ಜಾಗತಿಕ ಮಟ್ಟದ ವಿಜ್ಞಾನಿಗಳ ಶ್ರೇಯಾಂಕದಲ್ಲಿ ಮಾಹೆಯ ಪ್ರಾಧ್ಯಾಪಕರು
ಮಣಿಪಾಲ: ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯವು ಅತ್ಯಂತ ಹೆಚ್ಚು ಉಲ್ಲೇಖಕ್ಕೆ ಒಳಗಾಗುವ ವಿಜ್ಞಾನದ ಲೇಖಕರ ಡೇಡಾಬೇಸ್‌ನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ, ಸಾರ್ವಜನಿಕವಾಗಿ ಲಭ್ಯವಿರುವ ಈ ದತ್ತಸಂಚಯದಲ್ಲಿ ಜಗತ್ತಿನ ಅಗ್ರಪಂಕ್ತಿಯ 2 % ವಿಜ್ಞಾನಿಗಳ ಪಟ್ಟಿ ಇದ್ದು ಇದರಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ಗೆ ಸೇರಿದ ಶಿಕ್ಷಣ ಸಂಸ್ಥೆಗಳ 20 ಮಂದಿ ಪ್ರಾಧ್ಯಾಪಕರು ಇದ್ದಾರೆ. ಈ ದತ್ತ ಸಂಚಯವು ಎಚ್-ಇಂಡೆಕ್ಸ್‌ನ ಉಲ್ಲೇಖಗಳು [ಸೈಟೇಶನ್ಸ್ ಎಚ್-ಇಂಡೆಕ್ಸ್]. ಎಚ್‌ಎಂ-ಇಂಡೆಕ್ಸ್‌ನ ಸಹ-ಲೇಖಕ ಹೊಂದಾಣಿಕೆ [ಕೋಆಥರ್‌ಶಿಪ್ ಎಡ್ಜಸ್ಟೆಡ್ ಎಚ್‌ಎಂ-ಇಂಡೆಕ್ಸ್), ವಿಭಿನ್ನ ಕೃತಿಸ್ವಾಮ್ಯ ಸ್ಥಾನಗಳನ್ನು ಹೊಂದಿರುವ […]
ಕಾಪು: ಅ.16 ರಂದು ಜನತಾ ದರ್ಶನ ಕಾರ್ಯಕ್ರಮ
ಕಾಪು: ಅ.16 ರಂದು ಬೆಳಿಗ್ಗೆ 10 ಗಂಟೆಗೆ ಕಾಪು ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾಪು ತಾಲೂಕು ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಮತ್ತು ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಅಥವಾ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಾಗಿ ಅರ್ಜಿ ಆಹ್ವಾನ
ಉಡುಪಿ: ಜಿಲ್ಲೆಯ ಉಡುಪಿ ತಾಲೂಕಿನ ಅಂಬಲಪಾಡಿ ಗ್ರಾಮ ಪಂಚಾಯತ್‌ನ ಗ್ರಂಥಾಲಯದಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರು -1 ಹುದ್ದೆ (ಪ್ರವರ್ಗ-2(ಎ)-ಗ್ರಾಮೀಣ ಅಭ್ಯರ್ಥಿ) ಹಾಗೂ ಕುಂದಾಪುರ ತಾಲೂಕಿನ ಗುಲ್ವಾಡಿ (ಸಾಮಾನ್ಯ ಅಭ್ಯರ್ಥಿ-ಮಹಿಳೆ) ಮತ್ತು ಯಡಮೊಗೆ ಗ್ರಾಮ ಪಂಚಾಯತ್‌ನ (ಪ್ರವರ್ಗ-2(ಬಿ)-ಗ್ರಾಮೀಣ ಅಭ್ಯರ್ಥಿ) ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರು-ತಲಾ 1 ಹುದ್ದೆ ಸೇರಿದಂತೆ ಒಟ್ಟು 3 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ […]
