ಆಮದಿನಲ್ಲಿ ಮತ್ತೆ ಹೆಚ್ಚಳ : ಭಾರತದ ಸರಕು ವ್ಯಾಪಾರ ಕೊರತೆ 31.46 ಶತಕೋಟಿ ಡಾಲರ್​ಗೆ ಏರಿಕೆ

ನವದೆಹಲಿ : ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ತೀವ್ರ ಏರಿಕೆಯ ಕಾರಣದಿಂದ ದೇಶದ ಆಮದು ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ. ಅಂತೆಯೇ ಚಿನ್ನದ ಆಮದು 2022 ರ ಅಕ್ಟೋಬರ್​ಗೆ ಹೋಲಿಸಿದರೆ ಶೇಕಡಾ 5.5 ರಷ್ಟು ಏರಿಕೆಯಾಗಿ 29.48 ಬಿಲಿಯನ್ ಡಾಲರ್​ಗೆ ತಲುಪಿದೆ. ಭಾರತದ ಸರಕು ವ್ಯಾಪಾರ ಕೊರತೆಯು (merchandise trade deficit) ಅಕ್ಟೋಬರ್​ನಲ್ಲಿ 31.46 ಶತಕೋಟಿ ಡಾಲರ್​ಗೆ ಏರಿಕೆಯಾಗಿದ್ದು, ಅದೇ ಸಮಯದಲ್ಲಿ ದೇಶದ ಆಮದು 65.03 ಶತಕೋಟಿ ಡಾಲರ್​ಗೆ ಏರಿಕೆಯಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತವಾಲ್ ಬುಧವಾರ […]

ಚಳಿಗಾಲ ಹಿನ್ನೆಲೆ ಕೇದಾರನಾಥ ದೇವಾಲಯದ ಬಾಗಿಲು ಬಂದ್: ರುದ್ರಪ್ರಯಾಗ

ರುದ್ರಪ್ರಯಾಗ (ಉತ್ತರಾಖಂಡ) : ಮಂಗಳವಾರ ಗಂಗೋತ್ರಿ ಧಾಮದ ಬಾಗಿಲು ಮುಚ್ಚುವ ಮೂಲಕ ಚಾರ್ಧಾಮ್ ಯಾತ್ರೆಯು ಅದರ ಸಮಾಪ್ತಿಯತ್ತ ಸಾಗುತ್ತಿದೆ. ಭಾರತೀಯ ಸೇನಾ ಬ್ಯಾಂಡ್‌ನ ಭಕ್ತಿ ಘೋಷಗಳ ನಡುವೆ ಕೇದಾರನಾಥ ಧಾಮದ ಬಾಗಿಲು ಮುಚ್ಚುವ ಪ್ರಕ್ರಿಯೆ ಪ್ರಾರಂಭವಾಯಿತು. ಭಗವಾನ್ ಅಶುತೋಷನ 11 ನೇ ಜ್ಯೋತಿರ್ಲಿಂಗ ಭಗವಾನ್ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಆರು ತಿಂಗಳ ಕಾಲ ಭಕ್ತರಿಗಾಗಿ ಬುಧವಾರ ಬೆಳಗ್ಗೆ 8 ಗಂಟೆಗೆ ಮುಚ್ಚಲಾಗಿದೆ. ಕೇದಾರನಾಥ ದೇವರ ಪಂಚಮುಖಿ ಡೋಲಿಯು ವಿಧಿ-ವಿಧಾನಗಳ ಪ್ರಕಾರ ದೇವಾಲಯದ ಆವರಣದಿಂದ ಹೊರಟಿತು. ಚಳಿಗಾಲ ಪ್ರಾರಂಭವಾಗಿರುವುದರಿಂದ […]

