ಅ.21ರಂದು ಎಂಜಿಎಂ ಮೈದಾನದಲ್ಲಿ ಬಹು ನಿರೀಕ್ಷಿತ “ಉಡುಪಿ ದಾಂಡಿಯ 2023” ಆಯೋಜನೆ

ಉಡುಪಿ: ಉಡುಪಿ ಶ್ರೀಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ ಮಹಿಳಾ ತಂಡದ ನೇತೃತ್ವದಲ್ಲಿ ಸತತ 6ನೇ ವರ್ಷದ “ಉಡುಪಿ ದಾಂಡಿಯ 2023” ಕಾರ್ಯಕ್ರಮವನ್ನು ಅ.21ರಂದು ಸಂಜೆ 6 ಗಂಟೆಯಿಂದ ಎಂಜಿಎಂ ಮೈದಾನದಲ್ಲಿ ನಡೆಸಲಾಗುವುದು ಎಂದು ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ತಿಳಿಸಿದರು. ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತಿನ ಸಾಂಪ್ರದಾಯಿಕ ಗರ್ಭ ಯಾನೆ ದಾಂಡಿಯಾ ನೃತ್ಯಕ್ಕೆ ಉತ್ತೇಜನ ನೀಡುವ ಸಲುವಾಗಿ ಕಡಿಯಾಳಿ ಗಣೇಶೋತ್ಸವ ಸಮಿತಿಯ […]
ಕೂಲ್ ಮಗಾ ಸ್ಟುಡಿಯೋಸ್ ನಿಂದ ಹೊಸ ಫನ್ನಿ ಸಬ್ ಸ್ಕ್ರಿಪ್ಷನ್ ವೀಡಿಯೋ ಬಿಡುಗಡೆ

ಗೌರವ್ ಶೆಟ್ಟಿ, ಪ್ರತೀಕ್ ಶೆಟ್ಟಿ ಮತ್ತು ಶ್ರೀ ಭವ್ಯ ನಟನೆಯ ಹೊಸ ಫನ್ನಿ ಸಬ್ ಸ್ಕ್ರಿಪ್ಷನ್ ವೀಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಕೂಲ ಮಗಾ ಸ್ಟುಡಿಯೋಸ್ ಕ್ಯಾಮರಾ ಕಟ್ ಹೇಳಿದೆ. ಶಿವು-ಸುಜಿ ಪ್ರೊಡಕ್ಷನ್ ನಲ್ಲಿ ವೀಡಿಯೋ ನಿರ್ಮಾಣವಾಗಿದ್ದು, ರೋಹಿತ್ ಸಂಗೀತ ನೀಡಿದ್ದಾರೆ. ಪ್ರತಿಬಾರಿಯೂ ಹೊಸ ಕಾನ್ಸೆಪ್ಟ್ ನಿಂದ ಜನರನ್ನು ರಂಜಿಸುವ ಗೌರವ್ ಮತ್ತು ಪ್ರತೀಕ್ ಶೆಟ್ಟಿ ಈ ಬಾರಿಯೂ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ.
ಉಡುಪಿ: ಅ.21 ರಂದು ಶಾಲಾ ಶಿಕ್ಷಕರ ನೇಮಕಾತಿಗಾಗಿ ಕೌನ್ಸಲಿಂಗ್

ಉಡುಪಿ: ಸರಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿ -2022 ರ ನೇಮಕಾತಿಗೆ ಸಂಬಂಧಿಸಿದಂತೆ 2023 ರ ಮಾರ್ಚ್ 8 ರಂದು ಪ್ರಕಟಿಸಲಾದ 1:1 ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಕೌನ್ಸಿಲಿಂಗ್‌ಗೆ ಅರ್ಹ ಅಭ್ಯರ್ಥಿಗಳ ವಿವರಗಳನ್ನು ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್ https:schooleducation.karnataka.gov.in ನಲ್ಲಿ ಪ್ರಕಟಿಸಲಾಗಿರುತ್ತದೆ. ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಅಕ್ಟೋಬರ್ 21 ರಂದು ಬೆಳಗ್ಗೆ 10.30 ಕ್ಕೆ ಉಡುಪಿಯ ಸರಕಾರಿ ಬಾಲಕಿಯರ ಪ.ಪೂರ್ವ ಕಾಲೇಜು (ಪ್ರೌಢ ವಿಭಾಗ) ಇಲ್ಲಿನ ಸವ್ಯಸಾಚಿ […]