ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ಉಡುಪಿ: ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು 58 ಹುದ್ದೆಗಳ ವಿವರ ಸೂಪರ್‌ವೈಸರ್ -18 ಆಫೀಸ್ ಅಸಿಸ್ಟೆಂಟ್, ಬೂತ್ ಆಪರೇಟರ್ಸ್- 16 ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 02 ಸೀನಿಯರ್ ಮ್ಯಾನೇಜರ್- 01 ಮ್ಯಾನೇಜರ್- 08 ಡೆಪ್ಯೂಟಿ ಮ್ಯಾನೇಜರ್- 01 ಅಸಿಸ್ಟೆಂಟ್ ಮ್ಯಾನೇಜರ್- 12 ವಿದ್ಯಾರ್ಹತೆ ಮ್ಯಾನ್ಯತೆ ಪಡೆದ ವಿವಿ ಅಥವಾ ಶಿಕ್ಷಣ ಮಂಡಳಿಯಿಂದ ಹುದ್ದೆಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ/ಡಿಪ್ಲೊಮಾ/ಐಟಿಐ/ಪದವಿ/ಸ್ನಾತಕೋತ್ತರ ಪದವಿ/ಚಾರ್ಟ್‌ಡ್ ಅಕೌಂಟೆಂಟ್/ಕಾಸ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು. ಹುದ್ದೆಗೆ ಸಂಬಂಧಿತ ವಿಷಯದಲ್ಲಿ […]
ವಿದ್ಯಾರ್ಥಿ ಜೀವನದಲ್ಲಿ ನೈತಿಕ ಮೌಲ್ಯ ಅಳವಡಿಸಿಕೊಳ್ಳಲು ಎನ್.ಎಸ್.ಎಸ್ ಸಹಕಾರಿ: ಡಾ. ಗಣನಾಥ ಎಕ್ಕಾರು

ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವ, ಸಹಕಾರ, ಸಹಬಾಳ್ವೆ ಮುಂತಾದ ಜೀವನದ ನೈತಿಕ ಮೌಲ್ಯಗಳನ್ನು ಕಲಿತು ಅಳವಡಿಸಿಕೊಳ್ಳಲು ಎನ್. ಎಸ್. ಎಸ್ ಸಹಕಾರಿಯಾಗುತ್ತದೆ ಎಂದು ನಿಕಟ ಪೂರ್ವ ರಾಷ್ಟ್ರೀಯ ಸೇವಾ ಯೋಜನಾ ಸಂಪರ್ಕಾಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಹೇಳಿದರು. ನಗರದ ಡಾ. ಜಿ. ಶಂಕರ್. ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಯು. ಜಿ. ಸ್ ಸಭಾಂಗಣದಲ್ಲಿ ಮಂಗಳವಾರ ಎನ್.ಎಸ್.ಎಸ್ ಘಟಕ-1 ಮತ್ತು ಘಟಕ-2 ರ ಪ್ರಸ್ತುತ ಶೈಕ್ಷಣಿಕ ಸಾಲಿನ ಕಾರ್ಯಕ್ರಮಗಳನ್ನು […]
ನಾಳೆ (ಸೆ. 29) ಕರ್ನಾಟಕ ಬಂದ್: ಸಾರಿಗೆ ಸಂಚಾರ ಅಸ್ತವ್ಯಸ್ತ ಸಾಧ್ಯತೆ; ಅಗತ್ಯ ಸೇವೆಗಳು ಅಬಾಧಿತ

