ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್ ಚೌಗಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಉಡುಪಿ: ಉಡುಪಿ ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆ ಎಂಬವನನ್ನು ಪೊಲೀಸರು ಇಂದು ಸಂಜೆ ಎಸಿಜೆ ಜೆಎಮ್ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅಜೆಕಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಪಿಯ ವೈದ್ಯಕೀಯ ತಪಾಸಣೆ ನಡೆಸಿದ ಪೊಲೀಸರು, ನೇರವಾಗಿ ಉಡುಪಿಯ ನ್ಯಾಯಾಲಯಕ್ಕೆ ಕರೆತಂದರು. ಬೀಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು.

ಬಟ್ಟೆ ಮಳಿಗೆ ಮಾಲೀಕರಿಂದ ಕಿರುಕುಳ ಆರೋಪ: ಆಟೋ ಚಾಲಕರ ಸಂಘದಿಂದ ಪ್ರತಿಭಟನೆ

ಉಡುಪಿ: ಬನ್ನಂಜೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೆಸರಾಂತ ಬಟ್ಟೆ ಮಳಿಗೆಯ ಮಾಲಿಕರು ಹಾಗೂ ಸಿಬ್ಬಂದಿಗಳು ರಿಕ್ಷಾ ಚಾಲಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಅವರ ವಿರುದ್ದ ಕ್ರಮಕೈಗೊಳ್ಳಲು ಆಗ್ರಹಿಸಿ ರಿಕ್ಷಾ ಚಾಲಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಟ್ಟೆ ಮಳಿಗೆಯ ಮಾಲಕರು ಹಾಗೂ ಸಿಬ್ಬಂದಿಗಳು ಇತ್ತೀಚೆಗಷ್ಟೇ ಆಟೋ ರಿಕ್ಷಾ ಚಾಲಕರೊಬ್ಬರ ಕೀಯನ್ನು ಕಸಿದುಕೊಂಡು ರಿಕ್ಷಾ ತೆಗೆಯದಂತೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಳಿಗೆ ಮುಂದೆ ಗಲಾಟೆ ನಡೆದಿದ್ದು ನಂತರ ಪೊಲೀಸರ ಮಧ್ಯ ಪ್ರವೇಶದಿಂದ […]

ವಿಶ್ವಕಪ್ 2023 ಸೆಮಿಫೈನಲ್: 50 ಸಿಕ್ಸರ್‌ಗಳ ಹೊಸ ಕ್ರಿಕೆಟ್ ವಿಶ್ವಕಪ್ ದಾಖಲೆ ಬರೆದ ನಾಯಕ ರೋಹಿತ್ ಶರ್ಮಾ

ಮುಂಬೈ: 13ನೇ ಏಕದಿನ ಅರ್ಧಶತಕ ಸಿಡಿಸಿದ ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ ಜೊತೆ ಆತ್ಮವಿಶ್ವಾಸದ ಆಟವನ್ನು ತೋರಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಭಾರತದ ರನ್ ದರವನ್ನು ಪ್ರತಿ ಓವರ್‌ಗೆ 7.5 ಕ್ಕಿಂತ ಕಡಿಮೆಗೊಳ್ಳಲು ಬಿಡದೆ ಈಗಾಗಲೇ 150 ಕ್ಕೂ ಮಿಕ್ಕಿ ರನ್‌ಗಳನ್ನು ಬಾಚಿದ್ದಾರೆ. ಇದಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ 50 ಸಿಕ್ಸರ್‌ಗಳ ಹೊಸ ಕ್ರಿಕೆಟ್ ವಿಶ್ವಕಪ್ ದಾಖಲೆಯನ್ನು ನಿರ್ಮಿಸಿದ್ದಾರೆ. 2023 […]

