ಕರಾವಳಿಯಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯ ಮುನ್ಸೂಚನೆ
ಉಡುಪಿ: ಕರಾವಳಿಯ ಪ್ರತ್ಯೇಕ ಜಿಲ್ಲೆಗಳಲ್ಲಿ ಸೆ.17 ಮತ್ತು 18 ರಂದು ಗುಡುಗು-ಸಿಡಿಲು ಸಹಿತ ಭಾರೀ ಮಳೆಯ(64.5mm ನಿಂದ 115.5 mm) ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಸಮುದ್ರ ಪ್ರಕ್ಷುಬ್ದವಾಗಿದ್ದು 40-45 ಕಿ.ಮೀ/ಗಂಟೆ ವೇಗದಲ್ಲಿ ಗಾಳಿ ಬೀಸಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಬದುಕಿನ ಪ್ರತಿಯೊಂದು ಘಟ್ಟದಲ್ಲೂ ಸರ್ ಎಂ. ವಿಶ್ವೇಶ್ವರಯ್ಯನವರ ಆದರ್ಶ ಪ್ರತಿಫಲಿಸಲಿ: ಉಮೇಶ್ ಭಟ್
ಉಡುಪಿ: ಸರ್ ಎಂ. ವಿಶ್ವೇಶ್ವರಯ್ಯನವರು ನಾಡಿಗೆ ಸಮರ್ಪಿಸಿದ ಕೆಆರ್‍ಎಸ್ ಅಣೆಕಟ್ಟು ನಾವೀನ್ಯದ ಕ್ರಾಂತಿಕಾರಿ ಚಿಂತನೆಯಾಗಿದ್ದು ಪ್ರತಿಯೊಬ್ಬರ ನಡೆ, ನುಡಿ, ಬದುಕಿನ ಮೌಲ್ಯದಲ್ಲಿ ಸರ್ ಎಂವಿ ಪ್ರತಿಬಿಂಬಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಉಮೇಶ್ ಭಟ್ ಹೇಳಿದರು. ಅವರು ಬ್ರಹ್ಮಗಿರಿಯ ಎಜಿಎ ಕಾಂಟಿಲಿವರ್‍ನಲ್ಲಿರುವ ಎ. ಜಿ. ಎಸೋಸಿಯೇಟ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಂಜಿನಿಯರ್ಸ್ ದಿನಾಚರಣೆಯಲ್ಲಿ ಮಾತನಾಡಿ, ನಿಗದಿತ ಸಮಯದೊಳಗೆ ಯಾವುದೇ ಯೋಜನೆ ಪೂರ್ಣಗೊಳ್ಳದಿದ್ದರೆ ಖರ್ಚು ಹೆಚ್ಚಲಿದೆ, ಸಾರ್ವಜನಿಕ ಯೋಜನೆಗಳಿಗೆ ಜನರ ತೆರಿಗೆ ಹಣ ಪೋಲಾಗುತ್ತದೆ. ಶಿಸ್ತು, […]
ವಿವಿಧ ಆಟೋಟ ಸ್ಪರ್ಧೆಗಳು: ಶ್ರೀ.ವೆಂ.ಪ.ಪೂ. ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಂದಾಪುರ: ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಸಿನನ್ ದ್ವಿತೀಯ ಸ್ಥಾನವನ್ನು ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದು, 800 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರವಣ್ ದ್ವಿತೀಯ ಸ್ಥಾನವನ್ನು ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಥ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ […]
ಸೌಜನ್ಯ ಪ್ರಕರಣದ ಮರುತನಿಖೆ ಹೋರಾಟಗಾರ ಬೇಡಿಕೆ: ಗಿರೀಶ್ ಮಟ್ಟೆಣ್ಣನವರ್
ಉಡುಪಿ: ಸೌಜನ್ಯ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ ಆದರೆ ಹೋರಾಟಗಾರರು ಮರುತನಿಖೆಗೆ ಬೇಡಿಕೆ ಇಟ್ಟಿದ್ದಾರೆ. ಮೇಲ್ಮನವಿಯಿಂದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಮತ್ತು ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಆವಕಾಶ ನೀಡಿದಂತಾಗುತ್ತದೆ ಎಂದು ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣನವರ್ ಹೇಳಿದರು. ಶುಕ್ರವಾರ ಮಲ್ಪೆ ಸೀ-ವಾಕ್ ಪ್ರದೇಶದಲ್ಲಿ ಯುವ ಭಾರತ್ ಕರ್ನಾಟಕ ಸಂಟನೆ ವತಿಯಿಂದ ‘ಸೌಜನ್ಯ ನಮ್ಮ ಮಗಳು’ ಜನಾಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಫ್ಐ ಅರ್ ನಲ್ಲಿ ಸಂತೋಷ್ ರಾವ್ ಹೆಸರು ಮಾತ್ರ ಇದೆ. ಜೊತೆಗೆ ಸಿಬಿಐ ನ್ಯಾಯಾಲಯ ಈಗಾಗಲೇ […]
ಬಣ್ಣಹಚ್ಚುವ ಮೂಲಕ ಪುಟ್ಟ ಕಂದಮ್ಮನಿಗೆ ಸಹಾಯದ ಗುರಿ ಹೊಂದಿರುವ ಮಂಗಳಾದೇವಿ ಫ್ರೆಂಡ್ಸ್ ಗೆ ಬೇಕಾಗಿದೆ ದಾನಿಗಳ ಸಹಕಾರ
ಮಣಿಪಾಲ: ಮಂಗಳಾದೇವಿ ಫ್ರೆಂಡ್ಸ್ ಮಣಿಪಾಲ ವತಿಯಿಂದ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ವಿಭಿನ್ನ ವೇಷಗಳ ಮೂಲಕ ಪುಟ್ಟ ಕಂದನ ಚಿಕಿತ್ಸೆಗೆ ಧನ ಸಂಗ್ರಹ ಮಾಡುವ ಗುರಿಹೊಂದಿದ್ದು, 8 ವರ್ಷದ ಕು. ಅಮೂಲ್ಯ ಎಂಬ ಮಗುವಿಗೆ ಟ್ರಾನ್ಸ ಫ್ಯೂಷನ್ ಡಿಪೆಂಡೆಂಟ್ ಥಲಸ್ಸೆಮಿಯಾ ಚಿಕಿತ್ಸೆಗೆ ಧನ ಸಂಗ್ರಹಣೆ ಮಾಡುತ್ತಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆಕೆಗೆ ಅಸ್ಥಿಮಜ್ಜೆ ಕಸಿ ಮಾಡಲು ಯೋಜಿಸಲಾಗಿದೆ ಚಿಕಿತ್ಸೆ ವೆಚ್ಚ ಅಂದಾಜು 32 ಲಕ್ಷ ರೂ ಆಗಲಿದೆ. ಆರ್ಥಿಕ ಸಹಾಯ ಮಾಡಲು ಬಯಸುವವರು ಕೆಳಕಂಡ ಖಾತೆಗೆ ಹಣ ವರ್ಗಾಯಿಸಬಹುದು. […]