ಉಡುಪಿ: ಎಲ್.ಐ.ಸಿ. ಎಂಪ್ಲಾಯೀಸ್ ಕೋ-ಅಪರೇಟಿವ್ ಬ್ಯಾಂಕಿನಲ್ಲಿ ಎ.ಟಿ.ಎಂ. ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳ ಚಾಲನೆ
ಉಡುಪಿ: ಎಲ್.ಐ.ಸಿ. ಎಂಪ್ಲಾಯೀಸ್ ಕೋ-ಅಪರೇಟಿವ್ ಬ್ಯಾಂಕಿನಲ್ಲಿ ಎ.ಟಿ.ಎಂ. ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳ ಸೇವೆಯು ಇತ್ತೀಚಿಗೆ ಪ್ರಾರಂಭಗೊಂಡಿತು. ಎಲೈಸಿಯ ಉಡುಪಿ ವಿಭಾಗೀಯ ಕಛೇರಿಯ ಹಿರಿಯ ವಿಭಾಗಾಧಿಕಾರಿ ರಾಜೇಶ್ ವಿ. ಮುದೋಳ್ ಎ.ಟಿ.ಎಂ ಅನ್ನು ಉದ್ಘಾಟಿಸಿ, ರುಪೇ ಕಾರ್ಡ್ ಬಿಡುಗಡೆಗೊಳಿಸಿ 61 ವರ್ಷಗಳ ಯಶಸ್ವಿ ಗ್ರಾಹಕ ಸೇವೆಯನ್ನು ಪೂರೈಸಿದ ಬ್ಯಾಂಕಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಎ.ಟಿ.ಎಂ ಮತ್ತು ವಿವಿಧ ಡಿಜಿಟಲ್ ಸೌಲಭ್ಯಗಳು ಎಲ್ಲಾ ಗ್ರಾಹಕರಿಗೂ ತಲುಪುವಂತಾಗಲಿ ಹಾಗೂ ಮುಂದಿನ ದಿನಗಳಲ್ಲಿ ಬ್ಯಾಂಕು ಜನಸೇವೆ ನೀಡಿ ಅಭಿವೃದ್ಧಿ ಹೊಂದುವಂತಾಗಲಿ ಎಂದು ಶುಭ […]
ಸೆ. 12 ರಿಂದ 14 ರವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ
ಉಡುಪಿ: ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ, ಹೆಸರು ಸೇರ್ಪಡೆ/ತೆಗೆಯುವುದು, ವಿಳಾಸ ಬದಲಾವಣೆ, ಸದಸ್ಯರ ಹೆಸರು ತಿದ್ದುಪಡಿಗೆ , ಸೆಪ್ಟಂಬರ್ 12 ರಿಂದ 14 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 8 ರ ವರೆಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿದ್ದು, ನಿಗದಿಪಡಿಸಿದ ಅವಧಿಯೊಳಗೆ ಕರ್ನಾಟಕ ಒನ್,ಗ್ರಾಮ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.
ಉಡುಪಿ ಜಿಲ್ಲಾ ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಂಘದ ವಾರ್ಷಿಕ ಮಹಾಸಭೆ
ಉಡುಪಿ: ಉಡುಪಿ ಜಿಲ್ಲಾ ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಂಘದ ವಾರ್ಷಿಕ ಮಹಾಸಭೆಯು ಸೆ.10 ರಂದು ರಾಧಾಕೃಷ್ಣ ಸಾಮಂತ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದ ಸಾಮಂತ್, ಇಂತಹ ಕಾರ್ಯಕ್ರಮದ ಮೂಲಕ ಸದಸ್ಯರು ಸೇರಿಕೊಳ್ಳುವ ಅಗತ್ಯವನ್ನು ವಿವರಿಸಿ ಎಲ್ಲಾ ಕಾರ್ಯಕ್ರಮಗಳಿಗೆ ಸದಸ್ಯರಿಂದ ಇನ್ನೂ ಹೆಚ್ಚಿನ ಸಹಕಾರವನ್ನು ಕೋರಿದರು. ಈ ಸಂದರ್ಭದಲ್ಲಿ ಮಹೇಶ್ ಠಾಕೂರ್, ಭರತ್ ಪ್ರಭು, ಹಾಗೂ ಮನೋಜ್ ಪ್ರಭು ಇವರು ನೀಡಿದ ಆರ್ಥಿಕ ಸಹಾಯವನ್ನು ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ […]
ಹೆಚ್ಚುತ್ತಿರುವ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ವೈದ್ಯರ ಸಲಹೆ
ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಇದು ಅಕ್ಷರಶ ಸತ್ಯ. ಡೆಂಗ್ಯೂ ಜ್ವರವನ್ನು ನಿಯಂತ್ರಿಸಲು ಸೊಳ್ಳೆಗಳ ನಿರ್ಮೂಲನವಾಗಬೇಕು ಎಂಬ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯವರು ಶ್ರಮಿಸುತ್ತಿದ್ದಾರೆ. ಇದು ಪ್ರಶಂಸಾರ್ಹ. ಗಮನಿಸಬೇಕಾದ ಅಂಶವೆಂದರೆ ಈ ವರ್ಷ ಮಲೇರಿಯಾ ಜ್ವರವು ಅತಿ ಕಡಿಮೆ ವರದಿಯಾಗುತ್ತಿದೆ. ಮಲೇರಿಯಾ ಜ್ವರ ಹಾಗೂ ಡೆಂಗ್ಯೂ ಜ್ವರ ಎರಡಕ್ಕೂ ಸೊಳ್ಳೆಗಳೇ ವಾಹಕವಾಗಿರುವುದರಿಂದ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ವ್ಯಾಪಕವಾಗಿದ್ದ ಮಲೇರಿಯಾ ಮಾತ್ರ ಈ ಬಾರಿ ಕಡಿಮೆಯಾಗಿ ಕೇವಲ ಡೆಂಗ್ಯೂ ಜ್ವರವೇ ವ್ಯಾಪಕವಾಗಿರಲು ಕಾರಣವೇನು? ಡೆಂಗ್ಯೂ ಜ್ವರ […]
ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಕಲೆಯ ಉಳಿವು ಸಾಧ್ಯ: ಡಾ.ಶಿವರಾಮ್ ಶೆಟ್ಟಿ ತಲ್ಲೂರು
ಮಂಗಳೂರು: ಯಕ್ಷಗಾನ ಕಲೆಯಲ್ಲಿ ಅದ್ಭುತ ಶಕ್ತಿಯಿದೆ. ಯಕ್ಷಗಾನ ಕಲಿಯುವ ಮಕ್ಕಳು ಗುರುಹಿರಿಯರಿಗೆ ಗೌರವ ಕೊಡುತ್ತಾರೆ. ನವರಸಗಳನ್ನು ಮೇಳೈಸಿರುವ ಈ ಕಲೆಯನ್ನು ಶಾಲಾ ಕಾಲೇಜುಗಳಲ್ಲಿ ಕಲಿಸುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಭವಿಷ್ಯದಲ್ಲಿ ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗೂ ಸಾಕಾರವಾಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಮಂಗಳೂರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೃಷ್ಣಾಪುರ -ಕಾಟಿಪಳ್ಳ, ಯುವಕ ಮಂಡಲ ಕೃಷ್ಣಾಪುರ ಕೇಂದ್ರ […]