಿಯಲ್ಲಿ ವಟಗುಟ್ಟುವ ಹೊಸ ಜಾತಿಯ ಕಪ್ಪೆ

ಇಟಾನಗರ (ಅರುಣಾಚಲಪ್ರದೇಶ) :ಪತ್ತೆಯಾದ ಹೊಸ ಜಾತಿಯ ಕಪ್ಪೆಯು ಧ್ವನಿಯು ಸಂಗೀತದಂತೆ ಕೇಳಿಬರುತ್ತಿದ್ದು ‘ಮ್ಯೂಸಿಕ್​ ಫ್ರಾಗ್​’ ಎಂದು ವಿಜ್ಞಾನಿಗಳು ಕರೆದಿದ್ದಾರೆ. ಈ ಕಪ್ಪೆಯು ಮೂರು ರೀತಿಯಲ್ಲಿ ಧ್ವನಿ ಮಾಡುವ ವಿಶೇಷತೆ ಹೊಂದಿದೆ. ನಾವು ನೋವಾ ಡಿಹಿಂಗ್ ನದಿ ಬಳಿಯ ಜೌಗು ಪ್ರದೇಶದಲ್ಲಿ ಪತ್ತೆ ಮಾಡಿದೆವು. ಇದು ಹೆಚ್ಚೂ ಕಮ್ಮಿ ಕಾಡು ಬಾತುಕೋಳಿ ಜಾತಿಗೆ ಹೋಲುತ್ತದೆ. ಇದರ ಧ್ವನಿಯನ್ನೂ ನಾವು ಹಿಂದೆಂದೂ ಕೇಳಿರಲಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾಗಿ ಝೂಟಾಕ್ಸಾ ಜರ್ನಲ್‌ನಲ್ಲಿ ನವೆಂಬರ್ 15 ರಂದು ಪ್ರಕಟವಾದ ಲೇಖನದಲ್ಲಿ ಪ್ರಕಟವಾಗಿದೆ. ನೋವಾ ಡಿಹಿಂಗ್​ ನದಿ ಪಾತ್ರದಲ್ಲಿ ಶೋಧಿಸಲಾಗಿದ್ದು, ನದಿಯ ಹೆಸರನ್ನೇ ಸೂಚಿಸಲಾಗಿದೆ.ಪ್ರಾಣಿ ಪ್ರಪಂಚವೇ ಒಂದು ವಿಸ್ಮಯ. ಮೊಗೆದಷ್ಟೂ ಅದು ವಿಸ್ತೃತವೇ. ಗಂಡು- ಹೆಣ್ಣಿನ ಧ್ವನಿಯಲ್ಲಿ ವಟಗುಟ್ಟುವ ಹೊಸ ಪ್ರಭೇದದ ಕಪ್ಪೆಯನ್ನು ವಿಜ್ಞಾನಿಗಳು ಅರುಣಾಚಲಪ್ರದೇಶದಲ್ಲಿ ಪತ್ತೆ ಮಾಡಿದ್ದಾರೆ.ಅರುಣಾಚಲಪ್ರದೇಶದಲ್ಲಿ ಹೊಸ ಜಾತಿಯ ಕಪ್ಪೆಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಹೊಸ ಜಾತಿಗೆ ನೋವಾ ಡಿಹಿಂಗ್ ಹೆಸರು: ಈ ಪ್ರಭೇದದ ಕಪ್ಪೆಗಳು ಸಹಜವಾಗಿ ಜಪಾನ್, ತೈವಾನ್, ಚೀನಾ, ವಿಯೆಟ್ನಾಂ, ಲಾವೋಸ್ ಮತ್ತು ಥೈಲ್ಯಾಂಡ್​ನಲ್ಲಿ ಕಂಡುಬರುತ್ತದೆ. ಇವನ್ನು ‘ನಿದಿರಾನ’ ಜಾತಿಯಿಂದ ಗುರುತಿಸಲಾಗುತ್ತದೆ. ಇವು ಹೆಚ್ಚಾಗಿ ಜೌಗು