ಬೆಂಗಳೂರು: ರಾಜ್ಯದ ಜನರು ನೀರಿಗಾಗಿ ತತ್ತರಿಸುತ್ತಿರುವಾಗ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ನಾಳೆ (ಸೆಪ್ಟೆಂಬರ್ 29 ಶುಕ್ರವಾರ) ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಬಂದ್‌ನಲ್ಲಿ ಪಾಲ್ಗೊಳ್ಳಲು ಹಲವು ಸಂಘಟನೆಗಳು ಮುಂದೆ ಬಂದು ಬೆಂಬಲ ಸೂಚಿಸಿವೆ. ರಾಜ್ಯದ ನಾನಾ ಭಾಗಗಳಲ್ಲಿರುವ ಸ್ಥಳೀಯ ಸಂಘಟನೆಗಳು ಕೂಡಾ ಜೈಜೋಡಿಸಿವೆ. ಕರ್ನಾಟಕ ಬಂದ್ಗೆ ನೈತಿಕ ಬೆಂಬಲ ನೀಡಲು […]
ಶ್ರೀ ದುರ್ಗಾ ಆದಿಶಕ್ತಿಕ್ಷೇತ್ರದಲ್ಲಿ ಅಭೂತಪೂರ್ವಾಗಿ ಸಂಪನ್ನಗೊಂಡ ಶ್ರೀ ಚಕ್ರ ಮಂಡಲ ಪೂಜೆ

ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಏಕಕಾಲ ಶ್ರೀಚಕ್ರ ಮಂಡಲ ಪೂಜೆಯು ಅಭೂತಪೂರ್ವವಾಗಿ ಸಂಪನ್ನಗೊಂಡಿತು. ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಋತ್ವಿಜೋತ್ತಮರ ಸಮಕ್ಷಮದಲ್ಲಿ ಬಹು ವಿಜೃಂಭಣೆಯಿಂದ ಪೂಜೆ ಸಂಪನ್ನಗೊಂಡಿತು. ಶ್ರೀಚಕ್ರ ಮಾತೆಯಾದ ರಾಜರಾಜೇಶ್ವರಿ ದೇವಿಯನ್ನು ಲಲಿತಾ ಸ್ತುತಿಯೊಂದಿಗೆ ಆರಾಧಿಸಿ ಸಂಪ್ರೀತಗೊಳಿಸುವ ಈ ಮಹಾನ್ ಪೂಜೆಗಾಗಿ ವಿಶೇಷವಾಗಿ ರಚಿಸಲ್ಪಟ್ಟ ಹೂವಿನ ಅಲಂಕೃತ ಮಂಟಪದೊಳಗೆ ಪಂಚವರ್ಣಾತ್ಮಕವಾಗಿ ರಚಿಸಲ್ಪಟ್ಟ ಶ್ರೀ ಚಕ್ರ ಯಂತ್ರ ಮಂಡಲದಲ್ಲಿ […]
ಒಟಿಪಿ ಇಲ್ಲದೆಯೇ ಆಧಾರ್ ದತ್ತಾಂಶ ಬಳಸಿ ಬ್ಯಾಂಕ್ ನಿಂದ ಹಣ ಎಗರಿಸುತ್ತಿರುವ ವಂಚಕರು; ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಿದವರಿಗೆ ತಲೆನೋವಾದ ಸೈಬರ್ ಕಳ್ಳರು

ಮಂಗಳೂರು: ಸೈಬರ್ ಕಳ್ಳರು ಆಧಾರ್ ಬಯೋಮೆಟ್ರಿಕ್ ದತ್ತಾಂಶಗಳನ್ನು ಕದ್ದು ನಂತರ ಜನರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಒಟಿಪಿ ಇಲ್ಲದೆಯೇ ಎಗರಿಸುತ್ತಿರುವ ಘಟನೆ ನಗರದಲ್ಲಿ ವರದಿಯಾಗುತ್ತಿದೆ. ಹೊಸ ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಹಲವರು ತಮ್ಮ ಆಧಾರ್ ಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ತಲಾ 10,000 ರೂ ಕಳೆದುಕೊಂಡಿದ್ದಾರೆ. ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿಗಾಗಿ ಬಯೋಮೆಟ್ರಿಕ್ಸ್ ಮತ್ತು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ವಿವರಗಳನ್ನು ತೆಗೆದುಕೊಂಡ ನಂತರ ಅನೇಕರು ಇದೇ […]