ಚಳಿಗಾಲ ಹಿನ್ನೆಲೆ ಕೇದಾರನಾಥ ದೇವಾಲಯದ ಬಾಗಿಲು ಬಂದ್: ರುದ್ರಪ್ರಯಾಗ

ರುದ್ರಪ್ರಯಾಗ (ಉತ್ತರಾಖಂಡ) : ಮಂಗಳವಾರ ಗಂಗೋತ್ರಿ ಧಾಮದ ಬಾಗಿಲು ಮುಚ್ಚುವ ಮೂಲಕ ಚಾರ್ಧಾಮ್ ಯಾತ್ರೆಯು ಅದರ ಸಮಾಪ್ತಿಯತ್ತ ಸಾಗುತ್ತಿದೆ. ಭಾರತೀಯ ಸೇನಾ ಬ್ಯಾಂಡ್‌ನ ಭಕ್ತಿ ಘೋಷಗಳ ನಡುವೆ ಕೇದಾರನಾಥ ಧಾಮದ ಬಾಗಿಲು ಮುಚ್ಚುವ ಪ್ರಕ್ರಿಯೆ ಪ್ರಾರಂಭವಾಯಿತು. ಭಗವಾನ್ ಅಶುತೋಷನ 11 ನೇ ಜ್ಯೋತಿರ್ಲಿಂಗ ಭಗವಾನ್ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಆರು ತಿಂಗಳ ಕಾಲ ಭಕ್ತರಿಗಾಗಿ ಬುಧವಾರ ಬೆಳಗ್ಗೆ 8 ಗಂಟೆಗೆ ಮುಚ್ಚಲಾಗಿದೆ. ಕೇದಾರನಾಥ ದೇವರ ಪಂಚಮುಖಿ ಡೋಲಿಯು ವಿಧಿ-ವಿಧಾನಗಳ ಪ್ರಕಾರ ದೇವಾಲಯದ ಆವರಣದಿಂದ ಹೊರಟಿತು.

ಚಳಿಗಾಲ ಪ್ರಾರಂಭವಾಗಿರುವುದರಿಂದ ರುದ್ರಪ್ರಯಾಗದ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಶುಭ ಮುಹೂರ್ತದಲ್ಲಿ ವಿವಿಧ ಆಚರಣೆಗಳೊಂದಿಗೆ ಮುಚ್ಚಲಾಗಿದೆ. ಇಂದು ಕೇದಾರನಾಥನ ಪಂಚಮುಖಿ ಡೋಲಿಯು ದೇವಾಲಯದ ಆವರಣದಿಂದ ವಿಧಿ-ವಿಧಾನಗಳ ಪ್ರಕಾರ ನಡೆಯಿತು. ಬಾಬಾ ಕೇದಾರನ ಚಳಿಗಾಲದ ಆರಾಧನೆಯ ಸ್ಥಾನವಾದ ಉಖಿಮಠದ ಓಂಕಾರೇಶ್ವರ ದೇವಾಲಯದಲ್ಲಿ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ಬಾಬಾ ಕೇದಾರನ ಬಾಗಿಲು ಮುಚ್ಚುವ ಸಮಯದಲ್ಲಿ ಕೇದಾರ ಕಣಿವೆಯು ಹರ್ ಹರ್ ಮಹಾದೇವ್ ಎಂಬ ಘೋಷಣೆ ಪ್ರತಿಧ್ವನಿಸಿತು. ಕೇದಾರನಾಥ ಪ್ರದೇಶವು ಈಗಾಗಲೇ ಹಿಮದ ಹೊದಿಕೆಯಿಂದ ಆವೃತವಾಗಿದೆ.
ಕೇದಾರನಾಥ ಯಾತ್ರೆ 2023 ಭಯ್ಯಾ ದೂಜ್ನ ಪವಿತ್ರ ಹಬ್ಬದಲ್ಲಿ, ವೈದಿಕ ಪಠಣ ಮತ್ತು ಆಚರಣೆಗಳೊಂದಿಗೆ ಬಾಬಾ ಕೇದಾರನ ಬಾಗಿಲುಗಳನ್ನು ಚಳಿಗಾಲ ಅವಧಿ ಆರಂಭವಾದ ಹಿನ್ನೆಲೆ ಮುಚ್ಚಲಾಗಿದೆ.

