ಭಂಡಾರ್ಕಾರ್ಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಡಾ.ಸರೋಜ ಎಂ ಇವರಿಗೆ ಅತ್ಯುತ್ತಮ ಜೀವಶಾಸ್ತ್ರ ಉಪನ್ಯಾಸಕ ಪ್ರಶಸ್ತಿ

ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಡಾ.ಸರೋಜ ಎಂ. ಇವರಿಗೆ ಯುಥ್ ಎಫರ್ಟ್ಸ್ ಫಾರ್ ಸೊಸೈಟಿ ಇವರು ಕೊಡಮಾಡುವ ಅತ್ಯುತ್ತಮ ಜೀವಶಾಸ್ತ್ರ ಉಪನ್ಯಾಸಕ ಪ್ರಶಸ್ತಿ ಮತ್ತು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಗೌರವ ದೊರೆತಿದೆ. ಇವರಿಗೆ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 12 ರಂದು ನಂದ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಮಿನಿ ಉದ್ಯೋಗ ಮೇಳ

ಉಡುಪಿ: ಸೆಪ್ಟಂಬರ್ 12 ರಂದು ಬೆಳಗ್ಗೆ 10:30 ಗಂಟೆಗೆ ಸಂರ್ಪರ್ಕ ಜೆರಾಕ್ಸ್ ಹತ್ತಿರ ಬಿ.ಎಸ್.ಲ್ ಇಂಡಿಯಾ ಪ್ರೈ ,ಲಿ, 2ನೇ ಮಹಡಿ ನಂದ ಕಮರ್ಷಿಯಲ್ ಕಾಂಪ್ಲೆಕ್ಸ್ ಕೋರ್ಟ್ ರೋಡ್ ಉಡುಪಿ ಇಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಮತ್ತು ಡಿಪ್ಲೋಮಾ ಬಿ.ಸಿ.ಎ, ಎಮ್.ಸಿ.ಎ, ಬಿ.ಕಾಂ-(ಕಂಪ್ಯೂಟರ್ ಸೈನ್ಸ್) ಬಿ.ಎಸ್ಸಿ ಎಮ್.ಎಸ್ಸಿ, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, ಬಿ.ಇ ಇಂಜಿನಿಯರಿಂಗ್ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ […]
ತುಳುಕೂಟ ಉಡುಪಿ ಅಧ್ಯಕ್ಷರಾಗಿ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಪುನರಾಯ್ಕೆ

ಉಡುಪಿ: ತುಳುಕೂಟ ಉಡುಪಿ ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಪುನರಾಯ್ಕೆಯಾಗಿದ್ದಾರೆ. ಉಡುಪಿ ನಗರದ ಜಗನ್ನಾಥ ಸಭಾಭವನದಲ್ಲಿ ಇತ್ತೀಚೆಗೆ ನಡೆದ ತುಳು ಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸ್ಥಾಪಕಾಧ್ಯಕ್ಷರಾಗಿ ಡಾ.ಭಾಸ್ಕರಾನಂದ ಕುಮಾರ್, ಉಪಾಧ್ಯಕ್ಷರಾಗಿ ಭುವನ ಪ್ರಸಾದ ಹೆಗ್ಡೆ, ಮನೋರಮ ಎಸ್.ಶೆಟ್ಟಿ. ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಕಿದಿಯೂರ್, ಜತೆ ಕಾರ್ಯದರ್ಶಿಯಾಗಿ ಮೋಹನ್ ಶೆಟ್ಟಿ ಮೂಡ ನಿಡಂಬೂರು, ರಶ್ಮಿ ರಮೇಶ್ ಶೆಣೈ, ಸಂತೋಷ್ ಕುಮಾರ್, ಕೋಶಾಧಿಕಾರಿಯಾಗಿ ಚೈತನ್ಯ ಎಂ.ಜಿ., ಸಂಘಟನಾ ಕಾರ್ಯದರ್ಶಿಗಳಾಗಿ […]
ಉಡುಪಿ: ಮುಂಬೈಯಿಂದ ಮರಳಿದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಉಡುಪಿ: ಮುಂಬೈಯಿಂದ ರಾತ್ರಿ ವೇಳೆ ಬಂದ ವ್ಯಕ್ತಿಯೊಬ್ಬರು ಮನೆಯ ಹೊರಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಅಂಬಾಗಿಲು ಪೆರಂಪಳ್ಳಿಯ ಕಕ್ಕಿಂಜೆ ದೇವಿನಗರ ಎಂಬಲ್ಲಿ ನಡೆದಿದೆ. ಮೃತರನ್ನು ದೇವಿನಗರದ ಸುಕೇಶ್ ಶೆಟ್ಟಿ(51) ಎಂದು ಗುರುತಿಸಲಾಗಿದೆ. ಮುಂಬೈಯಲ್ಲಿ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ರಾತ್ರಿ ಹೊತ್ತಿನಲ್ಲಿ ಮುಂಬೈಯಿಂದ ಆಗಮಿಸಿದ್ದು ಮನೆಯ ಹೊರಗಡೆ ಇರುವ ಬಟ್ಟೆ ಒಗೆಯುವ ಸ್ಥಳದಲ್ಲಿ ಕಬ್ಬಿಣದ ಪೈಪಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಮಾಜ ಸೇವಕ ನಿತ್ಯಾನಂದ […]
ಭ್ರಷ್ಟಾಚಾರ ಆರೋಪ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ

ಹೈದರಾಬಾದ್: ನಾಟಕೀಯ ಬೆಳವಣಿಗೆಯಲ್ಲಿ, ಆಂಧ್ರ ಪ್ರದೇಶದ ಸಿಐಡಿ ಪೊಲೀಸರು ಸೆಪ್ಟೆಂಬರ್ 9 ರಂದು ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರನ್ನು ಕರ್ನೂಲ್‌ನಿಂದ 65 ಕಿಮೀ ದೂರದಲ್ಲಿರುವ ನಂದ್ಯಾಲ್‌ನಲ್ಲಿ ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್‌ನಲ್ಲಿನ ಭ್ರಷ್ಟಾಚಾರದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ, ಪೊಲೀಸರು ಶುಕ್ರವಾರ ಮಧ್ಯರಾತ್ರಿಯಿಂದಲೇ ಕರ್ನೂಲ್, ನಂದ್ಯಾಲ್ ಮತ್ತು ಅನಂತಪುರ ಜಿಲ್ಲೆಗಳಿಂದ ಹಲವಾರು ಬಸ್‌ಗಳಲ್ಲಿ ಭಾರಿ ಪೊಲೀಸ್ ಪಡೆಗಳನ್ನು ನಿಯೋಜಿಸಲು ಪ್ರಾರಂಭಿಸಿದ್ದರು. ಸುಮಾರು 5.00 ಗಂಟೆಗೆ […]