ಮಲ್ಪೆ ಶ್ರೀರಾಮ ಮಿತ್ರ ಭಜನಾ ಮಂದಿರ ಶಿಲಾನ್ಯಾಸಕ್ಕೆ ಅಯೋಧ್ಯೆಯ ಮೃತ್ತಿಕೆ ಹಸ್ತಾಂತರ
ಅಯೋಧ್ಯಾ: ನವೆಂಬರ್ 20 ರಂದು ಮಲ್ಪೆ ಕುದ್ರುಕೆರೆಯ ಶ್ರೀರಾಮ ಮಿತ್ರ ಭಜನಾ ಮಂದಿರದ ನೂತನ ಮಂದಿರದ ಶಿಲಾನ್ಯಾಸಕ್ಕೆ ಹಿಂದೂ ಧರ್ಮದ ಪವಿತ್ರ ಕ್ಷೇತ್ರ ಅಯೋಧ್ಯೆ ಶ್ರೀ ರಾಮ ಮಂದಿರದ ಪವಿತ್ರ ಮೃತ್ತಿಕೆಯನ್ನು ಶ್ರೀ ರಾಮ ಮಂದಿರದ ಟ್ರಸ್ಟಿಗಳಾದ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಭಜನಾ ಮಂದಿರದ ಪ್ರತಿನಿಧಿ ಶಾಸಕ ಯಶ್ ಪಾಲ್ ಸುವರ್ಣ ಅವರಿಗೆ ಅಯೋಧ್ಯೆಯಲ್ಲಿ ಹಸ್ತಾಂತರಿಸಿದರು. ಮಲ್ಪೆ ಕುದ್ರುಕೆರೆಯಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರದ ರೀತಿಯಲ್ಲಿ ಶೀಘ್ರದಲ್ಲಿಯೇ ಭವ್ಯ ಭಜನಾ […]
ಉಸಿರುಗಟ್ಟಿಸುತ್ತಿದೆ ರಾಷ್ಟ್ರ ರಾಜಧಾನಿಯ ವಾತಾವರಣ: ಸತತ ನಾಲ್ಕನೇ ದಿನವೂ ಮಾಲಿನ್ಯದಿಂದ ಜನತೆ ಕಂಗಾಲು
ನವದೆಹಲಿ: ದೆಹಲಿಯಲ್ಲಿ ದಟ್ಟವಾದ ಮಬ್ಬು ಆವರಿಸಿದ್ದು, ಗಾಳಿಯ ಗುಣಮಟ್ಟವು ‘ತೀವ್ರ’ ವಿಭಾಗದಲ್ಲಿ ಉಳಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಸೋಮವಾರದ ಅಂಕಿಅಂಶಗಳನ್ನು ತೋರಿಸಿದೆ. ಇದು ಸತತ ನಾಲ್ಕನೇ ದಿನವಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ‘ತೀವ್ರ’ ಗಾಳಿಯ ಗುಣಮಟ್ಟ ದಾಖಲಾಗಿದೆ. CPCB ಡೇಟಾ ಪ್ರಕಾರ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 437 ದಾಖಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿನ ಮಾಲಿನ್ಯ ಬಿಕ್ಕಟ್ಟಿನ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. […]
ಆತಿಥೇಯ ಜಪಾನ್ ಅನ್ನು ಸೋಲಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತೀಯ ಮಹಿಳಾ ಹಾಕಿ ತಂಡ
ನವದೆಹಲಿ: ಭಾರತೀಯ ಮಹಿಳಾ ಹಾಕಿ ತಂಡವು ಜಪಾನ್ ಅನ್ನು ಸೋಲಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾನುವಾರ ರಾಂಚಿಯಲ್ಲಿ ನಡೆದ ಫೈನಲ್‌ನಲ್ಲಿ ಆತಿಥೇಯರು 4-0 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿದರು. ಇದಕ್ಕೂ ಮುನ್ನ 2016 ರಲ್ಲಿ ಸಿಂಗಾಪುರದಲ್ಲಿ ಗೆದ್ದಿದ್ದ ಭಾರತ ಎರಡನೇ ಬಾರಿಗೆ ಕಾಂಟಿನೆಂಟಲ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಜನ್ನೆಕೆ ಸ್ಕೋಪ್‌ಮನ್ ತರಬೇತುದಾರ ತಂಡವು ಪ್ರೊ ಲೀಗ್‌ಗೆ ಅರ್ಹತೆ ಪಡೆಯಲು ವೆಲೆನ್ಸಿಯಾದಲ್ಲಿ ನಡೆದ ಎಫ್‌ಐಹೆಚ್ ನೇಷನ್ಸ್ ಕಪ್ ಅನ್ನು ಗೆದ್ದ ಬಳಿಕ, ಡಿಸೆಂಬರ್ 2022 ರ ನಂತರ ಇದು […]
ಚಿಟ್ಟಾಣಿ ಸಂಸ್ಮರಣಾ ಯಕ್ಷಗಾನ ಸಪ್ತಾಹ
ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಮತ್ತು ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ ಇವರ ಸಹಯೋಗದೊಂದಿಗೆ ಚಿಟ್ಟಾಣಿ ಸಂಸ್ಮರಣಾ ಯಕ್ಷಗಾನ ಸಪ್ತಾಹ ಕಾರ್ಯಮದ ಉದ್ಘಾಟನೆಯನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಯಕ್ಷಗಾನವು ನಮ್ಮ ನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಮತ್ತು ಕಲೆಯನ್ನು ಅರಳಿಸುವ ಹಾಗೂ ನಮ್ಮ ಇಂದ್ರಿಯಗಳನ್ನು ಜಾಗೃತಗೊಳಿಸುವ ಒಂದು ಪ್ರಕಾರವಾಗಿದೆ ಅದನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿ ಎಂದು ಅನುಗ್ರಹಿಸಿದರು. ಸಮಾರಂಭದಲ್ಲಿ […]