ಮಣಿಪಾಲ ಕೆಎಂಸಿಯ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕೇಂದ್ರಕ್ಕೆ ಜರ್ಮನಿಯ ಮರ್ಕ್‌ ಫೌಂಡೇಶನ್‌ನಿಂದ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಮಾನ್ಯತೆ

ಮುಂಬೈ/ಮಣಿಪಾಲ: ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸುಧಾರಿತ ಜಾಗತಿಕ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಶ್ರಮಿಸುತ್ತಿರುವ ಪ್ರತಿಷ್ಠಿತ ಮರ್ಕ್‌ ಫೌಂಡೇಶನ್‌ ಸಂಸ್ಥೆಯು ಮಣಿಪಾಲ ಕೆಎಂಸಿಯ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕೇಂದ್ರ [ಕ್ಲಿನಿಕಲ್‌ ಎಂಬ್ರಿಯಾಲಜಿ ಸೆಂಟರ್‌] ಕ್ಕೆ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಮಾನ್ಯತೆ ನೀಡಿದೆ. ಸೌಲಭ್ಯವಂಚಿತ ಸಮುದಾಯಗಳಿಗೆ ಆರೋಗ್ಯಸೇವೆಯನ್ನು ಹೆಚ್ಚಿಸುವುದರಲ್ಲಿ ಮರ್ಕ್‌ ಫೌಂಡೇಶನ್‌ ಬದ್ಧವಾಗಿದೆ. ‘ಮರ್ಕ್‌-ಮಾತೆಗಿಂತ ಮಿಗಿಲು’ [ಮರ್ಕ್‌ ಮೋರ್‌ ದೇನ್‌ ಎ ಮದರ್‌] ಎಂಬ ಪ್ರಮುಖ ಆರಂಭಿಕ ಧ್ಯೇಯದೊಂದಿಗೆ ಅನೇಕ ಆಫ್ರಿಕನ್‌ ಸಂಸ್ಥೆಗಳೊಂದಿಗೆ, ಒಡಂಬಡಿಕೆಯನ್ನು ಮಾಡಿಕೊಂಡಿದೆ. ಸಾಕಷ್ಟು ಸೌಲಭ್ಯಗಳಿಲ್ಲದ ಪ್ರದೇಶಗಳಲ್ಲಿ […]

ಪರಶುರಾಮ ಪ್ರತಿಮೆ ವಿಚಾರದಲ್ಲಿ ಅಪಪ್ರಚಾರ ಮಾಡುವ ಬದಲು ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಸಲಿ: ಕುಯಿಲಾಡಿ ಸುರೇಶ್ ನಾಯಕ್ ಸವಾಲು

ಉಡುಪಿ: ಪರಶುರಾಮನ ಪ್ರತಿಮೆ ವಿಚಾರದಲ್ಲಿ ಆಧಾರ ರಹಿತ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ಸಿಗೆ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿಸಲು ಯಾಕೆ ಮನಸ್ಸು ಮಾಡುತ್ತಿಲ್ಲ. ಜನತೆಯ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಲು ಕಾಂಗ್ರೆಸಿಗರು ಹಾದಿ ಬೀದಿಗಳಲ್ಲಿ ಬೊಬ್ಬೆ ಹೊಡೆಯುವ ಬದಲು ಅಗತ್ಯ ವಿಚಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ಒತ್ತು ನೀಡುವುದು ಉತ್ತಮ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತ ನಡೆಸುತ್ತಿದೆ. ತನಿಖಾ ಸಂಸ್ಥೆಗಳು, ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು […]

ಉಡುಪಿ: ಅಬ್ಬಗ ದಾರಗ ಕ್ಷೇತ್ರದಲ್ಲಿ ಚಂಡಿಕಾ ಹೋಮ

ಉಡುಪಿ: ಅಬ್ಬಗ ದಾರಗ ವೀರಭದ್ರ ಮತ್ತು ಶನೇಶ್ವರ ದೇವಸ್ಥಾನ ಟ್ರಸ್ಟ್ ಕಾಡುಬೆಟ್ಟು ಇಲ್ಲಿ ನವರಾತ್ರಿಯ ಅಂಗವಾಗಿ ಶ್ರೀ ಖಡ್ಗೇಶ್ವರಿ ಮತ್ತು ರಕ್ತೇಶ್ವರಿ ದೇವಿಯ ಸನ್ನಿಧಿಯಲ್ಲಿ ಚಂಡಿಕಾ ಹೋಮವು ಆದಿತ್ಯವಾರದಂದು ಕೊರಂಗ್ರಪಾಡಿ ಕುಮಾರ್ ತಂತ್ರಿ ನೇತೃತ್ವದಲ್ಲಿ ನಡೆಯಿತು. ದೇವಳದ ಅಧ್ಯಕ್ಷರು, ಸಮಿತಿಯ ಪದಾಧಿಕಾರಿಗಳು, ಸೇವಾದಾರರು, ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ನೂರಾರು ಭಕ್ತರೂ ಪ್ರಸಾದ ಸ್ವೀಕರಿಸಿದರು.

ಬಿಗ್ ಬಾಸ್ ಮನೆಯಿಂದ ‘ವರ್ತೂರು ಸಂತೋಷ್’ ಅರೆಸ್ಟ್ 

ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ಬಂಧನವಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿ ಒಬ್ಬ ಅರೆಸ್ಟ್ ಮಾಡಲಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿ ಒಬ್ಬ ಅರೆಸ್ಟ್ ಆಗಿದ್ದು, ಹುಲಿ ಉಗುರು ಇರುವ ಪೆಂಡೆಂಟ್‌ ಧರಿಸಿದ್ದರು ಎಂಬ ಆರೋಪದ ಮೇಲೆ ಬಂಧನವಾಗಿದೆ. ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ಅರೆಸ್ಟ್ ಮಾಡಲಾಗಿದೆ. ವರ್ತೂರು ಸಂತೋಷ್ ಅವರನ್ನು ರಾಮೋಹಳ್ಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದು, ಸದ್ಯ ರಾಮೋಹಳ್ಳಿ ಅರಣ್ಯಾಧಿಕಾರಿಗಳ ಕಷ್ಟಡಿಯಲ್ಲಿದ್ದಾರೆ. […]

ತೆಂಕುಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಛದ್ಮ ವೇಷ ಸ್ಪರ್ಧೆ

ತೆಂಕುಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಶನಿವಾರ ಸಂಜೆ ಜಿ. ಎಸ್. ಬಿ ಯುವಕ ಮಂಡಳದ ಆಶ್ರಯದಲ್ಲಿ ಛದ್ಮ ವೇಷ ಸ್ಪರ್ಧೆ 4 ವಿಭಾಗದಲ್ಲಿ ಜರಗಿತು. ಜಿ ಎಸ್ ಬಿ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಸಹಕರಿಸಿದರು.