7.30ಕ್ಕೆ ನೇರಪ್ರಸಾರ : ನಾಳೆ ಗಗನಯಾನದ ಮೊದಲ ಪರೀಕ್ಷಾರ್ಥ ಪ್ರಯೋಗ
ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ (Gaganyaan) ಗಗನಯಾನ ಮಿಷನ್ ಅಕ್ಟೋಬರ್ 21 ರಿಂದ ಪ್ರಾರಂಭವಾಗುತ್ತಿದೆ.ಗಗನಯಾನದ ಮೊದಲ ಹಂತದ ಪ್ರಯೋಗಕ್ಕೆ ಇಸ್ರೋ ಮುಂದಾಗಿದೆ. ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದ ಉಡಾವಣಾ ಕೇಂದ್ರದಿಂದ ಶನಿವಾರ ಬೆಳಗ್ಗೆ 8 ಗಂಟೆಗೆ ರಾಕೆಟ್ ಉಡಾವಣೆಯಾಗಲಿದೆ. ಇದರ ನೇರಪ್ರಸಾರ ನಾಳೆ ಬೆಳಗ್ಗೆ 7.30ರಿಂದ ಪ್ರಾರಂಭವಾಗಲಿದೆ. ನಾಲ್ಕು ಪರೀಕ್ಷೆಗಳು: ಗಗನಯಾನ ಮಿಷನ್ನ ಮೊದಲ ಪರೀಕ್ಷಾ ಹಾರಾಟವು ಅಕ್ಟೋಬರ್ 21 ರಂದು ನಡೆಯಲಿದೆ. ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 ಎಂದು ಹೆಸರಿಸಲಾಗಿದೆ. ಇದಾದ ಬಳಿಕ ಎರಡನೇ ಪರೀಕ್ಷಾರ್ಥ ಹಾರಾಟ ಡಿ-2, […]
ಅಯೋಧ್ಯೆ ಭೂಮಿಪೂಜೆ : : 25 ಸಾವಿರ ಭಕ್ತರಿಗೆ ವಸತಿ, ಊಟೋಪಚಾರದ ವ್ಯವಸ್ಥೆ ಟೆಂಟ್ ಸಿಟಿ ನಿರ್ಮಾಣ
ಅಯೋಧ್ಯೆ (ಉತ್ತರ ಪ್ರದೇಶ): ಭಗವಾನ್ ಶ್ರೀರಾಮನ ನಗರ ಅಯೋಧ್ಯೆಯಲ್ಲಿ ಭವ್ಯ ಮಂದಿರ ಬಹುತೇಕ ಸಿದ್ಧವಾಗಿದೆ. 2024ರ ಜನವರಿಯಲ್ಲಿ ನಡೆಸಲು ಉದ್ದೇಶಿಸಿರುವ ಶ್ರೀರಾಮ ದೇವಾಲಯದ ಪ್ರಾಣ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಕ್ಕೆ ಸಕಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ.ಅಯೋಧ್ಯೆಯ ಮಹಾ ಮಂದಿರದ ಪ್ರಾಣಪ್ರತಿಷ್ಠಾ ಮಹೋತ್ಸವಕ್ಕೂ ಮುನ್ನ ಭಕ್ತರಿಗೆ ತಂಗಲು ಬೃಹತ್ ಟೆಂಟ್ ಸಿಟಿ ನಿರ್ಮಿಸಲಾಗುತ್ತಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಭಕ್ತರ ವಾಸ್ತವ್ಯ ಮತ್ತು ಸಂಚಾರಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತವಾಗಿದೆ. ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ವಕ್ತಾರ ಶರದ್ […]
ಮೊದಲ ದಿನದ ಕಲೆಕ್ಷನ್ : ಬಾಲಯ್ಯ ನಟನೆಯ ‘ಭಗವಂತ ಕೇಸರಿ’ಗೆ ಭರ್ಜರಿ ಗೆಲುವು
ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಮುಖ್ಯಭೂಮಿಕೆಯ ‘ಭಗವಂತ ಕೇಸರಿ’ ಸಿನಿಮಾ ಗುರುವಾರ (ಅ.19) ತೆರೆ ಕಂಡಿದೆ. ಅನಿಲ್ ರವಿಪುಡಿ ಆಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಬ್ಯೂಟಿ ಕಾಜಲ್ ಅಗರ್ವಾಲ್, ಗ್ಲ್ಯಾಮರ್ ಕ್ವೀನ್ ಶ್ರೀಲೀಲಾ ಜತೆಗೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಕಾಸ್ಟ್, ಟೈಟಲ್, ಟೀಸರ್, ಟ್ರೇಲರ್, ಪೋಸ್ಟರ್ ಸಲುವಾಗಿ ಸದ್ದು ಮಾಡಿತ್ತು. ಇದೀಗ ರಿಲೀಸ್ ಆದ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರವು ವಿಶ್ವದಾದ್ಯಂತ […]
ಪಾಕಿಸ್ತಾನಕ್ಕೆ 368 ರನ್ಗಳ ಬೃಹತ್ ಗುರಿ : ಆಸ್ಟ್ರೇಲಿಯಾ ಆರಂಭಿಕರ ಸಿಡಿಲಬ್ಬರದ ಬ್ಯಾಟಿಂಗ್
ಬೆಂಗಳೂರು: 5 ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡ ಈ ವರ್ಷ ಮೊದಲೆರಡು ಪಂದ್ಯಗಳನ್ನು ಬ್ಯಾಟಿಂಗ್ ವೈಫಲ್ಯದಿಂದ ಸೋತರೆ, ಮೂರನೇ ಪಂದ್ಯದಲ್ಲಿ ಸಾಧಾರಣ ಪ್ರದರ್ಶನದಿಂದ ಗೆಲುವು ದಾಖಲಿಸಿತ್ತು.ಆದರೆ ಇಂದಿನ ನಾಲ್ಕನೇ ಪಂದ್ಯದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ್ದು, ಪಾಕಿಸ್ತಾನದ ವಿರುದ್ಧ ದೊಡ್ಡ ಇನ್ನಿಂಗ್ಸ್ ಕಟ್ಟಿದೆ. ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರ ಅಬ್ಬರದ ಶತಕದ ನೆರವಿನಿಂದ ತಂಡವು ನಿಗದಿತ ಓವರ್ಗಳ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿತು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಇಂದು […]
ಆಸ್ಟ್ರೇಲಿಯಾ-ಪಾಕಿಸ್ತಾನ ಹಣಾಹಣಿ: ಮೈದಾನದೊಳಗೆ, ಹೊರಗೆ ಭಾರಿ ಭದ್ರತೆ : ವಿಶ್ವಕಪ್ ಕ್ರಿಕೆಟ್
ಬೆಂಗಳೂರು: ಆಸ್ಟ್ರೇಲಿಯಾ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಎರಡು ಅಥವಾ ಮೂರು ಹಂತಗಳಲ್ಲಿ ಕ್ರೀಡಾಂಗಣ ಒಳಗೆ ಮತ್ತು ಹೊರಗೆ ಭದ್ರತೆ ವಹಿಸಲಾಗಿದ್ದು, ತಂಡಗಳಿಗೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.ಈ ಬಾರಿಯ ವಿಶ್ವಕಪ್ನಲ್ಲಿ ತನ್ನ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದ್ದಾರೆ.ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ಮೂರು ಹಂತಗಳಲ್ಲಿ ಭದ್ರತೆ ವಹಿಸಲಾಗಿದೆ ಎಂದು ನಗರ ಪೊಲೀಸ್ […]