19 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ : ಬಾಬಾ ಕೇದಾರನ ಭೋಗ್ ವಿಗ್ರಹವು ಉಖಿಮಠದ ಅದರ ಚಳಿಗಾಲದ ವಿಶ್ರಾಂತಿ ಸ್ಥಳ ಓಂಕಾರೇಶ್ವರ ದೇವಸ್ಥಾನಕ್ಕೆ ಬರಲಿದೆ. ಅಲ್ಲಿ ಭಕ್ತರು ಆರು ತಿಂಗಳ ಕಾಲ ಬಾಬಾ ಕೇದಾರನ ದೇವಾಲಯಕ್ಕೆ ಭೇಟಿ ಮಾಡಿ ಪೂಜಿಸುವ ಮೂಲಕ ಆಶೀರ್ವಾದ ಪಡೆಯಬಹುದು. ಬಿಕೆಟಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಂದ್ರ ಸಿಂಗ್ ಅವರು ಕೇದಾರನಾಥ ಧಾಮಕ್ಕೆ ಬಾಗಿಲು ತೆರೆದ ದಿನಾಂಕದಿಂದ ನವೆಂಬರ್ 14 ರ ಮಂಗಳವಾರ ರಾತ್ರಿಯವರೆಗೆ 19,57,850 ಯಾತ್ರಿಕರು ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ್ದಾರೆ.ಭಕ್ತರು ಚಳಿಗಾಲದಲ್ಲಿ ಉಖಿಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ಬಾಬಾ ಕೇದಾರನನ್ನು ಪೂಜಿಸಲು ಸಾಧ್ಯವಾಗುತ್ತದೆ. ದೇವಸ್ಥಾನದಲ್ಲಿ ನಿತ್ಯ ಪೂಜೆ, ದರ್ಶನ ನಡೆದು ನಂತರ ಬಾಗಿಲು ಮುಚ್ಚುವ ಅಂಗವಾಗಿ ಸ್ವಯಂಭೂ ಶಿವಲಿಂಗಕ್ಕೆ ಅಲಂಕಾರವನ್ನು ತೆಗೆಸಿ ಕೇದಾರನಾಥ ರಾವಲ್ ಭೀಮಾಶಂಕರಲಿಂಗ ಸನ್ನಿಧಿಯಲ್ಲಿ ಅರ್ಚಕರು ಶಿವಲಿಂಗಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಉಪಸ್ಥಿತರಿದ್ದರು. ಬಾಗಿಲು ಮುಚ್ಚುವ ಸಂದರ್ಭದಲ್ಲಿ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ಧಾಮ್‌ನಲ್ಲಿ ಉಪಸ್ಥಿತರಿದ್ದರು.

ಚಳಿಗಾಲದಲ್ಲಿ ಎಲ್ಲಾ ನಾಲ್ಕು ಧಾಮಗಳಲ್ಲಿ ಭಾರೀ ಹಿಮಪಾತವು ಇರುತ್ತದೆ. ಆದ್ದರಿಂದ, ಈ ಧಾಮಗಳು ಚಳಿಗಾಲದಲ್ಲಿ ಆರು ತಿಂಗಳ ಕಾಲ ಮುಚ್ಚಿರುತ್ತವೆ. ಆದಾಗ್ಯೂ, ಬಾಗಿಲು ಮುಚ್ಚುವ ಬಗ್ಗೆ ನಿಯಮ ಮತ್ತು ನಿಬಂಧನೆಗಳು ಸಹ ಇವೆ. ಬದರಿ ಕೇದಾರದಲ್ಲಿ ಭಕ್ತರು ದೇವರುಗಳನ್ನು ಆರು ತಿಂಗಳು ಪೂಜಿಸುತ್ತಾರೆ. ನವೆಂಬರ್ 18 ರಂದು ಬದರಿನಾಥ್ ಧಾಮದ ಬಾಗಿಲು ಮುಚ್ಚಲಾಗುತ್ತದೆ. ಬದರಿನಾಥ ಧಾಮದ ಬಾಗಿಲು ಮುಚ್ಚುವುದರೊಂದಿಗೆ ಈ ವರ್ಷಕ್ಕೆ ಚಾರ್ಧಾಮ್ ಯಾತ್ರೆ ಕೊನೆಗೊಳ್ಳಲಿದೆ.

ಇದರೊಂದಿಗೆ ಜಿಲ್ಲಾಡಳಿತ, ಪೊಲೀಸ್‌ ಆಡಳಿತ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ಸಿಂಗ್‌, ತೀರ್ಥ ಪುರೋಹಿತ್‌ ಸೊಸೈಟಿಯ ಪದಾಧಿಕಾರಿಗಳು ಹಾಜರಿದ್ದರು. ಬಾಗಿಲು ಮುಚ್ಚುವ ಸಂದರ್ಭ ದೇವಸ್ಥಾನವನ್ನು ಹೂವಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಸಾವಿರಾರು ಯಾತ್ರಿಕರು ಬಾಗಿಲು ಮುಚ್ಚುವುದನ್ನು ವೀಕ್ಷಿಸಿದರು. ಈ ವೇಳೆ ಜೈ ಶ್ರೀ ಕೇದಾರ, ಓಂ ನಮಃ ಶಿವಾಯ ಎಂಬ ಘೋಷಣೆಗಳೊಂದಿಗೆ ಸೇನೆಯ ಭಕ್ತಿ ಗೀತೆಗಳೊಂದಿಗೆ ಕೇದಾರ ಘಾಟಿ ಪ್ರತಿಧ್ವನಿಸಿತು. ಸಂಜೆ 6.30ಕ್ಕೆ ಸರಿಯಾಗಿ ಮಂದಿರದ ಗರ್ಭಗುಡಿಯಲ್ಲಿ ಸಮಾಧಿ ಪೂಜೆ ಸಂಪನ್ನಗಗೊಂಡಿತು. ಬಳಿಕ ಚಿಕ್ಕ ದೇಗುಲಗಳು, ದೇವಸ್ಥಾನದ ಒಳಗಡೆ ಇರುವ ಸಭಾ ಮಂಟಪವನ್ನು ಮುಚ್ಚಲಾಯಿತು. ಇದಾದ ಬಳಿಕ ಸರಿಯಾಗಿ ರಾತ್ರಿ 8.30ಕ್ಕೆ ಕೇದಾರನಾಥ ದೇಗುಲದ ದಕ್ಷಿಣ ದ್ವಾರವನ್ನು ಬಂದ್​ ಮಾಡಲಾಯಿತು.