ಕೆಎಸ್‌ಆರ್​ಟಿಸಿಯಿಂದ ನವರಾತ್ರಿ ಹಿನ್ನೆಲೆ ದೇವಾಲಯ ದರ್ಶನಕ್ಕೆ ವಿಶೇಷ ಪ್ಯಾಕೇಜ್​​

ಮಂಗಳೂರು : ನವರಾತ್ರಿ ಹಬ್ಬದ ಸಂದರ್ಭದಲ್ಲಿ ಭಕ್ತರಿಗೆ ದೇವಾಲಯ ದರ್ಶನಕ್ಕೆ ಕಳೆದ ವರ್ಷ ಕೆಎಸ್​​ಆರ್​ಟಿಸಿಯಿಂದ ದಸರಾ ದರ್ಶಿನಿ ಎಂಬ ಪ್ಯಾಕೇಜ್ ಆರಂಭಿಸಲಾಗಿತ್ತು. ಇದಕ್ಕೆ ಜನರ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರಿನ ಕೆಎಸ್​​ಆರ್​ಟಿಸಿ ಈ ಬಾರಿಯು ದಸರಾ ದರ್ಶಿನಿ ಆರಂಭಿಸಿದೆ. ದೇವಾಲಯ ದರ್ಶನಕ್ಕೆ ಕೆಎಸ್​​ಆರ್​ಟಿಸಿಯಿಂದ ವಿಶೇಷ ಪ್ಯಾಕೇಜ್​ : ನವರಾತ್ರಿ ಸಮಯದಲ್ಲಿ ದೇವಿ ದೇವಾಲಯಗಳ ದರ್ಶನ ಮಾಡುವುದು ಸಾಮಾನ್ಯ. ದೇಗುಲ ದರ್ಶನ ಮಾಡುವ ಭಕ್ತರಿಗೆ ಎಂದೇ ಮಂಗಳೂರಿನಲ್ಲಿ ಕೆಎಸ್​​ಆರ್​ಟಿಸಿ ಇದೀಗ ದಸರಾ ದೇಗುಲ ದರ್ಶನ ವಿಶೇಷ ಪ್ಯಾಕೇಜ್ […]

ಐಟಿಎಫ್ ವರ್ಲ್ಡ್ ಟೆನ್ನಿಸ್ ಟೂರ್ನಿಗೆ ಚಾಲನೆ ನೀಡಿದ ಅಜರ್ : ಧಾರವಾಡದಲ್ಲಿ ಮಹಿಳೆಯರಿಗೂ ಅವಕಾಶ ಸಿಗಲಿ

ಧಾರವಾಡ: ಧಾರವಾಡ ಜಿಲ್ಲಾ ಟೆನ್ನಿಸ್ ಸಂಸ್ಥೆ (ಡಿಡಿಎಲ್‍ಟಿಎ) ಆಶ್ರಯದಲ್ಲಿ ರಾಜ್ಯಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿ ಆರಂಭಗೊಂಡಿರುವ ಅಂತಾರಾಷ್ಟ್ರೀಯ ಪುರುಷರ ಟೆನ್ನಿಸ್ ಪಂದ್ಯಾವಳಿಯನ್ನು ಬಲೂನ್ ಹಾರಿ ಬಿಡುವ ಮೂಲಕ ಹಾಗೂ ಸಾಂಕೇತಿಕವಾಗಿ ಟೆನ್ನಿಸ್ ಆಡುವ ಮೂಲಕ ಮಾಜಿ ಸಂಸದ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಹಾಗೂ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ಪಂದ್ಯಾವಳಿ ಉದ್ಘಾಟಿಸಿದರು.ಧಾರವಾಡದಲ್ಲಿ ಮಹಿಳೆಯರಿಗೂ ಅವಕಾಶ ಸಿಗಲಿ ಎಂದ ಅಜರ್​, ಇಂದಿನಿಂದ ಐದು ದಿನಗಳ ಕಾಲ ನಡೆಯುವ ಐಟಿಎಫ್ ವರ್ಲ್ಡ್ ಟೆನ್ನಿಸ್ […]

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಟಿಕೆಟ್ ಮಾರಾಟ : ಐಸಿಸಿ ಏಕದಿನ ವಿಶ್ವಕಪ್