ಪ್ರದೇಶಗಳು, ಕೊಳಗಳು ಮತ್ತು ಭತ್ತದ ಗದ್ದೆಗಳಲ್ಲಿ ವಾಸಿಸುತ್ತವೆ. ಮೊಟ್ಟೆಗಳನ್ನು ಇಡಲು ಹೆಚ್ಚಾಗಿ ಗೂಡುಗಳನ್ನು ನಿರ್ಮಿಸುತ್ತವೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ನೋವಾ ಡಿಹಿಂಗ್ ಪ್ರದೇಶದಲ್ಲಿ ಕಂಡು ಬಂದ ಮ್ಯೂಸಿಕ್​ ಫ್ರಾಗ್​ಗಳಲ್ಲಿ ಮೂರು ಗಂಡು ಮತ್ತು ಎರಡು ಹೆಣ್ಣು ಸೇರಿ ಐದು ಕಪ್ಪೆಗಳನ್ನು ವಿಜ್ಞಾನಿಗಳು ಸಂಗ್ರಹಿಸಿದ್ದಾರೆ.ವಿಜ್ಞಾನಿಗಳಾದ ಬಿಟುಪನ್ ಬೊರುವಾ, ವಿ ದೀಪಕ್ ಮತ್ತು ಅಭಿಜಿತ್ ದಾಸ್ ಅವರು 2021 ರ ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಚಾಂಗ್ಲಾಂಗ್ ಮತ್ತು ಲೋಹಿತ್ ಜಿಲ್ಲೆಗಳಲ್ಲಿ ಕ್ಷೇತ್ರ ಸಮೀಕ್ಷೆ ನಡೆಸಿದ್ದರು. ಈ ವೇಳೆ, 6 ಸೆಂಟಿಮೀಟರ್ ಉದ್ದದ, ತೆಳು ಕೆನೆ ಬಣ್ಣ ಹೊಂದಿರುವ ಕಪ್ಪೆಯನ್ನು ಕಂಡು ಹಿಡಿದಿದ್ದರು. ಇದರ ದೇಹದ ಮಧ್ಯದಲ್ಲಿ ರೇಖೆಯ ಗುರುತಿದೆ.

ಹೊಸ ಕಪ್ಪೆಯ ವಿಶಿಷ್ಟತೆಗಳಿವು: ಆಳವಿಲ್ಲದ ನೀರಿನ ಕೊಳಗಳಲ್ಲಿ ಇದು ವಾಸಿಸುತ್ತದೆ. ಗಂಡು ಕಪ್ಪೆಗಳು ಜೋರಾಗಿ ಕೂಗುತ್ತವೆ. ಕಪ್ಪೆಯು ದೃಢವಾದ ದೇಹವನ್ನು ಹೊಂದಿದೆ. ಗಂಡು ಕಪ್ಪೆ ಸುಮಾರು 1.8 ಇಂಚು ಅಗಲ ಮತ್ತು 2.3 ಇಂಚು ಉದ್ದ ದೇಹ ಹೊಂದಿದ್ದರೆ, ಹೆಣ್ಣು 2.4 ಇಂಚು ಅಗಲ ಮತ್ತು 2.6 ಇಂಚು ಉದ್ದವನ್ನು ಹೊಂದಿದೆ. ನಡುಬೆನ್ನಿನ ಮೇಲೆ ಎಲುಬು ಊದಿಕೊಂಡಿದ್ದು, ಅದರ ಮೇಲೆ ಕಡು ಕಂದು ಬಣ್ಣದ ರೇಖೆ ಇದೆ. ಈ ಉಭಯಚರಗಳು ದುಂಡಾದ ಮುಖ ಮತ್ತು ನಯವಾದ ಚರ್ಮ, ತಿಳಿ ಕಂದು ಬಣ್ಣದ ಪಟ್ಟಿಗಳನ್ನು ದೇಹದ ತುಂಬಾ ಹೊಂದಿದೆ