ಎಚ್ಚೆತ್ತುಕೊಳ್ಳುತ್ತಿವೆ 50 ಸಾವಿರ ವರ್ಷಗಳಿಂದ ಗಾಢ ನಿದ್ದೆಯಲ್ಲಿರುವ ಝಾಂಬಿ ವೈರಸ್!! ಜಾಗತಿಕ ತಾಪಮಾನ ಏರಿಕೆಯ ಪರಿಣಾಮ
ಸೈಬೀರಿಯಾ: ಝಾಂಬಿ ವೈರಸ್, ಮತ್ತೊಮ್ಮೆ ಈ ವೈರಸ್ ಬಗ್ಗೆ ಚರ್ಚೆ ತೀವ್ರಗೊಂಡಿದೆ. ಈ ವೈರಸ್ ಕೊರೊನಾಕ್ಕಿಂತ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇದು ಯಾವುದೇ ಪರಿಸ್ಥಿತಿಯಲ್ಲಿ ಜೀವಂತವಾಗಿರುವ ವೈರಸ್ ಮತ್ತು ಮನುಷ್ಯರಿಗೆ ಸಾಕಷ್ಟು ಅಪಾಯಕಾರಿ ಎನ್ನಲಾಗಿದೆ. ಈ ವೈರಸ್‌ನಿಂದ ರಕ್ಷಿಸಲು ಪ್ರಸ್ತುತ ಯಾವುದೇ ಔಷಧಿ ಇಲ್ಲ. ಸಾವಿರಾರು ವರ್ಷಗಳ ಹಿಂದೆ ಹಿಮಯುಗದ ಕಾಲದಲ್ಲಿ ಈ ಅಪಾಯಕಾರಿ ವೈರಸ್ ರಷ್ಯಾದ ಹಿಮ ಸರೋವರದಲ್ಲಿ ಬಂಧಿಯಾಗಿತ್ತು. ಆದರೆ ಈಗ ಅದು ಜೀವಂತವಾಗಿದೆ. 1.5 ಮೈಕ್ರೊಮೀಟರ್‌ಗಳಷ್ಟು ಉದ್ದದ ಪಿಥೋವೈರಸ್ ಸೈಬರಿಕಮ್ ಹಿಂದಿನ ದಾಖಲೆ […]
ನವರಾತ್ರಿ ಮತ್ತು ದೀಪಾವಳಿ ಪ್ರಯುಕ್ತ ಅ.15 ಮತ್ತು 16 ರಂದು ಕೆನರಾ ರಿಟೈಲ್ ಮೇಳ-2023
ಉಡುಪಿ: ನವರಾತ್ರಿ ಮತ್ತು ದೀಪಾವಳಿ ಪ್ರಯುಕ್ತ ಅ.15 ಮತ್ತು 16 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಎಂಜಿಎಂ ಕಾಲೇಜು ಮೈದಾನದಲ್ಲಿ ಕೆನರಾ ರಿಟೈಲ್ ಮೇಳ-2023 ಅನ್ನು ಆಯೋಜಿಸಲಾಗಿದ್ದು, ಕನಸಿನ ಮನೆ, ಹೊಸ ಕಾರು ಖರೀದಿ ಹಾಗೂ ಹಳೆ ಕಾರನ್ನು ಹೊಸ ಮಾದರಿ ಕಾರಿನೊಂದಿಗೆ ವಿನಿಮಯ ಮಾಡಿಕೊಳ್ಳಲು ಸದವಕಾಶ. ವಾಹನ ಸಾಲ ಯಾವುದೇ ಪ್ರವೇಶ ಶುಲ್ಕ ಇಲ್ಲ. ಪೂರ್ವಪಾವತಿ ಪೆನಾಲ್ಟಿ ಇಲ್ಲ ಆಕರ್ಷಕ ದರದಲ್ಲಿ ಸುಲಭ ಸಾಲ ವಾಹನ ಸಾಲಕ್ಕೆ ಕೇವಲ 10% ಪಾವತಿಸಿ, […]