ದೊಡ್ಡಣಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಿರಂತರ ದೀಪಾರಾಧನೆ ಸಹಿತ ರಂಗೋತ್ಸವ
ದೊಡ್ಡಣಗುಡ್ಡೆ: ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಧರ್ಮದರ್ಶಿ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ವೇಮೂ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನಿರಂತರವಾಗಿ ದೀಪಾರಾಧನೆ ಸಹಿತ ರಂಗಪೂಜಾ ಮಹೋತ್ಸವ ನೆರವೇರುತ್ತಿದೆ. ಅ. 23ರಂದು ಕಾಸರಗೋಡಿನ ದುರ್ಗಾ ನಾಟ್ಯಾಲಯದ ಕಲಾವಿದರಿಂದ ಕ್ಷೇತ್ರದ ಆವರಣದಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ನೃತ್ಯ ಸಂಗೀತ ನೆರವೇರಲಿದೆ. ಅ. 24ರಂದು ನಡೆಯಲಿರುವ ಮಹಾನ್ ಯಾಗದ ಪ್ರಯುಕ್ತ ನಡೆಯಲಿರುವ ಅನ್ನಸಂತರ್ಪಣೆಗೆ ಹಸುರು ಹೊರೆಕಾಣಿಕೆ ನೀಡಲಿಚ್ಛಿಸುವವರು ಅ. 23ರ ಸಂಜೆಯ ಒಳಗೆ ನೀಡಲು ಅವಕಾಶವಿದೆ […]
ಮಹಿಷಾಸುರ ಮರ್ದಿನಿ ರೂಪ ತಾಳಿದ ಶ್ರೀಕೃಷ್ಣ
ಉಡುಪಿ: ನವರಾತ್ರಿಯ ಪ್ರಯುಕ್ತ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಸ್ವಾಮೀಜಿ ಶ್ರೀಕೃಷ್ಣನಿಗೆ “ಮಹಿಷಾಸುರ ಮರ್ದಿನಿ”ಯ ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು.