ನ.1 ರಿಂದ ಮೂರು ದಿನಗಳ ಕಾಲ ರಾಜ್ಯಮಟ್ಟದ ಕ್ರೀಡಾಕೂಟ

ಉಡುಪಿ: ಜಿಲ್ಲಾಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸೇಂಟ್ ಸಿಸಿಲಿ ಶಾಲೆ ಸಹಯೋಗದಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ಉಡುಪಿಯ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಿದ್ದು, 35 ಶೈಕ್ಷಣಿಕ ಜಿಲ್ಲೆಗಳಿಂದ 14 ವರ್ಷದೊಳಗಿನ 1800 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕ ಯಶಪಾಲ್ ಸುವರ್ಣ ತಿಳಿಸಿದರು. ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಅಂತರಾಷ್ಟ್ರೀಯ ಅಥ್ಲೀಟ್ ಮಿಜೋ ಚಾಕೋ ಕುರಿಯನ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ […]

ಕರಡು ಮತದಾರರ ಪಟ್ಟಿ ವಿತರಣೆ 

ಉಡುಪಿ: ಚುನಾವಣಾ ಆಯೋಗವು ಸಿದ್ಧಪಡಿಸಿದ ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಮುಖಂಡರಿಗೆ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಹಬೀಬ್ ಆಲಿ, ಬಿ.ಜೆ.ಪಿ ಮುಖಂಡ ಚಂದ್ರಶೇಖರ ಪ್ರಭು, ಜೆ.ಡಿ.ಎಸ್ ಮುಖಂಡ ಜಯರಾಮ್ ಆಚಾರ್ಯ, ಸಿ.ಪಿ.ಐ.ಎಂ ನ ಮೋಹನ್ ಉಪಸ್ಥಿತರಿದ್ದರು.

ಕಾರ್ಕಳ: ಶ್ರೀ ದೇವಕೀ ಕೃಷ್ಣ ರಾವಳನಾಥ ದೇವಸ್ಥಾನದಲ್ಲಿ ಚಂಡಿಕಾಯಾಗ

ಕಾರ್ಕಳ: ತೆಳ್ಳಾರ್ ರಸ್ತೆ ಶ್ರೀ ದೇವಕೀ ಕೃಷ್ಣ ರಾವಳನಾಥ ದೇವಸ್ಥಾನದಲ್ಲಿ ನವರಾತ್ರಿಯ ಪೌರ್ಣಿಮೆಯಂದು ಶ್ರೀ ದೇವರ ಸನ್ನಿಧಿಯಲ್ಲಿ ಚಂಡಿಕಾ ಯಾಗ ನೆರವೇರಿತು. ಧಾರ್ಮಿಕ ಪೂಜಾ ವಿಧಾನಗಳನ್ನು ವೇ. ಮೂ ಸಂದೀಪ್ ಭಟ್ ನೇತೃತ್ವದಲ್ಲಿ ಅರ್ಚಕ ವೃಂದದವರು ನೆಡೆಸಿಕೊಟ್ಟರು. ಪೂಜಾ ಕಾರ್ಯದಲ್ಲಿ ಅನಿತಾ ಮಂಜುನಾಥ ರಾವ್ ದಂಪತಿಗಳು ಸಹಕರಿಸಿದರು. ದೇವಳದ ಅರ್ಚಕ ಗಣಪತಿ ಭಟ್ ಶ್ರೀ ರಾವಳನಾಥ ದೇವರ ಸನ್ನಿಧಿಯಲ್ಲಿ ಸಾನಿಧ್ಯ ಹವನ, ದ್ವಾದಶ ಕಲಶಾಭಿಷೇಕ, ಪಂಚಾಮೃತಾಭಿಷೇಕ ನೆಡೆಸಿ ಬಳಿಕ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಚಂಡಿಕಾ ಯಾಗದ ಪೂರ್ಣಾಹುತಿ […]

ಹಿರಿಯಡಕ: ಡಿ.9 ರಂದು ಎಂಕುಲ್ ಫ್ರೆಂಡ್ಸ್ ಕಲಾವಿದರು ಆಶ್ರಯದಲ್ಲಿ ಸತತ 5ನೇ ವರ್ಷದ ವಾಲಿಬಾಲ್ ಪಂದ್ಯಾಟ

ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ ಇವರ ಆಶ್ರಯದಲ್ಲಿ ಸತತ 5ನೇ ವರ್ಷದ ಬಾಲಕಿಯರ ಹಾಗೂ ಮಹಿಳೆಯರ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಅಂಡರ್ – 23 ವಯೋಮಿತಿಯ ಬಾಲಕರ ಹಾಗೂ ವಯೋಮಿತಿ 40 ಮೀರಿದ ಲೆಜೆಂಡ್ಸ್ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಕೂಟವು ಡಿಸೆಂಬರ್ 9 ಶನಿವಾರ ಸಂಜೆ ಗಂಟೆ 4.00 ರಿಂದ ಹಿರಿಯಡಕ ಕೋಟ್ನಕಟ್ಟೆ ಫ್ರೆಂಡ್ಸ್ ಮೈದಾನ  ಇಲ್ಲಿ ಜರುಗಲಿರುವುದು. ಎಂಕುಲ್ ಫ್ರೆಂಡ್ಸ್ ಟ್ರೋಫಿ 2023-24 ಅಂಡರ್- 23 (ಬಾಲಕರು) ಪ್ರಥಮ 11,111/- […]

ದೆಹಲಿ ಮದ್ಯ ನೀತಿ ಪ್ರಕರಣ: ನ.2 ರಂದು ವಿಚಾರಣೆಗೆ ಹಾಜರಾಗುವಂತೆ ಅರವಿಂದ್ ಕೇಜ್ರಿವಾಲ್ ಗೆ ಇಡಿ ಸಮನ್ಸ್

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ED) ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕರೆಸಿದೆ. ನವೆಂಬರ್ 2 ರಂದು (ಗುರುವಾರ) ತನ್ನ ಮುಂದೆ ಹಾಜರಾಗುವಂತೆ ಹಣಕಾಸು ನಿಗಾ ಸಂಸ್ಥೆ ಅರವಿಂದ್ ಕೇಜ್ರಿವಾಲ್‌ಗೆ ತಿಳಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಅಕ್ಟೋಬರ್ 4 ರಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ […]