ಭಾರತೀಯ ಸೇನೆಯಿಂದ ಗೌರವ ಸಲ್ಲಿಕೆ : ಸಿಯಾಚಿನ್​ನಲ್ಲಿ ಅಗ್ನಿವೀರ್​​​ ಅಕ್ಷಯ್​ ಹುತಾತ್ಮ

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ನ ಸಿಯಾಚಿನ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ‘ಅಗ್ನಿವೀರ್​’​​​ ಗವಟೆ ಅಕ್ಷಯ್​ ಲಕ್ಷ್ಮಣ್​ ಎಂಬುವರು ಹುತಾತ್ಮರಾಗಿದ್ದಾರೆ. ಸಿಯಾಚಿನ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಾರಾಷ್ಟ್ರದ ಮೂಲದ ಅಗ್ನಿವೀರ್​ ಗವಟೆ ಅಕ್ಷಯ್​ ಲಕ್ಷ್ಮಣ್​ ಹುತಾತ್ಮರಾಗಿದ್ದಾರೆ. ಇವರು ಸೇನಾ ಕಾರ್ಯಾಚರಣೆಯಲ್ಲಿ ಪ್ರಾಣವನ್ನು ತ್ಯಾಗ ಮಾಡಿದ ಮೊದಲ ಅಗ್ನಿವೀರ್​ ಆಗಿದ್ದು, ಭಾರತೀಯ ಸೇನೆಯು ಭಾನುವಾರ ಅಂತಿಮ ಗೌರವ ಸಲ್ಲಿಸಿದೆ. ಸಿಯಾಚಿನ್ ಹಿಮನದಿಯನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಯಲಾಗುತ್ತದೆ. ಅಲ್ಲದೇ, ಇದು ಭಾರತದ ಅತಿದೊಡ್ಡ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಹಿಮನದಿಯಾಗಿದೆ. […]

ಗೂಗಲ್​ಗೆ 1.1 ಮಿಲಿಯನ್ ಡಾಲರ್ ದಂಡ : ಮಹಿಳಾ ಉದ್ಯೋಗಿಗೆ ಲಿಂಗ ತಾರತಮ್ಯ

ಸ್ಯಾನ್ ಫ್ರಾನ್ಸಿಸ್ಕೋ : ಲಿಂಗ ಆಧಾರಿತ ತಾರತಮ್ಯ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಗೂಗಲ್ ತನ್ನ ಉದ್ಯೋಗಿಯೊಬ್ಬರಿಗೆ 1.1 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯ ಮಾಡಿದ್ದಕ್ಕಾಗಿ ಯುಎಸ್​ ನ್ಯಾಯಾಲಯ ಗೂಗಲ್​ಗೆ ದಂಡ ವಿಧಿಸಿದೆ. ಗೂಗಲ್ ವಿಶ್ವದ ಪ್ರಸಿದ್ಧ ಇಂಟರ್ನೆಟ್ ಸರ್ಚ್ ಎಂಜಿನ್ ಆಗಿದ್ದು, ಮೂಲತಃ ಬ್ಯಾಕ್​ರಬ್ ಎಂದು ಕರೆಯಲಾಗುತ್ತಿತ್ತು. ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ 1996 ರಲ್ಲಿ ಸರ್ಚ್ ಎಂಜಿನ್ ಕಂಪನಿಯಾಗಿ ಪ್ರಾರಂಭಿಸಿದರು. 1998ರ ಸೆಪ್ಟೆಂಬರ್ 15 ರಂದು, […]

ಉರಿಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ : ಜಮ್ಮು ಕಾಶ್ಮೀರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ ಎಂದು ಭಾರತೀಯ ಸೇನೆ ಭಾನುವಾರ ತಿಳಿಸಿದೆ.ಪಿಸ್ತೂಲ್​, ಗ್ರೆನೇಡ್​ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರ ಒಳನುಸುಳುವಿಕೆ ಮುಂದುವರಿದಿದೆ. ಆದರೆ, ಭಾರತೀಯ ಸೇನೆ ಯಶಸ್ವಿಯಾಗಿ ತಡೆಯುತ್ತಿದೆ. ಈ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸೇನೆ, ‘ಉರಿ ಸೆಕ್ಟರ್​ನ ಬಾರಾಮುಲ್ಲಾದ ಗಡಿಯಲ್ಲಿ ಪಾಕಿಸ್ತಾನ ಕಡೆಯಿಂದ ಭಯೋತ್ಪಾದಕರು ಒಳನುಸುಳುವ ಸಂಚು ರೂಪಿಸಿದ್ದರು. ಗುಪ್ತಚರ ದಳ​ […]

CEA ವರದಿ : 86 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕನಿಷ್ಠ ಮಟ್ಟಕ್ಕಿಳಿದ ಕಲ್ಲಿದ್ದಲು ದಾಸ್ತಾನು

ನವದೆಹಲಿ: ಆಮದು ಮಾಡಿಕೊಳ್ಳಲಾದ ಆರು ಒಣ ಇಂಧನ ಆಧರಿತ ಸ್ಥಾವರಗಳು ಸೇರಿದಂತೆ ದೇಶದ 86 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ಅಕ್ಟೋಬರ್ 18ರ ವೇಳೆಗೆ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ) ವರದಿ ತಿಳಿಸಿದೆ.ಈ ಸ್ಥಾವರಗಳಲ್ಲಿ ಇರಬೇಕಾಗಿದ್ದ ಸಾಮಾನ್ಯ ಮಟ್ಟಕ್ಕಿಂತ ಶೇ 25 ರಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನು ಇದ್ದು, ಇವುಗಳನ್ನು ಕನಿಷ್ಠ ಇಂಧನ ದಾಸ್ತಾನು ಹೊಂದಿರುವ ಸ್ಥಾವರಗಳ ಪಟ್ಟಿಗೆ ಸೇರಿಸಲಾಗಿದೆ.ದೇಶದ ಹಲವಾರು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ಸಾಮಾನ್ಯಕ್ಕಿಂತ […]

ಭಾರತದೊಂದಿಗಿನ ಗಡಿಯಲ್ಲಿ ಮೂಲಸೌಕರ್ಯ ಹೆಚ್ಚಿಸಿಕೊಂಡ ಚೀನಾ ಎಂದು ತಿಳಿಸಿದ ಪೆಂಟಗನ್ ವರದಿ

ವಾಶಿಂಗ್ಟನ್: ಭಾರತದೊಂದಿಗಿನ ಗಡಿ ಉದ್ವಿಗ್ನತೆಯ ಮಧ್ಯೆ ಚೀನಾ 2022ರಲ್ಲಿ ಡೋಕ್ಲಾಮ್ ಬಳಿ ಭೂಗತ ಸಂಗ್ರಹಣಾ ಸೌಲಭ್ಯಗಳನ್ನು ಹೆಚ್ಚಿಸಿದ್ದು, ಪಾಂಗೊಂಗ್ ಸರೋವರದ ಮೇಲೆ ಎರಡನೇ ಸೇತುವೆ ಮತ್ತು ಬಹುಪಯೋಗಿ ವಿಮಾನ ನಿಲ್ದಾಣ ಮತ್ತು ಅನೇಕ ಹೆಲಿಪ್ಯಾಡ್​ಗಳನ್ನು ನಿರ್ಮಾಣ ಮಾಡಿದೆ ಎಂದು ಪೆಂಟಗನ್ ವರದಿ ತಿಳಿಸಿದೆ. ಗಡಿಯಲ್ಲಿ ಚೀನಾ ಪಡೆಗಳ ನಿಯೋಜನೆಯನ್ನು ಹೆಚ್ಚಿಸಿದ್ದು ಮೂಲಸೌಕರ್ಯ ನಿರ್ಮಾಣವನ್ನು ಮುಂದುವರೆಸಿದೆ ಎಂದು ವರದಿ ಹೇಳಿದೆ. 2022ರಲ್ಲಿ ಚೀನಾ ಎಲ್​ಎಸಿ ಉದ್ದಕ್ಕೂ ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳನ್ನು ಹೆಚ್ಚಿಸಿದೆ ಎಂದು ಪೆಂಟಗನ್ ವರದಿ ಹೇಳಿದೆ “ವಾಸ್ತವಿಕ […]