ಅ.17 ರಂದು ಮಾರುಕಟ್ಟೆಗೆ ಬರಲಿದೆ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ ಫೇಸ್‌ಲಿಫ್ಟ್; 25,000ರೂ ನಿಂದ ಬುಕಿಂಗ್ ಆರಂಭ
ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ ಫೇಸ್‌ಲಿಫ್ಟ್‌ಗಳನ್ನು ಅ.17 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ ಮತ್ತು ಕಾರು ತಯಾರಕರು ಎಲ್ಲಾ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಬಹಿರಂಗಪಡಿಸಿದ್ದಾರೆ. ಹೊಸ ಹ್ಯಾರಿಯರ್ ಅಥವಾ ಸಫಾರಿಯನ್ನು ಆನ್‌ಲೈನ್‌ನಲ್ಲಿ ಅಥವಾ ಭಾರತದಾದ್ಯಂತ ಟಾಟಾ ಡೀಲರ್‌ಶಿಪ್‌ಗಳಲ್ಲಿ ರೂ 25,000 ಕ್ಕೆ ಬುಕ್ ಮಾಡಬಹುದು. ಮರುವಿನ್ಯಾಸಗೊಳಿಸಲಾದ ಗ್ರಿಲ್, ತೀಕ್ಷ್ಣವಾದ ಇಂಡಿಕೇಟರ್ ಮತ್ತು ಹೊಸ LED ಹೆಡ್‌ಲೈಟ್‌ಗಳಂತಹ ಬದಲಾವಣೆಗಳೊಂದಿಗೆ ಎರಡೂ SUV ಗಳು ತಾಜಾ ನೋಟವನ್ನು ಪಡೆದಿವೆ. ಮುಂಭಾಗದಲ್ಲಿ ಉದ್ದವಾದ ಎಲ್ಇಡಿ ಡಿಆರ್ಎಲ್ ಸ್ಟ್ರಿಪ್ ಅನ್ನು ಒಳಗೊಂಡಿರುತ್ತವೆ […]
ಖಡ್ಗಕ್ಕಿಂತ ಹರಿತದ ಲೇಖನಿಯಲ್ಲ, ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ 20 ಅಡಿ ಉದ್ದದ ಲೇಖನಿ!!
ಸಾಗರ: ಸಾಗರದ ಆವಿನಹಳ್ಳಿಯ ಗಣೇಶ್ ಹಾರ್ಡ್ವೇರ್ ಮತ್ತು ಜೈಗಣೇಶ್ ವುಡ್ವರ್ಕ್ ಮಾಲೀಕ, ಕುಶಲಕರ್ಮಿ ಕೃಷ್ಣಮೂರ್ತಿ ಆಚಾರ್ ಅವರು ತಯಾರಿಸಿರುವ ಈ ಪೆನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪ್ರವೇಶಗಿಟ್ಟಿಸಿದೆ. ಹತ್ತು ವರ್ಷಗಳ ಹಿಂದೆ ತಯಾರಿಸಿರುವ ಈ ಪೆನ್ನು 20 ಅಡಿ ಉದ್ದವಿದೆ. ಈ ಲೇಖನಿ ಭಾರತದಲ್ಲೇ ದಾಖಲೆ ಬರೆದಿದೆ. ಅರ್ಥಾತ್, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ತಯಾರಾದ ಈ 20 ಅಡಿ ಉದ್ದದ ಲೇಖನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಸಿಕ್ಕಿದೆ. ನವದೆಹಲಿಯಲ್ಲಿ […]
ಕೆ.ಎಸ್.ಆರ್.ಟಿ ಸಿ ‘ಮಂಗಳೂರು ದಸರಾ ದರ್ಶನ’ಕ್ಕೆ ಭರ್ಜರಿ ಬೇಡಿಕೆ: ಟೂರು ಪ್ಯಾಕೇಜ್ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
ಮಂಗಳೂರು: ಕೆ.ಎಸ್.ಆರ್.ಟಿ ಸಿ ಮಂಗಳೂರು ವಿಭಾಗದ ‘ಮಂಗಳೂರು ದಸರಾ ದರ್ಶನ’ಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಸಂಸ್ಥೆಯ ಹಿರಿಯ ವಿಭಾಗಾಧಿಕಾರಿ ರಾಜೇಶ್ ಶೆಟ್ಟಿ ಹೇಳಿದ್ದಾರೆ. ಮಂಗಳೂರು ದಸರಾ ದರ್ಶನಕ್ಕೆಂದೆ ಒಂಬತ್ತು ಬಸ್ ಗಳನ್ನು ಮೀಸಲಿರಿಸಲಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಸಾರ್ವಜನಿಕರಿಂದ ಟಿಕೆಟ್ ಗಾಗಿ ಬೇಡಿಕೆ ಬಂದಿದೆ. ಪ್ರಸ್ತುತ 6-7 ಬಸ್ ಗಳು ಓಡಾಡುತ್ತಿದ್ದು, ವಾರಾಂತ್ಯ ಮತ್ತು ಅ.21 ರ ಬಳಿಕ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಕೊಲ್ಲೂರು ಮತ್ತು ನಗರ […]
ಚಂದ್ರಯಾನ-3 ರ ತಂತ್ರಜ್ಞಾನವನ್ನು ಭಾರತ ತಮ್ಮ ಜೊತೆ ಹಂಚಿಕೊಳ್ಳಬೇಕೆಂದು ಯುಎಸ್ ತಜ್ಞರು ಬಯಸಿದ್ದರು: ಎಸ್ ಸೋಮನಾಥ್
ರಾಮೇಶ್ವರಂ: ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಅಭಿವೃದ್ಧಿ ಚಟುವಟಿಕೆಗಳನ್ನು ವೀಕ್ಷಿಸಿದ ನಂತರ ಅಮೆರಿಕದಲ್ಲಿ ಸಂಕೀರ್ಣ ರಾಕೆಟ್ ಮಿಷನ್‌ಗಳನ್ನು ಅಭಿವೃದ್ಧಿಪಡಿಸುವ ತಜ್ಞರು ಭಾರತವು ತನ್ನ ಬಾಹ್ಯಾಕಾಶ ತಂತ್ರಜ್ಞಾನವನ್ನು ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಕಾಲ ಬದಲಾಗಿದೆ ಮತ್ತು ಭಾರತವು ಅತ್ಯುತ್ತಮ ಸಾಧನಗಳು ಮತ್ತು ರಾಕೆಟ್‌ಗಳನ್ನು ನಿರ್ಮಿಸಲು ಸಮರ್ಥವಾಗಿದೆ ಮತ್ತು ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಿದ್ದಾರೆ. ನಮ್ಮ ದೇಶ ಅತ್ಯಂತ ಶಕ್ತಿಶಾಲಿ ರಾಷ್ಟ್ರ. ದೇಶದಲ್ಲಿನ ಜ್ಞಾನ ಮತ್ತು ಬುದ್ಧಿವಂತಿಕೆಯ ಮಟ್ಟವು […]
ಮಲ್ಪೆ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಉಚ್ಚಿಲ ದೇವಿಗೆ ಬೂತಾಯಿ ಮೀನಿನ ಹಾರ ಸಮರ್ಪಣೆ
ಪಡುಬಿದ್ರಿ: ಇಲ್ಲಿನ ನವೀಕೃತ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಾನುವಾರದಿಂದ ಉಚ್ಚಿಲ ದಸರಾ ಉತ್ಸವ ಸಂಭ್ರಮಕ್ಕೆ ಚಾಲನೆ ದೊರೆತಿದ್ದು, ಆ ಪ್ರಯುಕ್ತ ಮಲ್ಪೆ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಉಚ್ಚಿಲ ಮಹಾಲಕ್ಷ್ಮೀ ದೇವಿಗೆ ಚಿನ್ನದ ಬೂತಾಯಿ ಮೀನಿನ ಹಾರವನ್ನು ಅರ್ಪಿಸಲಾಯಿತು.