ಕಾವೇರಿ ನಾವು ಕೊಡೆವು; ನಾವು ಬಿಡೆವು: ಕರ್ನಾಟಕ-ತಮಿಳುನಾಡಿನಲ್ಲಿ ‘ಕಾವೇರಿ’ದ ಜಲ ಕದನ; ಬೆಂಗಳೂರು ಬಂದ್ ಗೆ ಕರೆ ನೀಡಿದ ಸಂಘಟನೆಗಳು
ಚೆನ್ನೈ: ಭಾನುವಾರ ತಮಿಳುನಾಡಿನಲ್ಲಿ ಕಾವೇರಿ ಜಲವಿವಾದದ ಪ್ರತಿಭಟನೆ ತೀವ್ರಗೊಂಡಿದ್ದು, ತಿರುಚ್ಚಿಯ ರೈತರು ತಮ್ಮ ರಾಜ್ಯಕ್ಕೆ ನದಿ ನೀರು ಬಿಡುವಂತೆ ಒತ್ತಾಯಿಸಿದ್ದತೆ ಇತ್ತ ಕನ್ನಡ ಪರ ಸಂಘಟನೆಗಳು ಹಾಗೂ ಮಂಡ್ಯದಲ್ಲಿ ರೈತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ನೆರೆಯ ರಾಜ್ಯಕ್ಕೆ ಕಳುಹಿಸುವಷ್ಟು ನೀರಿಲ್ಲ ಎಂಬುದು ಕರ್ನಾಟಕ ಸರ್ಕಾರದ ವಾದವಾದರೂ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಾಜತಾಂತ್ರಿಕವಾಗಿ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಡಿಎಂಕೆ ಹೇಳಿದೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಎರಡೂ ರಾಜ್ಯಗಳ ರೈತರು ತಮ್ಮ ಪ್ರತಿಭಟನೆಯನ್ನು […]
ಪ್ರದೀಪ್ ಕುಕ್ಕುಡೆ ಕಂಠಸಿರಿಯ “ಮೋರೆಯಾ ಮೋರೆಯಾ” ಗಣಪತಿ ಸ್ತುತಿ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆ
ಉಡುಪಿ: ಹಿಂದುಸ್ತಾನಿ ಗಾಯಕ ಪ್ರದೀಪ್ ಕುಕ್ಕುಡೆ ಇವರ “ಮೋರೆಯಾ ಮೋರೆಯಾ” ಗಣಪತಿ ಸ್ತುತಿ ಹಾಡು ಇಷ್ಟ ಸಿದ್ದಿವಿನಾಯಕ ಉತ್ಸವ ಸಮಿತಿ ಉಪ್ಪೂರಿನಲ್ಲಿ “ಪ್ರದೀಪ್ ಸಪ್ತಸ್ವರ” ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಯಿತು. ಶಕಲಕ ಬೂಂ ಬೂಂ ಚಿತ್ರದ ನಿರ್ಮಾಪಕ ನಿತ್ಯಾನಂದ್ ನಾಯಕ್ ನರಸಿಂಗೆ ಹಾಡಿನ ಪೋಸ್ಟರ್ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ಇಷ್ಟ ಸಿದ್ದಿವಿನಾಯಕ ಉತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ದಯಾನಂದ್ ಕರ್ಕೇರ ಉಗ್ಗೆಲ್ ಬೆಟ್ಟು ನಿರೂಪಿಸಿದರು.
ದೊಡ್ಡಣ್ಣಗುಡ್ಡೆ: ಸೆ. 27 ರಂದು ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಏಕಕಾಲ ಶ್ರೀ ಚಕ್ರ ಮಂಡಲ ಪೂಜೆ
ದೊಡ್ಡಣ್ಣಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸೆ. 27, ಬುಧವಾರದಂದು ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಏಕಕಾಲ ಶ್ರೀ ಚಕ್ರ ಮಂಡಲ ಪೂಜೆ ನೆರವೇರಲಿದೆ. ಬಹು ವಿಶೇಷವೂ ಫಲಪ್ರದವೂ ಆದ ಈ ಮಹಾನ್ ಪೂಜೆಯನ್ನು ಕಣ್ತುಂಬಿಸಿಕೊಂಡು ಶ್ರೀ ರಾಜರಾಜೇಶ್ವರಿಯ ಅನುಗ್ರಹಕ್ಕೆ ಪಾತ್ರರಾಗಲು ಅವಕಾಶವಿದೆ. ಸೇವಾರ್ಥಿಯೋರ್ವರ ಪ್ರಾಯಶ್ಚಿತ್ತ ಪೂರ್ವಕವಾಗಿ ಈ ಪೂಜೆ ನೆರವೇರಲಿದೆ. ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸೇವಾದಾರರ ಬಾಪ್ತು ಕ್ಷೇತ್ರಕ್ಕೆ ಸಮರ್ಪಿತವಾಗಲಿದೆ. ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ […]
ಸೆ.25-ವಿಶ್ವ ಫಾರ್ಮಸಿಸ್ಟ್ ದಿನ; ನಂಬಿಕೆಗೆ ಪ್ರತೀಕವಾದ ಫಾರ್ಮಸಿಸ್ಟ್‌ಗಳ ಸೇವೆಗೆ ನಮ್ಮದೊಂದು ಸಲಾಂ!
ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್‌ಗಳ ಸೇವೆ ಅನನ್ಯವಾಗಿದೆ. ವಿವಿಧ ರೋಗಗಳ ವಿರುದ್ಧ ಪರಿಣಾಮಕಾರಿ ಔಷಧ ಕಂಡುಹಿಡಿದು ರೋಗಿಗಳಿಗೆ ಸೂಕ್ತ ಪ್ರಮಾಣ ನೀಡುವಲ್ಲಿ ಮಹತ್ತರ ಪಾತ್ರ ಹೊಂದಿದ್ದಾರೆ. 2009ರಲ್ಲಿ ಇಂಟರ್‌ನ್ಯಾಶನಲ್ ಫಾರ್ಮಸುಟಿಕಲ್ ಫೆಡರೇಶನ್‌ನ ಆದೇಶದಂತೆ ಪ್ರತಿ ವರ್ಷ ಸೆಪ್ಟಂಬರ್ 25ರಂದು ವಿಶ್ವದಾದ್ಯಂತ ಫಾರ್ಮಸಿಸ್ಟ್ ದಿನ ಆಚರಿಸಲಾಗುತ್ತಿದೆ. ಸೆ.25-ವಿಶ್ವ ಫಾರ್ಮಸಿಸ್ಟ್ ದಿನ; ನಂಬಿಕೆಗೆ ಪ್ರತೀಕವಾದ ಫಾರ್ಮಸಿಸ್ಟ್‌ಗಳ ಸೇವೆಗೆ ನಮ್ಮದೊಂದು ಸಲಾಂ! ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವೇ ಎನಿಸಿಕೊಂಡ ಫಾರ್ಮಸಿ ವಿಭಾಗ ಹಲವು ವರ್ಷಗಳಿಂದ ತನ್ನದೆ ಆದ ಛಾಪು ಮೂಡಿಸಿದೆ. 2009ರಲ್ಲಿ ಇಂಟರ್‌ನ್ಯಾಶನಲ್ […]