ಕೇರಳದ ಕಲಮಸ್ಸೆರಿಯ ಕ್ರೈಸ್ತ ಪ್ರಾರ್ಥನಾ ಸಭೆಯಲ್ಲಿ ಸ್ಪೋಟ; ಒಂದು ಸಾವು ಹಲವರಿಗೆ ಗಾಯ
ಎರ್ನಾಕುಲಂ: ಇಂದು ಬೆಳಗ್ಗೆ ಕೇರಳದ ಎರ್ನಾಕುಲಂನ ಕಲಮಸ್ಸೆರಿ ಪ್ರದೇಶದಲ್ಲಿ ಯೆಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯೊಂದರಲ್ಲಿ ಅನೇಕ ಸ್ಫೋಟಗಳು ಸಂಭವಿಸಿದ ನಂತರ ಒಬ್ಬರು ಸಾವನ್ನಪ್ಪಿದ್ದು ಮತ್ತು ಹಲವರು ಗಾಯಗೊಂಡಿದ್ದಾರೆ. #WATCH | Kerala LoP and state Congress President VD Satheesan says, "I was told that there were two blasts and there was a fire. First, there was a major blast. The second one was minor. […]
‘ಫ್ರೆಂಡ್ಸ್’ನ ಚಾಂಡ್ಲರ್ ಪಾತ್ರಧಾರಿ ಮ್ಯಾಥ್ಯೂ ಪೆರ್ರಿ ನಿಧನ
ಲಾಸ್ ಎಂಜಲೀಸ್: ಪ್ರಖ್ಯಾತ ಕಾಮಿಡಿ ಸೀರೀಸ್ ‘ಫ್ರೆಂಡ್ಸ್’ನ ಚಾಂಡ್ಲರ್ ಪಾತ್ರಧಾರಿ ಮ್ಯಾಥ್ಯೂ ಪೆರ್ರಿ ಶನಿವಾರ ಆಕಸ್ಮಿಕವಾಗಿ ಜಕುಝಿಯಲ್ಲಿ ಮುಳುಗಿ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ ಎರಡು ಗಂಟೆಗಳ ಪಿಕಲ್ ಬಾಲ್ ಗೇಮ್ ಆಟಗಳ ಬಳಿಕ ತನ್ನ ಲಾಸ್ ಎಂಜಲೀಸ್ ನ ಮನೆಗೆ ಹಿಂದಿರುಗಿದ ನಂತರ ಮ್ಯಾಥ್ಯೂ ನಿಧನರಾಗಿದ್ದಾರೆ. ಮಾಥ್ಯೂ ತನ್ನ ಸಹಾಯಕನನ್ನು ಕೆಲಸದ ನಿಮಿತ್ತ ಹೊರಗೆ ಕಳುಹಿಸಿದ್ದರು. ಸಹಾಯಕ ಸುಮಾರು ಎರಡು ಗಂಟೆಗಳ ನಂತರ ಹಿಂತಿರುಗಿದಾಗ ಜಕುಝಿಯಲ್ಲಿ ಪೆರ್ರಿ ಪ್ರತಿಕ್ರಿಯಿಸದಿರುವುದನ್ನು ಕಂಡು ತುರ್ತು […]
ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ ಎಸ್ ಬಿ ಯುವಕ ಮಂಡಳಿಯ 52 ನೇ ವಾರ್ಷಿಕೋತ್ಸವ
ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ ಎಸ್ ಬಿ ಯುವಕ ಮಂಡಳಿಯ 52 ನೇ ವಾರ್ಷಿಕೋತ್ಸವ ಸೋಮವಾರ ಜರಗಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಮಾಹೆಯ ಹಿರಿಯ ಸಹಾಯಕ ಪ್ರಾಧ್ಯಾಪಕ ರವೀಂದ್ರ ಶೆಣೈ ಮಣಿಪಾಲ್ ಮಾತನಾಡುತ್ತಾ, ಶಿಕ್ಷಣ ಬೇರೆ ಸಂಸ್ಕಾರ ಬೇರೆ. ಯುವ ಜನತೆಗೆ ಸಂಸ್ಕಾರ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ವೈದಿಕರು, ಸಮಾಜ ಬಾಂಧವರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಜೊತೆಯಾಗಿ ಸಮಾಜ ಸೇವೆ […]
