ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕ & ಹೋಂ ನರ್ಸ್ ಇಸ್ರೇಲ್‌ನಲ್ಲಿ

ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸುಮೇಶ ಅವರು ಜೇರುಸೆಲಂನಲ್ಲಿ ಸಿಲುಕಿದ್ದಾರೆ. ಇಸ್ರೆಲ್‌ನ ಜೇರುಸೆಲಂನಲ್ಲಿ ಲಾಡ್ಜ್​ನಲ್ಲಿರುವ ಸುಮೇಶ ಹವಾಮಾನ ಶಾಸ್ತ್ರದ ಕುರಿತ ತರಬೇತಿಗಾಗಿ ತೆರಳಿದ್ದರು.ಇಸ್ರೆಲ್ ಮತ್ತು ಹಮಾಸ್ ಯುದ್ಧ ನಡೆಯುತ್ತಿದ್ದು, ಪ್ರಸ್ತುತ ಧಾರವಾಡ ಓರ್ವ ವ್ಯಕ್ತಿ ಇಸ್ರೆಲ್​ನಲ್ಲಿ ಸಿಲುಕಿಕೊಂಡಿದ್ದಾರೆ. ಧಾರವಾಡದ ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕ ಹಾಗೂ ಕೋಲಾರ ಮೂಲದ ಹೋಂ ನರ್ಸ್ ಇಸ್ರೇಲ್‌ನಲ್ಲಿ ಸಿಲುಕಿದ್ದಾರೆ. ಇಸ್ರೇಲ್​ನಲ್ಲಿ ಸಿಲುಕಿದ ಕೋಲಾರ ಮೂಲದ ಮಹಿಳೆ: ಇಸ್ರೇಲ್​ನಲ್ಲಿ ಕೋಲಾರ ಜಿಲ್ಲೆ ಮಾಲೂರು ಮೂಲದ ಮಹಿಳೆ ಶಾಂತಿ ಆಲ್ಮೇಡಾ ಸಿಲುಕಿಕೊಂಡಿದ್ದಾರೆ. […]

ಆರೋಗ್ಯ ತಜ್ಞರಿಂದ ಎಚ್ಚರಿಕೆ : ವಾಯು ಮಾಲಿನ್ಯದ ಹೆಚ್ಚಳ ಮಿದುಳಿನಲ್ಲಿ ಊರಿಯುತಕ್ಕೆ ಕಾರಣ

ನವದೆಹಲಿ: ದೀಪಾವಳಿ ಆರಂಭವಾಗುತ್ತಿದ್ದಂತೆ ದೆಹಲಿ – ಎನ್​ಸಿಆರ್​ಗಳಲ್ಲಿ ಗಾಳಿ ಮಟ್ಟ ಕುಸಿಯುತ್ತದೆ. ಈ ವಾಯು ಮಾಲಿನ್ಯವೂ ಮಿದುಳಿನಲ್ಲಿ ಊರಿಯೂತಕ್ಕೆ ಕಾರಣವಾಗುವ ಸಾಧ್ಯತೆ ಇದ್ದು, ಇದು ಆತಂಕ, ಖಿನ್ನತೆ ಮತ್ತು ಸ್ಮರಣೆ ಸಮಸ್ಯೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. ಅಕ್ಟೋಬರ್​ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ನಿಮಿತ್ತ ಈ ಕುರಿತು ಎಚ್ಚರಿಸಿರುವ ವೈದ್ಯರು, ಮಾಲಿನ್ಯವೂ ಮನುಷ್ಯನ ಯೋಗಕ್ಷೇಮಕ್ಕೆ ಹಾನಿ ಮಾಡುತ್ತದೆ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ. ದೆಹಲಿಯಲ್ಲಿ ವಾಯು ಗುಣಮಟ್ಟ ಕುಸಿತವೂ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ […]

