ಕಟಪಾಡಿ ಚಿಲ್ಮಿ ಶ್ರೀಮತಿ ಮಾಲತಿ ಕಾಮತ್ ನಿಧನ

ಉಡುಪಿ: ಕಟಪಾಡಿ ಚಿಲ್ಮಿ ಶ್ರೀಮತಿ ಮಾಲತಿ ಕಾಮತ್ (51) ಅವರು ಅಲ್ಪ ಕಾಲದ ಅಸೌಖ್ಯದಿಂದ ಅ. 8 ರಂದು ನಿಧನರಾಗಿದ್ದಾರೆ. ಇವರು ಅಪಾರ ದೈವ ಭಕ್ತೆ ಹಾಗೂ ಜನಾನುರಾಗಿಯಾಗಿದ್ದರು. ಇವರು ಕಟಪಾಡಿ ಕಾಮತ್ ಸ್ನಫ್ ವರ್ಕ್ಸ್ ಇದರ ಮಾಲಕ ಶ್ರೀಧರ್ ಕಾಮತ್ ಇವರ ಧರ್ಮಪತ್ನಿ. ಇವರು ಪತಿ, ಮಗಳು ಅಳಿಯ ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಮಂಗಳೂರು ಪ್ರವೇಶಿಸಿದ ಶೌರ್ಯ ರಥ ಯಾತ್ರೆ; ನಾಳೆ ಉಡುಪಿಯಲ್ಲಿ ಭವ್ಯ ಸಮಾರೋಪ

ಮಂಗಳೂರು: ಯುವ ಸಂಘಟನೆಬಜರಂಗದಳ ನೇತೃತ್ವದಲ್ಲಿ, ವಿಶ್ವ ಹಿಂದು ಪರಿಷತ್ತಿನ 60ನೇ ವರ್ಷಾಚರಣೆ ಪ್ರಯುಕ್ತ ಸೆ.25 ರಂದು ಚಿತ್ರದುರ್ಗದಲ್ಲಿ ಆರಂಭವಾದ ಶೌರ್ಯ ರಥ ಯಾತ್ರೆಯು ರಾಜ್ಯದ ನಾನಾ ಜಿಲ್ಲೆಗಳಲ್ಲಿ 1600 ಕಿ.ಮೀ. ಸಂಚರಿಸಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ನಡೆಸಿ ಇದೀಗ ಕರಾವಳಿ ಪ್ರವೇಶಿಸಿದ್ದು, ಪುತ್ತೂರು ಮತ್ತು ಬಂಟ್ವಾಳದಲ್ಲಿ ಯಶಸ್ವಿ ಸಮಾವೇಶಗಳನ್ನು ಮುಗಿಸಿ ಇಂದು ಮಂಗಳೂರು ನಗರ ಪ್ರವೇಶಿಸಿದೆ. ನಗರದ ಹೊರವಲಯದ ಅಡ್ಯಾರಿನಲ್ಲಿ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಅಪರಾಹ್ನ ನಗರದಲ್ಲಿ ರಥಯಾತ್ರೆ ನಡೆಯಲಿದ್ದು ಇದಕ್ಕಾಗಿ ಭರ್ಜರಿ ತಯಾರಿ ನಡೆಸಲಾಗಿದೆ. ನಗರ […]
ಮಾಹೆ ವತಿಯಿಂದ ಅ.10 ಮತ್ತು 11 ರಂದು ‘ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಸಪ್ತಾಹ’ ಕಾರ್ಯಕ್ರಮ

ಮಣಿಪಾಲ: ಮಾನಸಿಕ ಯೋಗಕ್ಷೇಮವನ್ನು ಬೆಂಬಲಿಸಲು ಅದರ ನಿರಂತರ ಬದ್ಧತೆಗೆ ಅನುಗುಣವಾಗಿ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ವಿದ್ಯಾರ್ಥಿ ವ್ಯವಹಾರಗಳ ವಿಭಾಗವು ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಸಪ್ತಾಹ 2023 ರ ಭಾಗವಾಗಿ ವಿಶೇಷ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸಿದೆ. ಮಾನಸಿಕ ಆರೋಗ್ಯಕ್ಕಾಗಿ 5 ಕಿ. ಮೀ. ಗಳ ಜಾಗೃತಿ ಓಟ: ಮಾಹೆ ಕೆ.ಎಂ.ಸಿ ಮತ್ತು ಎಫ್ ಐ ಟಿ ವಿ ಐ ಬಿ (FITVIB) ಸಹಯೋಗದೊಂದಿಗೆ ಅಕ್ಟೋಬರ್ 10ರಂದು ರಂದು 5 ಕಿ. ಮೀ. ಗಳ […]
ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ ಅಸಂಘಟಿತ ಕಾರ್ಮಿಕರ ಅಪಘಾತ ವಿಮೆಗೆ ಅರ್ಜಿ ಆಹ್ವಾನ

ಉಡುಪಿ: ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಕ್ರೋಢಿಕರಿಸುವ ಉದ್ದೇಶದಿಂದ 379 ವರ್ಗಗಳ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಲಾಗುತ್ತಿದ್ದು, 2022 ರ ಮಾರ್ಚ್ 31 ರ ಒಳಗೆ ನೋಂದಣಿಯಾಗಿ ಮತ್ತು ಸದರಿ ದಿನಾಂಕದೊಳಗೆ ಅಪಘಾತಗೊಂಡ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ 2 ಲಕ್ಷ ರೂ. ಗಳ ಅಪಘಾತ ಪರಿಹಾರವನ್ನು ಒದಗಿಸಲಾಗುತ್ತಿದ್ದು, ಅರ್ಹ ಅಸಂಘಟಿತ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಪಘಾತದಿಂದ ಮರಣ ಹೊಂದಿದ್ದಲ್ಲಿ ಫಲಾನುಭವಿಯ ಆಧಾರ್ ಸಂಖ್ಯೆ, ಯು.ಎ.ಎನ್ ಕಾರ್ಡ್ […]
ಪಂಚ ರಾಜ್ಯ ಚುನಾವಣಾ ದಿನಾಂಕ ಪ್ರಕಟ: ನವೆಂಬರ್ 7 ರಿಂದ 30 ಚುನಾವಣೆ; ಡಿ.3 ರಂದು ಫಲಿತಾಂಶ

ನವದೆಹಲಿ: ಭಾರತದ ಚುನಾವಣಾ ಆಯೋಗವು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ್ದು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಚುನಾವಣೆಯ ದಿನಾಂಕ ನಿಗದಿಯಾಗಿದೆ. ಛತ್ತೀಸ್ಗಢ : 7-17 ನವೆಂಬರ್ ಮಧ್ಯಪ್ರದೇಶ : 17 ನವೆಂಬರ್ ರಾಜಸ್ಥಾನ: 23 ನವೆಂಬರ್ ತೆಲಂಗಾಣ: 30 ನವೆಂಬರ್ ಮಿಜೋರಾಂ: 7 ನವೆಂಬರ್ ಫಲಿತಾಂಶಗಳ ಪ್ರಕಟಣೆ: 3 ಡಿಸೆಂಬರ್