ಬ್ಯಾಂಕ್‌ಆಫ್ ಬರೋಡಾದಿಂದ ಬಾಬ್ ಲೈಟ್ ಉಳಿತಾಯ ಖಾತೆಯ ಪರಿಚಯ: ಜೀವಮಾನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ
ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ “ಬಾಬ್ ಕಿ ಸಂಗ್, ತ್ಯೋಹಾರ್ ಕಿ ಉಮಂಗ್” ಹಬ್ಬದ ಅಂಗವಾಗಿ ಬಾಬ್ ಲೈಟ್‌ಉಳಿತಾಯ ಖಾತೆ–ಜೀವಮಾನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯನ್ನು ಪರಿಚಯಿಸಿದೆ. ಗ್ರಾಹಕರಿಗೆ ಯಾವುದೇ ಕನಿಷ್ಟ ಬ್ಯಾಲೆನ್ಸ್ ಅಗತ್ಯವಿಲ್ಲದ ಬ್ಯಾಂಕಿಂಗ್ ಅನುಭವವನ್ನು ನೀಡುತ್ತದೆ. ಇದಲ್ಲದೆ, ವಿವಿಧ ಗ್ರಾಹಕರ ವಿಭಾಗಗಳ ಅಗತ್ಯತೆಗಳನ್ನು ಪೂರೈಸಲು, ಖಾತೆಯಲ್ಲಿ ನಾಮಮಾತ್ರ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ ಅನ್ನು ನಿರ್ವಹಿಸುವ ಮೂಲಕ ಬಾಬ್ ಲೈಟ್ ಖಾತೆಯು ಜೀವಮಾನದ ಉಚಿತ ರುಪೇ ಪ್ಲಾಟಿನಂ […]
ಮಹೀಂದ್ರಾ ಶ್ರೇಣಿಯ ಯಾವುದೇ ಕಾರನ್ನು ಆಯ್ಕೆ ಮಾಡುವ ಆಹ್ವಾನ; ಏಷ್ಯನ್ ಪ್ಯಾರಾ ಗೇಮ್ಸ್ ಚಿನ್ನದ ಪದಕ ವಿಜೇತೆ ಶೀತಲ್ ದೇವಿಗೆ ಆನಂದ್ ಮಹೀಂದ್ರಾ ಬಹುಮಾನ
ನವದೆಹಲಿ: ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, ಜೀವನದಲ್ಲಿ ಅಸಾಧಾರಣ ಪ್ರತಿಭೆ ಮತ್ತು ಪರಿಶ್ರಮವನ್ನು ಪ್ರದರ್ಶಿಸುವ ವ್ಯಕ್ತಿಗಳ ಬೆಂಬಲಕ್ಕೆ ನಿಂತು ಹೆಸರುವಾಸಿಯಾಗಿದ್ದಾರೆ. ಇತ್ತೀಚಿನ ಉದಾಹರಣೆಯಲ್ಲಿ, 4 ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಸ್ಪರ್ಧಿಸಿದ ಮೊದಲ ತೋಳುರಹಿತ ಮಹಿಳಾ ಬಿಲ್ಲುಗಾರ್ತಿ, ಭಾರತಕ್ಕೆ ಚಿನ್ನದ ಪದಕಗಳನ್ನು ಭದ್ರಪಡಿಸಿದ ಗಮನಾರ್ಹ ಮತ್ತು ಅಸಾಮಾನ್ಯ ಪ್ರತಿಭೆ ಶೀತಲ್ ದೇವಿ ಅವರಿಗೆ ವ್ಯಾಪಾರ ಉದ್ಯಮಿ ತಮ್ಮ ತುಂಬು ಹೃದಯದ ಶುಭಾಶಯಗಳನ್ನು ತಿಳಿಸುತ್ತಾ ತಮ್ಮ ಕಂಪನಿಯ ಕಾರುಗಳಲ್ಲಿ ಆಕೆಗೆ ಇಷ್ಟಬಂದ ಯಾವುದೇ ಕಾರನ್ನು ಆಯ್ಕೆ ಮಾಡುವಂತೆ […]