ಬೆಂಗಳೂರು : ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ 4 ಪಂದ್ಯಗಳ ಟಿಕೆಟ್ ಮಾರಾಟದ ದಿನಾಂಕವನ್ನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ.ಐಸಿಸಿ ಏಕದಿನ ವಿಶ್ವಕಪ್​ನ ಮೊದಲ ಪಂದ್ಯಕ್ಕೆ ಸಜ್ಜಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಟಿಕೆಟ್ ಮಾರಾಟಕ್ಕೆ ಚಾಲನೆ ದೊರೆತಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಂಗಳವಾರ, ಬುಧವಾರ ಹಾಗೂ ಗುರುವಾರ ಕ್ರೀಡಾಂಗಣದ ನಾಲ್ಕು ಕೌಂಟರ್‌ನಲ್ಲಿ ಟಿಕೆಟ್ ಮಾರಾಟ ನಡೆಯಲಿದೆ. ಅಕ್ಟೋಬರ್ […]

ಕಾರ್ಕಳ: ಹೋಟೆಲ್ ರಾಮ್ ಭರೋಸ ಪುನರಾರಂಭ

ಕಾರ್ಕಳ: ಆನೆಕೆರೆಯ ಶ್ರೀ ಕೃಷ್ಣ ದೇವಸ್ಥಾನದ ಜಂಕ್ಸನ್ ಬಳಿ 55ವರ್ಷ ಇತಿಹಾಸವುಳ್ಳ ಹೋಟೆಲ್ ರಾಮ್ ಭರೋಸ ನವೀಕೃತಗೊಂಡು ನವರಾತ್ರಿಯ ಪ್ರಾರಂಭದಂದು ಶುಭರಾಂಭಗೊಂಡಿದೆ. ಕಾರ್ಕಳದ ಶಿವ ಎಡ್ವಟೈಸರ್ಸ್ ಮಾಲಕ ವರದರಾಯ ಪ್ರಭು ದೀಪ ಬೆಳಗಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ವೇದಮೂರ್ತಿ ಗಣಪತಿ ಭಟ್, ವಿಠಲ್ ದೇವಾಡಿಗ, ಕುಚೇಲ, ಸುರೇಂದ್ರ ಉಪಸ್ಥಿತರಿದ್ದು ಶುಭಹಾರೈಸಿದರು. ಮಾಲಕ ಅನಂತ ಪ್ರಭು ಸ್ವಾಗತಿಸಿದರು. ಮಂಜುಳ ಪ್ರಭು ದನ್ಯವಾದ ಅರ್ಪಿಸಿದರು.

ಸುನಾಗ್ ಆರ್ಥೋ ಕೇರ್ ಎಂಡ್ ಮಲ್ಟಿಸ್ಪೆಷಾಲಿಟಿ ಸೆಂಟರ್ ನಲ್ಲಿ ಲಭ್ಯವಿದೆ 24*7 ಆರೋಗ್ಯ ಸೇವೆಗಳು

ಉಡುಪಿ: ಇಲ್ಲಿನ ಕುಂಜಿಬೆಟ್ಟು ಎಂಜಿಎಂ ಕಾಲೇಜು ಎದುರುಗಡೆ ಇರುವ ಸುನಾಗ್ ಆರ್ಥೋ ಕೇರ್ ಎಂಡ್ ಮಲ್ಟಿಸ್ಪೆಷಾಲಿಟಿ ಸೆಂಟರ್ ನಲ್ಲಿ 24*7 ಆರೋಗ್ಯ ಸೇವೆಗಳು ಲಭ್ಯವಿದ್ದು ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುವುದು. ಮೆಡಿಸಿನ್ ವಿಭಾಗ ಡಾ. ಜಯಪ್ರಕಾಶ್ ಬೆಳ್ಳೆ MBBS MD-ಓಪಿಡಿ: ಮಂಗಳವಾರ ಮತ್ತು ಶುಕ್ರವಾರ ಸಂಜೆ 4 ರಿಂದ 8 ಗಂಟೆ ಡಾ. ಶರತ್ ಮಧ್ಯಸ್ಥ MBBS MD: ಕರೆ ಮೂಲಕ/ ವಾರಪೂರ್ತಿ ಲಭ್ಯವಿರುವ ಸೇವೆಗಳು ಡಯಾಬಿಟೀಸ್, ಬಿಪಿ, ಶ್ವಾಸಕೋಶದ ಸಮಸ್ಯೆ, ಡೆಂಗ್ಯೂ ಮಲೇರಿಯಾ ಟೈಫಾಯ್ಡ್ ಚಿಕಿತ್ಸೆ […]