ಬೆಂಗಳೂರಿನಲ್ಲಿ NASA ಮತ್ತು ISRO ನಡುವಿನ ಮೊದಲ ಬಾಹ್ಯಾಕಾಶ-ಹಾರ್ಡ್‌ವೇರ್ NISAR ಉಪಗ್ರಹದ ಥರ್ಮಲ್ ವ್ಯಾಕ್ಯೂಮ್ ಪ್ರಯೋಗ ಯಶಸ್ವಿ

ಬೆಂಗಳೂರು: ಚಿನ್ನದ ಬಣ್ಣದ ಥರ್ಮಲ್ ಬ್ಲಾಂಕೆಟಿಂಗ್‌ನಿಂದ ಮುಚ್ಚಲ್ಪಟ್ಟ NISAR ಉಪಗ್ರಹವು ಸೆಪ್ಟೆಂಬರ್ 2023 ರಲ್ಲಿ ಭಾರತದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಉಪಗ್ರಹ ಏಕೀಕರಣ ಮತ್ತು ಪರೀಕ್ಷಾ ಸ್ಥಾಪನೆ (ISITE) ಸೌಲಭ್ಯದಲ್ಲಿ ಕಠಿಣ ಪರೀಕ್ಷೆಗಳಿಗೆ ಒಡ್ಡಿಕೊಳ್ಳುತ್ತಿದೆ. NASA-ISRO ಸಿಂಥೆಟಿಕ್ ಅಪರ್ಚರ್ ರಾಡಾರ್‌(NISAR) ಚೇಂಬರ್‌ನಲ್ಲಿ 20 ದಿನಗಳ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ಇಲ್ಲಿನ ಎಂಜಿನಿಯರ್‌ಗಳು ಎರಡು ರೇಡಾರ್ ಸಿಸ್ಟಮ್‌ಗಳ ಆಂಟೆನಾಗಳಿಂದ ರೇಡಿಯೊ ಸಂಕೇತಗಳು ಸಫಲ ಪರೀಕ್ಷಣಗಳನ್ನು ದಾಟಿದೆ ಎಂದು ಕಂಡುಕೊಂಡಿದ್ದಾರೆ. ಉಪಗ್ರಹದ ಗೋಡೆಗಳು, ನೆಲ ಮತ್ತು ಸೀಲಿಂಗ್ ಅನ್ನು […]

ಉಡುಪಿ: ಸರ್ವ ಧರ್ಮದ ಸೌಹಾರ್ದ ದೀಪಾವಳಿ ಆಚರಣೆ

ಉಡುಪಿ: ನಗರದ ಅಲಂಕಾರ್ ಚಿತ್ರ ಮಂದಿರದ ಹಿಂಭಾಗದ ಮಾಂಡವಿ ಆಕ್ರೊಪೊಲಿಸ್ ವಸತಿ ಸಮುಚ್ಚಯದಲ್ಲಿ 300ಕ್ಕೂ ಹೆಚ್ಚಿನ ನಿವಾಸಿಗಳು ಸರ್ವ ಧರ್ಮದ ಸೌಹಾರ್ದ ದೀಪಾವಳಿ ಆಚರಿಸಿದರು. ಸೊಸೈಟಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೀಪಾವಳಿಯ ಮಹತ್ವದ ಬಗ್ಗೆ ತಿಳಿಸಿದರು. ನಿವಾಸಿಗಳು ಸಾವಿರಾರು ಹಣತೆ ದೀಪಗಳನ್ನು ಬೆಳಗಿಸಿದರ, ಹೂಗಳಿಂದ ರಚಿಸಿದ ವಿಶೇಷ ರಂಗೋಲಿ, ಸುಡು ಮದ್ದು ಪ್ರದರ್ಶನ ನಡೆಯಿತು. ಸೋಮವಾರದಂದು ರಾತ್ರಿ ಮಹಿಳೆಯರು , ಮಕ್ಕಳು , ಪುರುಷರು ಒಟ್ಟಾಗಿ ದಾಂಡಿಯಾ ನೃತ್ಯ ಮಾಡಿದರು. […]