ಪಾಕ್​ ವಿರುದ್ಧ ಸಿಗುವುದೇ ಮೊದಲ ಜಯ: ಟಾಸ್​​ ಗೆದ್ದ ಶ್ರೀಲಂಕಾ ಬ್ಯಾಟಿಂಗ್​ ಆಯ್ಕೆ

ಹೈದರಾಬಾದ್ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ಸಹಾಯವಾಗುತ್ತದೆ. ಅಭ್ಯಾಸ ಪಂದ್ಯಗಳು ಸೇರಿದಂತೆ ಈ ಟೂರ್ನಿಯಲ್ಲಿ ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಕಳೆದ ಐದು ಪಂದ್ಯಗಳಲ್ಲಿ ಈ ಪಿಚ್‌ನಲ್ಲಿ ಸರಾಸರಿ ಸ್ಕೋರ್ 296 ಆಗಿದೆ. ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಫಖರ್ ಜಮಾನ್ ಕಳೆದ 10 ಇನ್ನಿಂಗ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡು ಬಂದಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅವರನ್ನು ಕೈ ಬಿಡಲಾಗಿದ್ದು, ಅವರ […]

ಸ್ಯಾಂಡಲ್​ವುಡ್​ಗೆ ರಾಧಿಕಾ ಕುಮಾರಸ್ವಾಮಿ ಸಹೋದರನ​ ಎಂಟ್ರಿ : ಹಾರರ್​ ಕಥೆಗೆ ರವಿರಾಜ್ ನಿರ್ಮಾಪಕ

ಸೌಂದರ್ಯ ಮತ್ತು ಅಭಿನಯದಿಂದಲೇ ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ರಾಧಿಕಾ ಕುಮಾರಸ್ವಾಮಿ. ನಟನೆ ಜೊತೆಗೆ ನಿರ್ಮಾಣದಲ್ಲೂ ಗುರುತಿಸಿಕೊಂಡಿರುವ ಸ್ಯಾಂಡಲ್​ವುಡ್​ ಸ್ವೀಟಿ, ಶಮಿಕಾ ಎಂಟರ್​ಪ್ರೈಸಸ್​ ಮೂಲಕ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ರವಿರಾಜ್​ ಅವರಿಗೆ ಸಿಮಾ ರಂಗ ಹೊಸತೇನಲ್ಲ. ರಾಧಿಕಾ ಅವರ ಶಮಿಕಾ ಎಂಟರ್​ಪ್ರೈಸಸ್ ಮೂಲಕ ಸಹ ನಿರ್ಮಾಪಕರಾಗಿ ಕೆಲಸ ಮಾಡಿರುವ ಅನುಭವ ಅವರಿಗಿದೆ. ‘ಲಕ್ಕಿ’, ‘ಸ್ವೀಟಿ ನನ್ನ ಜೋಡಿ’, ಭೈರಾದೇವಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಚಿತ್ರ ವಿತರಣೆ ವಿಭಾಗದಲ್ಲೂ ಕೈಯಾಡಿಸಿದ್ದಾರೆ. ಆದರೀಗ […]

ಉಡುಪಿ: ಮನೆಯೊಂದರಿಂದ 73 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಉಡುಪಿ: ನಗರದ ಲಾಲಾಲಜಪತ್​ ರಾಯ್​ ಮಾರ್ಗದ 4ನೇ ಅಡ್ಡರಸ್ತೆಯಲ್ಲಿರುವ ಮನೆಯೊಂದಕ್ಕೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು 73 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ. ಕಳ್ಳರು ಮನೆಯ ಮುಂಬಾಗಿಲಿನ ಮತ್ತು ಮಾಸ್ಟರ್​ ಬೆಡ್​ ರೂಮಿನ ಬಾಗಿಲುಗಳ ಬೀಗ ಮುರಿದು, ಕಪಾಟುಗಳನ್ನು ತೆರೆದು ಅದರಲ್ಲಿದ್ದ ಅಂದಾಜು 1,882 ಗ್ರಾಂ ತೂಕದ ಸುಮಾರು ರೂ. 66,36,300 ಮೌಲ್ಯದ ಚಿನ್ನಾಭರಣಗಳು ಹಾಗೂ 7,450 ಗ್ರಾಂ ತೂಕದ ರೂ. 6,70,500 ಮೌಲ್ಯದ ಬೆಳ್ಳಿಯ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. […]