ಸೆ. 5 ರಿಂದ 20 ರವರೆಗೆ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಗುರುದಕ್ಷಿಣ ಆಫರ್: ದ್ವಿಚಕ್ರ ವಾಹನಗಳ ಮೇಲೆ ಆಕರ್ಷಕ ಕ್ಯಾಶ್ ಬೆನೆಫಿಟ್
ಉಡುಪಿ: ಕರಾವಳಿ ಬೈಪಾಸ್ ಬಳಿ ಶ್ರೀ ರಾಮದರ್ಶನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಸೆ.5 ರಿಂದ 20 ರವರೆಗೆ ಗುರುದಕ್ಷಿಣ ಆಫರ್ ನಡೆಯುತ್ತಿದ್ದು, ಸ್ಪ್ಲೆಂಡರ್ ಪ್ಯಾಶನ್ ಸೀರೀಸ್ ಮೇಲೆ 2000 ಸಾವಿರ ರೂ ಗಳ ಕ್ಯಾಶ್ ಬೆನೆಫಿಟ್, 125 ಸಿಸಿ ಸುಪರ್ ಸ್ಪೆಷಲ್ ಮತ್ತು ಗ್ಲಾಮರ್ ಮೇಲೆ 2500 ರೂ ಕ್ಯಾಶ್ ಬೆನೆಫಿಟ್, ಪ್ರೀಮಿಯಂ ಮತ್ತು ಸ್ಕೂಟರ್ ಮೇಲೆ 3000 ರೂ ಗಳವರೆಗೆ ಕ್ಯಾಶ್ ಬೆನೆಫಿಟ್ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 7996855666 ಸಂಪರ್ಕಿಸಿ
ದಿ. ಸುನೀಲ್ ಚಾತ್ರ ಸ್ಮರಣಾರ್ಥ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐ.ಎ.ಎಸ್, ಐ.ಪಿ.ಎಸ್ ಕುರಿತು ಮಾಹಿತಿ ಕಾರ್ಯಕ್ರಮ
ಕುಂದಾಪುರ: ಸೆಪ್ಟೆಂಬರ್ 6ರಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಮತ್ತು ಬೆಂಗಳೂರಿನ ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇವರ ಸಹಯೋಗದಲ್ಲಿ ದಿ. ಸುನೀಲ್ ಚಾತ್ರ ಇವರ ಸವಿನೆನಪಿಗಾಗಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಐ.ಎ.ಎಸ್, ಐ.ಪಿ.ಎಸ್ ಹಾಗೂ ಕೆ.ಎ.ಎಸ್ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. ಕುಂದಾಪುರದ ಶ್ರೀ ದುರ್ಗಾಂಬಾ ಮೋಟಾರ್ಸ್ ನ ಮಾಲಕ ಸುಪ್ರೀತ್ ಚಾತ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಯು.ಪಿ.ಎಸ್.ಸಿ ಫ್ಯಾಕಲ್ಟಿ […]
ದರ್ಪಣಾ ಮಹಿಳಾ ಹುಲಿ ವೇಷ ತಂಡದಿಂದ ಹುಲಿ ಕುಣಿತ
ಉಡುಪಿ: ದರ್ಪಣಾ ಮಹಿಳಾ ಹುಲಿ ವೇಷ ತಂಡವು ನಗರದ ಕಾಂಗ್ರೆಸ್ ಭವನದಲ್ಲಿ ಹುಲಿ ಕುಣಿತವನ್ನು ಪ್ರದರ್ಶಿಸಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಕಾಂಚನ್ ಉಪಸ್ಥಿತರಿದ್ದರು.
ಗಣೇಶ ಚತುರ್ಥಿಯಂದು ಹೊಸ ಸಂಸತ್ ಭವನದಲ್ಲಿ ನಡೆಯಲಿದೆ ಸಂಸತ್ತಿನ ವಿಶೇಷ ಅಧಿವೇಶನ?
ನವದೆಹಲಿ: ಸೆಪ್ಟೆಂಬರ್ 18 ರಿಂದ ಐದು ದಿನಗಳ ಕಾಲ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನವು ಸೆಪ್ಟೆಂಬರ್ 18 ರಂದು ಹಳೆಯ ಕಟ್ಟಡದಲ್ಲಿ ಪ್ರಾರಂಭವಾಗಲಿದೆ ಮತ್ತು ನಂತರ ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಬಲ್ಲ ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. ಕೇಂದ್ರ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದು, ಅಧಿವೇಶನದ ವಿಷಯವನ್ನು ಇನ್ನೂ ಹೇಳಲಾಗಿಲ್ಲ. ಮಾಧ್ಯಮಗಳಲ್ಲಿ ಹಲವಾರು ರೀತಿಯ ಊಹಾಪೋಹಗಳು ಹರಿದಾಡುತ್ತಿದ್ದು ಈ ಬಗ್ಗೆ ಸರಕಾರದಿಂದ […]
ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿಯಿಂದ ಮತ್ತೊಂದು ಹಿಟ್ ಚಿತ್ರ: ಅಂದಾಜು 10 ಕೋಟಿ ಗಳಿಕೆಯತ್ತ ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ
ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ ಬಾಕ್ಸ್ ಆಫೀಸ್ನಲ್ಲಿ ಪ್ರಭಾವಶಾಲಿ ಚೊಚ್ಚಲ ಪ್ರದರ್ಶನವನ್ನು ಮಾಡಿದ್ದು, ಭಾರತದಲ್ಲಿ ಬಿಡುಗಡೆಯಾದ ಆರಂಭಿಕ ನಾಲ್ಕು ದಿನಗಳಲ್ಲಿ ಸುಮಾರು 9.34 ಕೋಟಿ ನಿವ್ವಳ ಗಳಿಕೆಯನ್ನು ಸಂಗ್ರಹಿಸಿದೆ. ಚಿತ್ರವು ಐದನೇ ದಿನ ಕೂಡಾ ತನ್ನ ಯಶಸ್ವಿ ಓಟವನ್ನು ಮುಂದುವರೆಸುವ ನಿರೀಕ್ಷೆಯಿದೆ. ನಿವ್ವಳ ಗಳಿಕೆಯಲ್ಲಿ ಅಂದಾಜು 1.39 ಕೋಟಿ ಬಾಕ್ಸ್ ಆಫೀಸ್ ಸಂಗ್ರಹವನ್ನು ನಿರೀಕ್ಷಿಸಲಾಗಿದೆ. ನಿವ್ವಳ ಸಂಗ್ರಹ ದಿನ 1 [1 ನೇ ಶುಕ್ರವಾರ] ₹ 1.95 ಕೋಟಿ, ದಿನ 2 [1 ನೇ […]