ಡಾ. ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಪ್ರಮಾ ಪ್ರಶಸ್ತಿ-2023

ಮಣಿಪಾಲ: ಡಾ. ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ) ವತಿಯಿಂದ ನ.25 ರಂದು ಸಂಜೆ 4 ಗಂಟೆಗೆ ಮಣಿಪಾಲ್ ಡಾಟ್ ನೆಟ್ ನಲ್ಲಿ ಪ್ರಮಾ ಪ್ರಶಸ್ತಿ-2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿರುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು “ವನ್ ಗುಡ್ ಸ್ಟೆಪ್” ಇದರ ಸಂಸ್ಥಾಪಕಿ ಅಮಿತ ಪೈ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಮಾ ಪ್ರಶಸ್ತಿ ವಿತರಿಸಲಾಗುವುದು

ನ.22 ರಂದು ನೇಜಾರು ಸಂತ್ರಸ್ತರಿಗಾಗಿ ಸಂತಾಪ ಸಭೆ

ಉಡುಪಿ: ಇತ್ತೀಚೆಗೆ ನೇಜಾರಿನಲ್ಲಿ ಹತರಾದ ಒಂದೇ ಕುಟುಂಬದ ನಾಲ್ಕು ಮಂದಿಯ ಸ್ಮರಣೆಗಾಗಿ ನ. 22 ರಂದು ಸಂಜೆ 6.30 ಕ್ಕೆ ಸಂತೆಕಟ್ಟೆಯ ಮೌಂಟ್ ರೋಸರಿ ಮಿಲೆನಿಯಮ್ ಹಾಲಿನಲ್ಲಿ ಸಂತಾಪ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಕಟಣೆ ತಿಳಿಸಿದೆ.