ಅ.14ರಂದು ಮಿಷನ್ ಆಸ್ಪತ್ರೆಯಲ್ಲಿ ಸಹಾನುಭೂತಿ ಮತ್ತು ಉಪಶಾಮಕ ಆರೈಕಾ ದಿನಾಚರಣೆ
ಉಡುಪಿ: ಜಾಗತಿಕ (ಹಾಸ್ಪೈಸ್) ಸಹಾನುಭೂತಿ ಮತ್ತು ಉಪಶಾಮಕ ಆರೈಕಾ ದಿನಾಚರಣೆಯ ಅಂಗವಾಗಿ ಉಡುಪಿ ಲೋಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯ ವತಿಯಿಂದ ‘ಸಹಾನುಭೂತಿಯ ಸಮುದಾಯಗಳು ಉಪಶಾಮಕ ಆರೈಕೆಗಾಗಿ ಒಂದಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಅಕ್ಟೋಬರ್ 14ರಂದು ಸಂಜೆ 4 ಗಂಟೆಗೆ ಆಸ್ಪತ್ರೆಯ ವಾತ್ಸಲ್ಯ ಘಟಕದ ವಠಾರದಲ್ಲಿ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತನ್ನ ತಿಳಿಸಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಕಾರ್ಯಕ್ರಮವನ್ನು ಜಯಂಟ್ಸ್ ಇಂಟರ್ ನ್ಯಾಷನಲ್ ಬ್ರಹ್ಮಾವರದ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು, […]
ಕಾರ್ಕಳ: ಕ್ರಿಯೇಟಿವ್ ಕಾಲೇಜಿನ ಎನ್.ಎಸ್.ಎಸ್ ಶಿಬಿರ ಉದ್ಘಾಟನೆ
ಕಾರ್ಕಳ: ಸೇವಾ ಮನೋಭಾವನೆ ಹಾಗೂ ಸಹಬಾಳ್ವೆ ಮೂಲಕ ಬದುಕು ಕಲಿಸಲು ಎನ್ ಎಸ್ ಎಸ್ ಸಹಕಾರಿಯಾಗಿದೆ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಕಾರ್ಕಳ ತಾಲೂಕಿನ ಕ್ರಿಯೆಟಿವ್ ಕಾಲೇಜು ವತಿಯಿಂದ ಹಿರ್ಗಾನದ ಬಿ.ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸುಲೋಚನಾ ಸುಂದರ ಶೆಟ್ಟಿ ಕಲಾ ವೇದಿಕೆಯಲ್ಲಿ ನಡೆದ ಕಾಲೇಜಿನ ಮೊದಲ ಎನ್ ಎಸ್ ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸೇವಾ ಭಾವನೆ ಜೀವನದ ಉತ್ಕರ್ಷಕ್ಕೆ ಭದ್ರ ಬುನಾದಿಯಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಉತ್ತೆಜನ ನೀಡಿದಂತಾಗುತ್ತಿದೆ […]