ಭವಾನಿ ವಿ. ಶೆಟ್ಟಿ ಪುಳಿಮಾರು ಇವರಿಗೆ ವಿಶ್ವ ಸಂಸ್ಕೃತಿ ಪುರಸ್ಕಾರ

ಉಡುಪಿ: ವೃತ್ತಿಯಿಂದ ನಿವೃತ್ತರಾಗಿದ್ದರೂ ಎಲ್ಲ ಕಾಲದಲ್ಲೂ ಜನರು, ಶಿಷ್ಯರು ಗುರುತಿಸಿ ಗೌರವಿಸುವ ಶಿಕ್ಷಕ ವೃತ್ತಿ ಪೂಜನೀಯವಾಗಿದ್ದು ನಿತ್ಯ ಜನ ಮನ್ನಣೆ ಪಡೆಯುವಂತದ್ದು ಎಂದು ಕಸಾಪ ವಿಶ್ವ ಸಂಸ್ಕೃತಿ ಪುರಸ್ಕಾರ ಪುರಸ್ಕ್ರತೆ ಭವಾನಿ ವಿ. ಶೆಟ್ಟಿ ಪುಳಿಮಾರು ಅಭಿಪ್ರಾಯಪಟ್ಟರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕರ ದಿನಾಚರಣೆ ನಿವೃತ್ತ ಶಿಕ್ಷಕರಲ್ಲಿ ಸಾರ್ಥಕ ಹಾಗೂ ಸಂತಸದ ಭಾವ ತುಂಬುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ […]

ವಿದ್ಯಾರ್ಥಿಗಳಂತೆ ಶಿಕ್ಷಕರೂ ಸದಾ ಅಧ್ಯಯನಶೀಲರಾಗಿರಬೇಕು: ಪ್ರೊ.ಬಿ.ಪದ್ಮನಾಭ ಗೌಡ

ಕಾರ್ಕಳ: ಶಿಕ್ಷಣ ಮತ್ತು ಶಿಕ್ಷಕ ವೃತ್ತಿಗಳು ಅತ್ಯಂತ ಶ್ರೇಷ್ಠವಾದದ್ದು ವಿದ್ಯಾರ್ಥಿಗಳಲ್ಲಿ ಸದ್ಭಾವನೆಯನ್ನು ಬೆಳೆಸುತ್ತಾ, ಶಿಕ್ಷಕನೂ ಅಧ್ಯಯನ ಶೀಲನಾಗಬೇಕು. ನಿರಂತರವಾಗಿ ಗುರುತರವಾದ ಜವಾಬ್ದಾರಿಯಿಂದ ಬೋಧನೆ ಮಾಡುವವರಾಗಬೇಕು ಎಂದು ಪ್ರೊ.ಬಿ.ಪದ್ಮನಾಭ ಗೌಡ ಕರೆ ನೀಡಿದರು. ಅವರು ಕಾರ್ಕಳದ ಕ್ರಿಯೇಟಿವ್ ಪ. ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನದ ಪ್ರಯುಕ್ತ ಆಚರಿಸಲಾದ ‘ಗುರುದೇವೋ ಭವ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೋರ್ವ ಅತಿಥಿ ಚೇತನಾ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಶೆಟ್ಟಿ ಮಾತನಾಡಿ, ಗುರುಗಳೆಂದರೆ ಅಪಾರ ಗೌರವದಿಂದ ಕಾಣಬೇಕಾದ ವ್ಯಕ್ತಿ. […]