ಶ್ರೀ ಸೋಮನಾಥ ಟ್ರಸ್ಟ್ ನ ಅಧ್ಯಕ್ಷರಾಗಿ ಪ್ರಧಾನಿ ಮೋದಿ ಮರು ಆಯ್ಕೆ: ಅಧಿಕಾರಾವಧಿ ಐದು ವರ್ಷಗಳಿಗೆ ಏರಿಕೆ

ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೆರಾವಲ್ ಬಳಿಯ ಐತಿಹಾಸಕ ಮಾನ್ಯತೆ ಇರುವ ಸೋಮನಾಥ ದೇವಾಲಯದ ಮಾಲೀಕತ್ವವನ್ನು ಹೊಂದಿರುವ ಧಾರ್ಮಿಕ ಚಾರಿಟೇಬಲ್ ಟ್ರಸ್ಟ್ ಆದ ಶ್ರೀ ಸೋಮನಾಥ ಟ್ರಸ್ಟ್ (ಎಸ್‌ಎಸ್‌ಟಿ) ನ ಅಧ್ಯಕ್ಷರಾಗಿ ಐದು ವರ್ಷಗಳ ಕಾಲದವರೆಗೆ ಆಯ್ಕೆಯಾಗಿದ್ದಾರೆ.

ಗುಜರಾತ್‌ನ ಚಾರಿಟಿ ಕಮಿಷನರ್ ಇತ್ತೀಚೆಗೆ ಟ್ರಸ್ಟ್‌ನ ಕರಾರು ಪತ್ರಕ್ಕೆ ತಿದ್ದುಪಡಿಯನ್ನು ಅನುಮೋದಿಸಿದ ನಂತರ, ಎಸ್‌ಎಸ್‌ಟಿ ಅಧ್ಯಕ್ಷರ ಅಧಿಕಾರಾವಧಿಯು ಒಂದು ವರ್ಷಕ್ಕೆ ಬದಲಾಗಿ ಐದು ವರ್ಷಗಳಾಗಿರುತ್ತದೆ ಎಂದು ಟ್ರಸ್ಟಿಗಳು ತಿಳಿಸಿದ್ದಾರೆ.

ಸೋಮವಾರ ಗಾಂಧಿನಗರದ ರಾಜಭವನದಲ್ಲಿ ಕರೆಯಲಾದ ಎಸ್‌ಎಸ್‌ಟಿಯ ಟ್ರಸ್ಟಿಗಳ ಮಂಡಳಿಯ 122 ನೇ ಸಭೆಯಲ್ಲಿ, ಮಂಡಳಿಯ ಹಾಲಿ ಅಧ್ಯಕ್ಷ ಪಿಎಂ ಮೋದಿ ಅವರು ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಎಸ್‌ಎಸ್‌ಟಿ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2020 ರಲ್ಲಿ ಆಗಿನ ಹಾಲಿ ಅಧ್ಯಕ್ಷ ಕೇಶುಭಾಯಿ ಪಟೇಲ್ ಅವರ ನಿಧನದಿಂದಾಗಿ ಹುದ್ದೆ ಖಾಲಿಯಾದ ನಂತರ ಅವರು 2021 ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಗುಜರಾತ್ ಮಾಜಿ ಸಿಎಂ ಕೇಶುಭಾಯ್ 2004 ರಿಂದ ಎಸ್‌ಎಸ್‌ಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಟ್ರಸ್ಟ್ ಅನ್ನು ರಾಜಕಾರಣಿಗಳು ಮುನ್ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೇಂದ್ರವು ಎಸ್‌ಎಸ್‌ಟಿಯ ಟ್ರಸ್ಟಿ ಮಂಡಳಿಯಲ್ಲಿ ತಲಾ ನಾಲ್ಕು ಟ್ರಸ್ಟಿಗಳನ್ನು ನಾಮನಿರ್ದೇಶನ ಮಾಡಬಹುದು. ಪ್ರಸ್ತುತ, ಆರು ಟ್ರಸ್ಟಿಗಳಲ್ಲಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹಿರಿಯ ಎಲ್‌ಕೆ ಅಡ್ವಾಣಿ ಸೇರಿದ್ದಾರೆ.

ಲಾಹೇರಿ, ಸಂಸ್ಕೃತದ ನಿವೃತ್ತ ಪ್ರಾಧ್ಯಾಪಕ ಜೆಡಿ ಪರ್ಮಾರ್ ಮತ್ತು ಅಂಬುಜಾ ನಿಯೋಟಿಯಾ ಗ್ರೂಪ್‌ನ ಅಧ್ಯಕ್ಷ ಕೈಗಾರಿಕೋದ್ಯಮಿ ಹರ್ಷವರ್ಧನ್ ನಿಯೋಟಿಯಾ ಇತರ ಟ್ರಸ್ಟಿಗಳು. ಎರಡು ಹುದ್ದೆಗಳು ಖಾಲಿ ಇವೆ. ಮೊರಾರ್ಜಿ ದೇಸಾಯಿ ನಂತರ ಟ್ರಸ್ಟ್‌ನ ಮುಖ್ಯಸ್ಥರಾಗಿರುವ ಎರಡನೇ ಪ್ರಧಾನಿ ಮೋದಿಯವರಾಗಿದ್ದಾರೆ.