ಆರ್ಬಿಐ ಬುಲೆಟಿನ್: 3ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಹೆಚ್ಚಳ ನಿರೀಕ್ಷೆ
ಮುಂಬೈ :ಸರ್ಕಾರದ ಮೂಲಸೌಕರ್ಯ ವೆಚ್ಚ, ಖಾಸಗಿ ಕ್ಯಾಪೆಕ್ಸ್, ಯಾಂತ್ರೀಕರಣ, ಡಿಜಿಟಲೀಕರಣ ಮತ್ತು ಸ್ವದೇಶೀಕರಣದಲ್ಲಿ ಹೆಚ್ಚಳದ ಉತ್ತೇಜನದೊಂದಿಗೆ ಹೂಡಿಕೆಯ ಬೇಡಿಕೆಯು ಸ್ಥಿತಿಸ್ಥಾಪಕತ್ವವನ್ನು ಹೊಂದಿದೆ. ಮುಖ್ಯ ಹಣದುಬ್ಬರವು 2022-23ರಲ್ಲಿ ಸರಾಸರಿ ಶೇಕಡಾ 6.7 ರಿಂದ ಅಕ್ಟೋಬರ್ನಲ್ಲಿ ಶೇಕಡಾ 4.9 ಕ್ಕೆ ಇಳಿದಿದೆ ಮತ್ತು ಜುಲೈ-ಆಗಸ್ಟ್ 2023 ರಲ್ಲಿ ಶೇಕಡಾ 7.1 ಕ್ಕೆ ಇಳಿದಿದೆ ಎಂದು ನವೆಂಬರ್ನ ಆರ್ಬಿಐ ಬುಲೆಟಿನ್ ಹೇಳಿದೆ. ಜಾಗತಿಕ ಆರ್ಥಿಕತೆಯು ನಿಧಾನಗೊಳ್ಳುವ ಲಕ್ಷಣಗಳನ್ನು ತೋರಿಸುತ್ತಿದ್ದರೂ ಭಾರತದ ಜಿಡಿಪಿ ಬೆಳವಣಿಗೆಯ ವೇಗವು 2023-24ರ ಮೂರನೇ ತ್ರೈಮಾಸಿಕದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ […]
ಸಚಿವ ಮಧು ಬಂಗಾರಪ್ಪ : ರಾಜ್ಯದಲ್ಲಿ 3 ಸಾವಿರ ಪಬ್ಲಿಕ್ ಶಾಲೆ ಆರಂಭಿಸಲು ನಿರ್ಧಾರ
ಬೆಂಗಳೂರು: ರಾಜ್ಯದಲ್ಲಿ ಸುಮಾರು 3ಸಾವಿರ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ವಿಕಾಸಸೌಧದಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, 2024-25ರ ವೇಳೆಗೆ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಹಾಗಾಗಿ, ಗ್ರಾಮಾಂತರ ಭಾಗದಲ್ಲಿ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಮೂರು ವರ್ಷದಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು […]
51ಕ್ಕೆ ಏರಿದ ಇಸ್ರೇಲ್ ಸೈನಿಕರ ಸಾವಿನ ಸಂಖ್ಯೆ : ಇಸ್ರೇಲ್ನ ಮತ್ತೊಬ್ಬ ಯೋಧ ಸಾವು
ಟೆಲ್ ಅವೀವ್ (ಇಸ್ರೇಲ್) : ಅಕ್ಟೋಬರ್ 27 ರಿಂದ ಗಾಜಾದಲ್ಲಿ ಇಸ್ರೇಲ್ ಭೂಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಹಮಾಸ್ ಜೊತೆಗಿನ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಐಡಿಎಫ್ ಸೈನಿಕರ ಸಂಖ್ಯೆ 51 ಕ್ಕೆ ಏರಿದೆ. ಬೆನ್ ನನ್ ಪ್ಯಾರಾ ಟ್ರೂಪ್ ಬ್ರಿಗೇಡ್ನ 202 ನೇ ಬೆಟಾಲಿಯನ್ನಲ್ಲಿ ಉಪ ಕಮಾಂಡರ್ ಆಗಿದ್ದರು. ಹಮಾಸ್ ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ಕ್ಯಾಪ್ಟನ್ ಶ್ಲೋಮೊ ಬೆನ್ ನನ್ (22) ಹುತಾತ್ಮರಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಗುರುವಾರ ಪ್ರಕಟಿಸಿದೆ. ಇಸ್ರೇಲ್ ಮತ್ತು ಹಮಾಸ್ ಯುದ್ಧದಲ್ಲಿ ಇಸ್ರೇಲ್ನ ಮತ್ತೊಬ್ಬ […]
ಅಳಿಯೂರು: ಹಶ್ವಿಕ್ ಗ್ರಾಫಿಕ್ಸ್ ಮತ್ತು ವೆಜಿಟೇಬಲ್ಸ್ ಶುಭಾರಂಭ
ಅಳಿಯೂರು: ತಾಣದ ಬಾಕ್ಯಾರಿನ ಶ್ರೀಗುರು ಕಾಂಪ್ಲೆಕ್ಸ್ ನಲ್ಲಿ ಹಶ್ವಿಕ್ ಗ್ರಾಫಿಕ್ಸ್ ಮತ್ತು ವೆಜಿಟೇಬಲ್ಸ್ ನವೆಂಬರ್ 14 ರಂದು ಶುಭಾರಂಭಗೊಂಡಿತು. ಕಾರ್ಕಳದ ಶಿವ ಎಡ್ವಟೈಸರ್ಸ್ ಮಾಲಕ ವರದರಾಯ ಪ್ರಭು ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನವೋದಯ ಸಂಸ್ಥೆಯ ರುಕ್ಮಯ ಪೂಜಾರಿ, ಅಳಿಯೂರಿನ ಉದ್ಯಮಿ ಪದ್ಮನಾಭ ಕೊಟ್ಯಾನ್, ವಾಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಬಿ. ಅಳಿಯೂರು, ಗುರು ಜನರಲ್ ಸ್ಟೋರ್ ಮಾಲಕ ಸಂಜೀವ ಪೂಜಾರಿ, ಗಣೇಶ್ ಶೇಖರ್ ಸಾಲಿಯಾನ್, ಸುಂದರ್ ಕೊಲಂಗಾಲು, ನೆಲ್ಲಿಕಾರ್ ಹೋಟೇಲ್ ಅಶ್ವಿನಿ ಮಾಲಕ ನೊನಯ್ಯ […]
ಸೆರೆಬ್ರೆಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಆರ್ಥಿಕ ಸಹಾಯ ಹಸ್ತ ಚಾಚಿದ ಕಡಿಯಾಳಿ ಜವನೆರ್, ಹೆರ್ಗ ಫ್ರೆಂಡ್ಸ್ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್
ಉಡುಪಿ: ಜಿಲ್ಲೆಯ ಚಿಟ್ಪಾಡಿ ಗ್ರಾಮದ ನಿವಾಸಿ ದಿಶಾ ಆಚಾರ್ಯ ಇವರು Spastic Cerebral Palsy ಸಮಸ್ಯೆಯಿಂದ ಬಳಲುತ್ತಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇವರ ಚಿಕಿತ್ಸಾ ವೆಚ್ಚಕ್ಕಾಗಿ ಉಡುಪಿಯ ತಂಡಗಳಾದ ಕಡಿಯಾಳಿ ಜವನೆರ್ ವತಿಯಿಂದ 30,000 ರೂ, ಹೆರ್ಗ ಫ್ರೆಂಡ್ಸ್ ವತಿಯಿಂದ 18,800 ರೂ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ 21,000 ರೂ ಮೊತ್ತದ ಹಣವನ್ನು ಆರ್ಥಿಕ ಧನ ಸಹಾಯದ ರೂಪದಲ್ಲಿ ನೀಡಲಾಯಿತು.