ಭಾರತ-ಪಾಕ್ ಪಂದ್ಯದ ವೇಳೆ ಅಭಿಮಾನಿಗಳಿಂದ ಅನುಚಿತ ವರ್ತನೆ ಆರೋಪಿಸಿ ಐಸಿಸಿಗೆ ದೂರು ನೀಡಿದ ಪಿಸಿಬಿ

ನವದೆಹಲಿ: ಅಹಮದಾಬಾದ್‌ನಲ್ಲಿ ಅಕ್ಟೋಬರ್ 14ರಂದು ನಡೆದ ಭಾರತ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ವೇಳೆ ಆತಿಥೇಯ ಪ್ರೇಕ್ಷಕರು ತೋರಿದ ‘ಅನುಚಿತ ವರ್ತನೆ’ಯ ಬಗ್ಗೆ ಆಕ್ಷೇಪವೆತ್ತಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಐಸಿಸಿಗೆ ದೂರು ನೀಡಿದೆ. ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ನ ಬಹುನಿರೀಕ್ಷಿತ ಭಾರತ-ಪಾಕ್ ಪಂದ್ಯದಲ್ಲಿ ಪಾಕ್ ಆಟಗಾರರನ್ನು ಗುರಿಯಾಗಿಸಿಕೊಂಡು ಭಾರತೀಯ ಪ್ರೇಕ್ಷಕರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ವರ್ತನೆ ತೋರಿದ್ದಾರೆ. ಇದು ಐಸಿಸಿ ಟೂರ್ನಿ ಆಯೋಜಿಸುವ ಕ್ರಮವಲ್ಲ […]
ಕೃಷ್ಣಮಠಕ್ಕೆ ಭೇಟಿ ನೀಡಿದ ಭಾರತೀಯ ನೌಕಾದಳದ ಕಮಾಂಡಿಂಗ್ ಆಫೀಸರ್

ಉಡುಪಿ: ಭಾರತ ನೌಕಾದಳದ ಕರ್ನಾಟಕ ವಿಭಾಗದ ಕಮಾಂಡಿಂಗ್ ಫ್ಲ್ಯಾಗ್ ಆಫಿಸರ್ ರಾಮಕೃಷ್ಣನ್ ಇವರು ಕುಟುಂಬ ಸಮೇತರಾಗಿ ಕೃಷ್ಣಮಠಕ್ಕಾಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಇವರಿಂದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.
ವಾಹನಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡಿ ಅಪಘಾತ ಪ್ರಮಾಣ ತಗ್ಗಿಸಿ: ಡಾ. ಕೆ ವಿದ್ಯಾಕುಮಾರಿ

ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕರ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ರಸ್ತೆ ಸುಧಾರಣಾ ಮೂಲಭೂತ ಕಾಮಗಾರಿಗಳನ್ನು ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಅಪಘಾತ ಪ್ರಮಾಣವನ್ನು ಅತ್ಯಂತ ಕಡಿಮೆಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬುಧವಾರ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ 30 ಕ್ಕೂ ಹೆಚ್ಚು ಅಪಘಾತ ವಲಯ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, […]
ಭಾರತದ ಪ್ರಪ್ರಥಮ ರ‍್ಯಾಪಿಡ್ ರೈಲ್ ಕಾಲಿಡಾರ್ ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ನವದೆಹಲಿ: ಅಕ್ಟೋಬರ್ 21 ರಿಂದ, ಪ್ರಯಾಣಿಕರು ಭಾರತದ ಮೊದಲ ಪ್ರಾದೇಶಿಕ ಕ್ಷಿಪ್ರ ರೈಲಿನಲ್ಲಿ ಆರಾಮವಾಗಿ ಪ್ರಯಾಣಿಸಬಹುದು. ಶುಕ್ರವಾರದಂದು ಸಾಹಿಬಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿರುವ 82 ಕಿಮೀ ಉದ್ದದ ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ನ 17-ಕಿಮೀ ಆದ್ಯತೆಯ ವಿಭಾಗವು ಶನಿವಾರದಿಂದ ಕಾರ್ಯನಿರ್ವಹಿಸಲಿದೆ. ಈ ಆದ್ಯತೆಯ ವಿಭಾಗವು ಐದು ನಿಲ್ದಾಣಗಳನ್ನು ಹೊಂದಿದೆ: ಸಾಹಿಬಾಬಾದ್, ಘಾಜಿಯಾಬಾದ್, ಗುಲ್ಧರ್, ದುಹೈ ಮತ್ತು ದುಹೈ ಡಿಪೋ. ಎನ್‌ಸಿಆರ್‌ಟಿಸಿಯ ಮೊಬೈಲ್ ಅಪ್ಲಿಕೇಶನ್, ‘RAPIDX ಕನೆಕ್ಟ್’ ಮೂಲಕ ಪಡೆಯಬಹುದಾದ ಕಾಗದದ QR ಕೋಡ್ ಆಧಾರಿತ ಪ್ರಯಾಣದ ಟಿಕೆಟ್‌ಗಳು, […]
ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನ ದಲ್ಲಿ ಇಂದಿನ ವಿಶೇಷಗಳು

ಬ್ರಹ್ಮಾವರ: ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನ ಶ್ರೀ ಕ್ಷೇತ್ರ ನೀಲಾವರದಲ್ಲಿ ಇಂದಿನ ನವರಾತ್ರಿ ವಿಶೇಷಗಳು ಬೆಳಿಗ್ಗೆ 9.30ರಿಂದ ದುರ್ಗಾಹೋಮ ಬೆಳಿಗ್ಗೆ 10.00ರಿಂದ “ಭಜನಾ ಕಾರ್ಯಕ್ರಮ” (ಶ್ರೀ ರಾಮ ಮಹಿಳಾ ಭಜನಾ ಮಂಡಳಿ, ಸಾಲಿಗ್ರಾಮ ಇವರಿಂದ) ಮಧ್ಯಾಹ್ನ 12.00ಕ್ಕೆ ಮಹಾಪೂಜೆ “ಭಜನಾ ಕಾರ್ಯಕ್ರಮ”(ಶ್ರೀ ಕುಂದೇಶ್ವರ ಭಜನಾ ಮಂಡಳಿ, ಕುಂದಾಪುರ ಇವರಿಂದ 12.30ಕ್ಕೆ ಅನ್ನಸಂತರ್ಪಣೆ ಸಂಜೆ 4.00ರಿಂದ “ಭಜನಾ ಕಾರ್ಯಕ್ರಮ” (ಶ್ರೀ ಕೃಷ್ಣ ಭಜನಾ ಮಂಡಳಿ, ಬೈಕಾಡಿ ಇವರಿಂದ) ಅಂತಾರಾಷ್ಟ್ರೀಯ ಖ್ಯಾತಿಯ ಅಶೋಕ್ ಪೊಳಲಿ ಇವರಿಂದ ವಿಭಿನ್ನ ಶೈಲಿಯ ಸಂಜೆ […]