ಶ್ರೀ ಸೋಮನಾಥ ಟ್ರಸ್ಟ್ ನ ಅಧ್ಯಕ್ಷರಾಗಿ ಪ್ರಧಾನಿ ಮೋದಿ ಮರು ಆಯ್ಕೆ: ಅಧಿಕಾರಾವಧಿ ಐದು ವರ್ಷಗಳಿಗೆ ಏರಿಕೆ
ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೆರಾವಲ್ ಬಳಿಯ ಐತಿಹಾಸಕ ಮಾನ್ಯತೆ ಇರುವ ಸೋಮನಾಥ ದೇವಾಲಯದ ಮಾಲೀಕತ್ವವನ್ನು ಹೊಂದಿರುವ ಧಾರ್ಮಿಕ ಚಾರಿಟೇಬಲ್ ಟ್ರಸ್ಟ್ ಆದ ಶ್ರೀ ಸೋಮನಾಥ ಟ್ರಸ್ಟ್ (ಎಸ್‌ಎಸ್‌ಟಿ) ನ ಅಧ್ಯಕ್ಷರಾಗಿ ಐದು ವರ್ಷಗಳ ಕಾಲದವರೆಗೆ ಆಯ್ಕೆಯಾಗಿದ್ದಾರೆ. ಗುಜರಾತ್‌ನ ಚಾರಿಟಿ ಕಮಿಷನರ್ ಇತ್ತೀಚೆಗೆ ಟ್ರಸ್ಟ್‌ನ ಕರಾರು ಪತ್ರಕ್ಕೆ ತಿದ್ದುಪಡಿಯನ್ನು ಅನುಮೋದಿಸಿದ ನಂತರ, ಎಸ್‌ಎಸ್‌ಟಿ ಅಧ್ಯಕ್ಷರ ಅಧಿಕಾರಾವಧಿಯು ಒಂದು ವರ್ಷಕ್ಕೆ ಬದಲಾಗಿ ಐದು ವರ್ಷಗಳಾಗಿರುತ್ತದೆ ಎಂದು ಟ್ರಸ್ಟಿಗಳು ತಿಳಿಸಿದ್ದಾರೆ. ಸೋಮವಾರ ಗಾಂಧಿನಗರದ ರಾಜಭವನದಲ್ಲಿ ಕರೆಯಲಾದ ಎಸ್‌ಎಸ್‌ಟಿಯ ಟ್ರಸ್ಟಿಗಳ […]
81.5 ಕೋಟಿ ಭಾರತೀಯರ ದತ್ತಾಂಶ ಡಾರ್ಕ್ ವೆಬ್ ನಲ್ಲಿ ಮಾರಾಟ? ಅಮೇರಿಕಾ ಏಜೆನ್ಸಿಯಿಂದ ಬಹಿರಂಗ
ನವದೆಹಲಿ: 81.5 ಕೋಟಿ ಭಾರತೀಯರಿಗೆ ಸೇರಿದ ಸೂಕ್ಷ್ಮ ಮಾಹಿತಿಯು ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದ್ದು ಇದು ಭಾರತದ ಇತಿಹಾಸದಲ್ಲಿ ಅತಿದೊಡ್ಡ ಡೇಟಾ ಉಲ್ಲಂಘನೆಯಾಗಿದೆ. ಡಾರ್ಕ್ ವೆಬ್‌ನಲ್ಲಿ ಕದ್ದ ಮಾಹಿತಿಯನ್ನು ಜಾಹೀರಾತು ಮಾಡಿದ ‘pwn0001’ ಎಂಬ ಹ್ಯಾಕರ್ ಸೋರಿಕೆಯನ್ನು ಗಮನಕ್ಕೆ ತಂದಿದೆ. ಕೋವಿಡ್-19 ಪರೀಕ್ಷೆಯ ಸಮಯದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸಂಗ್ರಹಿಸಿದ ಮಾಹಿತಿಯಿಂದ ಈ ಡೇಟಾ ಕದಿಯಲಾಗಿದೆ ಎಂದು ನಂಬಲಾಗಿದೆ. ಆದಾಗ್ಯೂ, ಸೋರಿಕೆಯ ಕೇಂದ್ರ ಬಿಂದು ಇನ್ನೂ ತಿಳಿದಿಲ್ಲ. ಹ್ಯಾಕರ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಕದ್ದ […]
ಕರಾವಳಿಯ ಚಿನ್ನಾಭರಣ ಮಳಿಗೆಯಲ್ಲಿ ಐಟಿ ಸಂಸ್ಥೆ ಅಧಿಕಾರಿಗಳಿಂದ ತನಿಖೆ