6 ಕೋಟಿಗೂ ಅಧಿಕ ಆದಾಯ ಸಂಗ್ರಹ : ಶಕ್ತಿದೇವತೆ ಹಾಸನಾಂಬೆಯ ದರ್ಶನ ಸಂಪನ್ನ

ಹಾಸನ: ಶಕ್ತಿದೇವತೆಹಾಸನಾಂಬೆಯ ಪ್ರಸಕ್ತ ಸಾಲಿನ ದರ್ಶನಕ್ಕೆ ಇಂದು ಕೊನೆಯ ದಿನವಾಗಿದ್ದು, ಮಧ್ಯಾಹ್ನ 12.23ಕ್ಕೆ ಜಿಲ್ಲಾಡಳಿತದ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಬಾಗಿಲು ಮುಚ್ಚುವ ಮೂಲಕ ಈ ಬಾರಿಯ ದರ್ಶನಕ್ಕೆ ತೆರೆ ಎಳೆಯಲಾಗಿದೆ.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ, ಶಾಸಕ ಹೆಚ್ ​ಪಿ ಸ್ವರೂಪ್‌ ಪ್ರಕಾಶ್, ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮಹಮದ್ ಸುಜೀತಾ ಉಪಸ್ಥಿತರಿದ್ದರು.ಹಾಸನದ ಹಾಸನಾಂಬೆ ಜಾತ್ರಾ ಮಹೋತ್ಸವವು ಸಂಪನ್ನಗೊಂಡಿದ್ದು ಉತ್ಸವಕ್ಕೆ ಬುಧವಾರ ವಿದ್ಯುಕ್ತವಾಗಿ ತೆರೆ ಕಂಡಿತು. 1 ಸಾವಿರ ಟಿಕೆಟ್ ಮಾರಾಟದಿಂದ 3,09,89,000 ರೂಪಾಯಿ ಆದಾಯ […]

ಸಚಿನ್​ ದಾಖಲೆ ಮುರಿದು ಏಕದಿನ ಶತಕಗಳ ಅರ್ಧಶತಕ ದಾಖಲಿಸಿದ ವಿರಾಟ್​

ಮುಂಬೈ (ಮಹಾರಾಷ್ಟ್ರ): ನ್ಯೂಜಿಲೆಂಡ್​​ ವಿರುದ್ಧದ ಸೆಮೀಸ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ದಿಗ್ಗಜ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್​ ಅವರ ಎರಡು ದಾಖಲೆಗಳನ್ನು ಮುರಿದಿದ್ದಾರೆ.ಇದೇ ವಿಶ್ವಕಪ್​ನಲ್ಲಿ ಏಕದಿನ ಕ್ರಿಕೆಟ್​ನ 49ನೇ ಶತಕ ಗಳಿಸಿ ಸಚಿನ್​ ದಾಖಲೆ ಸರಿಗಟ್ಟಿದ್ದ ವಿರಾಟ್​, ಇಂದು 50ನೇ ಶತಕ ಮಾಡಿ ರೆಕಾರ್ಡ್​ ಬ್ರೇಕ್​ ಮಾಡಿದ್ದಾರೆ. ಏಕದಿನ ಕ್ರಿಕೆಟ್​ನ 50ನೇ ಶತಕ ಗಳಿಸಿದ ವಿರಾಟ್​ ಕೊಹ್ಲಿ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದಿದ್ದಾರೆ. ವಿಶ್ವಕಪ್​ನ ಟಾಪ್​ ಸ್ಕೋರರ್​: ನಡೆಯುತ್ತಿರುವ ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ವಿರಾಟ್​ […]

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಮಲ್ಪೆ ಬೀಚ್‌ನಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ, ಯಾವುದೇ ಸಾವು-ನೋವುಗಳು ಆಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು. ಅವರು ಇಂದು ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಲ್ಪೆ ಕಡಲ ತೀರದ ಸುಧಾರಣೆ ಹಾಗೂ ಪ್ರವಾಸಿಗರ ಅನುಕೂಲಕ್ಕೆ ಆಧುನಿಕ ಅಭಿವೃದ್ಧಿಯ ಮೂಲಸೌಕರ್ಯಗಳನ್ನು ಒದಗಿಸಲು ಕಡಲ ತೀರದ ನೈಸರ್ಗಿಕ ಸೌಂದರ್ಯ ಹಾಗೂ ಪರಿಸರಕ್ಕೆ […]