ಕಾರ್ಕಳ: ಶ್ರೀ ದೇವಕೀ ಕೃಷ್ಣ ರಾವಳನಾಥ ದೇವಸ್ಥಾನದಲ್ಲಿ ಚಂಡಿಕಾಯಾಗ

ಕಾರ್ಕಳ: ತೆಳ್ಳಾರ್ ರಸ್ತೆ ಶ್ರೀ ದೇವಕೀ ಕೃಷ್ಣ ರಾವಳನಾಥ ದೇವಸ್ಥಾನದಲ್ಲಿ ನವರಾತ್ರಿಯ ಪೌರ್ಣಿಮೆಯಂದು ಶ್ರೀ ದೇವರ ಸನ್ನಿಧಿಯಲ್ಲಿ ಚಂಡಿಕಾ ಯಾಗ ನೆರವೇರಿತು. ಧಾರ್ಮಿಕ ಪೂಜಾ ವಿಧಾನಗಳನ್ನು ವೇ. ಮೂ ಸಂದೀಪ್ ಭಟ್ ನೇತೃತ್ವದಲ್ಲಿ ಅರ್ಚಕ ವೃಂದದವರು ನೆಡೆಸಿಕೊಟ್ಟರು. ಪೂಜಾ ಕಾರ್ಯದಲ್ಲಿ ಅನಿತಾ ಮಂಜುನಾಥ ರಾವ್ ದಂಪತಿಗಳು ಸಹಕರಿಸಿದರು.

ದೇವಳದ ಅರ್ಚಕ ಗಣಪತಿ ಭಟ್ ಶ್ರೀ ರಾವಳನಾಥ ದೇವರ ಸನ್ನಿಧಿಯಲ್ಲಿ ಸಾನಿಧ್ಯ ಹವನ, ದ್ವಾದಶ ಕಲಶಾಭಿಷೇಕ, ಪಂಚಾಮೃತಾಭಿಷೇಕ ನೆಡೆಸಿ ಬಳಿಕ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಚಂಡಿಕಾ ಯಾಗದ ಪೂರ್ಣಾಹುತಿ ಬಳಿಕ ಕುಮಾರಿ ಪೂಜೆ, ಸುಹಾಸಿನಿ ಪೂಜೆ, ದಂಪತಿ ಪೂಜೆ, ಶ್ರೀ ದೇವರ ಸನ್ನಿಧಿಯಾದ ರಾವಳನಾಥ, ದೇವಕೀ ಕೃಷ್ಣ , ಗಣಪತಿ ದೇವರಿಗೆ ಮಹಾ ಪೂಜೆ ಬಳಿಕ ಸಮಾರಾಧನೆ, ರಾತ್ರಿ ರಂಗ ಪೂಜೆ ,ದೀಪಾರಾಧನೆ, ಹೂವಿನ ಪೂಜೆ, ಪಲ್ಲಕಿ ಉತ್ಸವ ನೆಡೆಯಿತು.

ದೇವಳದ ಆಡಳಿತ ಮಂಡಳಿಯ ಟಿ. ಸುಧಾಕರ ಪ್ರಭು , ಎನ್. ಗಣೇಶ ಕಾಮತ್ , ಆರ್. ವಸಂತ ಪ್ರಭು, ಎಂ. ರಾಮರಾಯ ಕಾಮತ್ , ಎನ್. ವಿನೋದ ಪ್ರಭು ಹಾಗೂ ಹುಣ್ಣಿಮೆ ಸೇವಾದಾರರು ವಿವೇಕ ರಾಧಾ ಕೃಷ್ಣ ಪ್ರಭು, ನಾರಾಯಣ ಕಾಮತ್, ದೇವದಾಸ್ ಕಾಮತ್, ಜಿ ಎಸ್ ಬಿ ಯುವಕ – ಮಹಿಳಾ ಮಂಡಳಿಯ ಸದಸ್ಯರು, ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.