ಕಟಪಾಡಿ: ರಾಜ್ಯ ಮಟ್ಟದ ‘ವಿಕಸನ’ ರಜಾ ಶಿಬಿರ ಉದ್ಘಾಟನೆ

ಕಟಪಾಡಿ: ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸಿದ್ಧಾಂಥ್ ಫೌಂಡೇಶನ್ ನಡೆಸುವ ರಾಜ್ಯ ಮಟ್ಟದ ವಿಕಸನ ಶಿಬಿರದ ಉದ್ಘಾಟನೆಯು ಅಕ್ಟೋಬರ್ 9 ಸೋಮವಾರದಂದು ಕಟಪಾಡಿಯ ಎಸ್.ವಿ.ಎಸ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಸಿದ್ಧಾಂಥ್ ಫೌಂಡೇಶನ್ ನ ಟ್ರಸ್ಟಿ ನಮಿತಾ ಜಿ ಭಟ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯದೇವೇಂದ್ರ ನಾಯಕ್, ತ್ರಿಶಾ ವಿದ್ಯಾ ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ.ಅನಂತ ಪೈ, ಶಿಬಿರ ಸಂಚಾಲಕ ಧೀರಜ್ ಬೆಳ್ಳಾರೆ ಉಪಸ್ಥಿತರಿದ್ದರು. ರಾಜ್ಯ ಮಟ್ಟದಲ್ಲಿ ನಡೆಯುವ ಈ ಶಿಬಿರದಲ್ಲಿ ಹತ್ತನೇ […]
ಇಸ್ರೇಲ್ ದೇಶದಲ್ಲಿರುವ ನಾಗರಿಕರ ಮಾಹಿತಿಗಾಗಿ ಕಂಟ್ರೋಲ್ ರೂಂ ಸಂಪರ್ಕಿಸಿ

ಉಡುಪಿ: ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ, ಇಸ್ರೇಲ್ ದೇಶಗಳಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರೆ ಉದ್ದೇಶಗಳಿಗೆ ಹೋಗಿರುವ ಮತ್ತು ವಾಸವಾಗಿರುವ ಉಡುಪಿ ಜಿಲ್ಲೆಗೆ ಸಂಬಂಧಪಟ್ಟ ನಾಗರಿಕರಿದ್ದಲ್ಲಿ ಅವರ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಮಣಿಪಾಲ, ಉಡುಪಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂ ಸಂಖ್ಯೆ: 1077 ಹಾಗೂ 0820- 2574802 ಅಥವಾ ರಾಜ್ಯ ಸರ್ಕಾರದ ತುರ್ತು ಸಂಖ್ಯೆ: 080-22340676, 080-22253707 ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.