ಉಡುಪಿ/ಮಂಗಳೂರು: ಸೋಮವಾರದಂದು ಕರ್ನಾಟಕದ 75 ಕಡೆಗಳಲ್ಲಿ ಲೋಕಾಯುಕ್ತ ದಾಳಿಯ ಬೆನ್ನಲ್ಲೇ ಉಡುಪಿ ಹಾಗೂ ಮಂಗಳೂರಿನ ಪ್ರಸಿದ್ದ ಚಿನ್ನಾಭರಣ ಮಳಿಗೆಯೊಂದರಲ್ಲಿ ಐಟಿ ತನಿಖೆ ನಡೆದಿದೆ. ಉಡುಪಿ, ಮಂಗಳೂರು ಕಾರ್ಕಳ, ಕುಂದಾಪುರ, ಪಡುಬಿದ್ರಿ, ಬ್ರಹ್ಮಾವರ, ಪುತ್ತೂರು ಸೇರಿದಂತೆ ಹಲವೆಡೆ ಕಾರ್ಯನಿರ್ವಹಿಸುತ್ತಿರುವ ಚಿನ್ನದ ಮಳಿಗೆಗಳ ಆದಾಯ ತೆರಿಗೆ ದಾಖಲೆಗಳ ಪರಿಶೀಲನೆ ನಡೆದಿದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಎಲ್ಲಾ ಕಡೆಯ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿದಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ವಿರೂಪಾಕ್ಷ ದೇವರಮನೆ ವಿರಚಿತ ಕೃತಿಗಳ ಲೋಕಾರ್ಪಣೆ
ಉಡುಪಿ: ವಿರೂಪಾಕ್ಷ ದೇವರಮನೆ ಅವರ ‘ಡಿಡ್ ಯು ಟಾಕ್ ಟು ಯುವರ್ ಚೈಲ್ಡ್ ಟುಡೇ’ ಹಾಗೂ ‘ಕಣ್ಣಿಗೆ ಕಾಣುವ ದೇವರು’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಿತು. ಹಿರಿಯ ತೆಲುಗು ಸಾಹಿತಿ ಯಂಡಮೂರಿ ವೀರೇಂದ್ರನಾಥ್ ‘ಡಿಡ್ ಯು ಟಾಕ್ ಟು ಯುವರ್ ಚೈಲ್ಡ್ ಟುಡೇ’ ಹಾಗೂ ಮಾಸ್ಟರ್ ಅಫಾನ್ ಕುಟ್ಟಿ ‘ಕಣ್ಣಿಗೆ ಕಾಣುವ ದೇವರು’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಯಂಡಮೂರಿ ವೀರೇಂದ್ರನಾಥ್ ಅವರು ‘ಪೋಷಕರು ಆರು ಬಗೆ; ನೀವ್ಯಾರು?’ ಕುರಿತು ವಿಶೇಷ ಉಪನ್ಯಾಸ ನೀಡಿದರು. […]
ಹಿರಿಯ ಪತ್ರಕರ್ತ, ಸಾಹಿತಿ ಶೇಖರ ಅಜೆಕಾರು ಹೃದಯಾಘಾತದಿಂದ ನಿಧನ
ಕಾರ್ಕಳ: ಹಿರಿಯ ಪತ್ರಕರ್ತ, ಸಾಹಿತಿ ಶೇಖರ ಅಜೆಕಾರು (54) ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಕರ್ನಾಟಕ ಮಲ್ಲ, ಜನವಾಹಿನಿ, ಉಷಾಕಿರಣ, ಪ್ರಜಾವಾಣಿ, ಕನ್ನಡಪ್ರಭ, ಡೈಜಿ ವರ್ಲ್ಡ್, ಕುಂದಪ್ರಭ ಪತ್ರಿಕೆಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು, ಕಂಬಳ ಸೇರಿದಂತೆ ಹಲವು ವಿಚಾರಗಳ ಕುರಿತು ಸುಮಾರು 22 ಪುಸ್ತಕಗಳನ್ನು ಬರೆದಿದ್ದಾರೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸ್ಥಾಪಕರಾಗಿರುವ ಇವರು, ಸಾಧಕರಿಗೆ, ಸಾಹಿತಿಗಳಿಗೆ ಮನೆಯಂಗಳದಲ್ಲಿ ಸನ್ಮಾನ ಮಾಡುವ […]