ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಾವಳಿ: ಭುವನೇಶ್ವರ, ಗುವಾಹಟಿಯಲ್ಲಿ ನಡೆಯಲಿದೆ

ಭುವನೇಶ್ವರ (ಒಡಿಶಾ): ಕಳೆದ ವರ್ಷ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್‌ನ ಯಶಸ್ವಿ ಆತಿಥ್ಯದ ನಂತರ, ಒಡಿಶಾದ ಕಳಿಂಗ ಸ್ಟೇಡಿಯಂ ಮತ್ತು ಗುವಾಹಟಿಯ ಕ್ರೀಡಾಂಗಣ 2026ರ ಫಿಫಾ ವಿಶ್ವಕಪ್‌ನ ಎರಡು ಅರ್ಹತಾ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಕಳೆದ ವರ್ಷ ಫಿಫಾ ಅಂಡರ್ 17 ಮಹಿಳಾ ವಿಶ್ವಕಪ್‌ನ ಪಂದ್ಯಗಳನ್ನು ಯಶಸ್ವಿಯಾಗಿ ನಡೆಸಿದ ಭಾರತಕ್ಕೆ ಮುಂದಿನ ವಿಶ್ವಕಪ್‌ನ ಅರ್ಹತಾ ಮ್ಯಾಚ್ನ ಆತಿಥ್ಯದ ಜವಾಬ್ದಾರಿ ಸಿಕ್ಕಿದೆ. 2026ರ ಫಿಫಾ ವಿಶ್ವಕಪ್ ಮತ್ತು ಎಎಫ್ಸಿ ಏಷ್ಯನ್ ಕಪ್ 2027 ರ ಅರ್ಹತೆಗೆ ಜಂಟಿಯಾಗಿ ಪಂದ್ಯವನ್ನು […]
ಸೆಪ್ಟೆಂಬರ್ 4ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಬರಪೀಡಿತ ತಾಲೂಕಗಳ ಹೆಸರು ಘೋಷಣೆ

ಬಾಗಲಕೋಟೆ: ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲ ಉಂಟಾಗಿದ್ದು, ಸೆಪ್ಟೆಂಬರ್ 4 ರಂದು ಸಭೆ ನಡೆಸಿ ಬರಗಾಲ ಪೀಡಿತ ತಾಲೂಕಗಳ ಹೆಸರು ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಯಾವ್ಯಾವ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ ಅವುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಆಲಮಟ್ಟಿ ಆಣೆಕಟ್ಟೆಯಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜಲಾಶಯಗಳಲ್ಲಿ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಈ ಭಾಗದಲ್ಲಿ ನೀರಿನ […]
ಪಾಕಿಸ್ತಾನಕ್ಕೆ 267 ರನ್ ಸ್ಪರ್ಧಾತ್ಮಕ ಗುರಿ

ಪಲ್ಲೆಕಲೆ (ಶ್ರೀಲಂಕಾ): ಪಾಕಿಸ್ತಾನದ ವೇಗಿಗಳಾದ ಶಹೀನ್ ಆಫ್ರಿದಿ ಮತ್ತು ಹ್ಯಾರಿಸ್ ರೌಫ್ ಭಾರತ ತಂಡಕ್ಕೆ ಕಾಡಿದ್ದರು, ನಂತರ ಕಿಶನ್ ಮತ್ತು ಹಾರ್ದಿಕ್ ಭಾರತಕ್ಕೆ ಆಸರೆ ಆಗಿದ್ದಾರೆಪಾಕಿಸ್ತಾನದ ಎದುರು ಭಾರತ ತಂಡ ಆರಂಭಿಕ ವೈಫಲ್ಯದ ನಡುವೆಯೂ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ ಬ್ಯಾಟಿಂಗ್ ಬಲದಿಂದ ಸ್ಪರ್ಧಾತ್ಮಕ ಗುರಿಯನ್ನು ಕಲೆಹಾಕಿದೆ. 66ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ 5ನೇ ವಿಕೆಟ್ನಲ್ಲಿ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ 138 ರನ್ ಜೊತೆಯಾಟದ ಆಸರೆ 267 ರನ್ ಗುರಿಗೆ ಕಾರಣವಾಯಿತು.
ನಾಳೆಯಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ : ಲೋಕಸಭೆ ಚುನಾವಣೆ ತಯಾರಿ

ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ರಾಜ್ಯ ಕಾಂಗ್ರೆಸ್ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದು, ಇದರ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಭಾನುವಾರ ಕರೆಯಲಾಗಿದೆ.ಲೋಕಸಭೆ ಚುನಾವಣೆ ಹಿನ್ನೆಲೆ ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಓಟಕ್ಕೆ ತಡೆ ಹಾಕಿರುವ ರಾಜ್ಯ ಕಾಂಗ್ರೆಸ್ನ ಉತ್ಸಾಹ ಇಮ್ಮಡಿಯಾಗಿದ್ದು, ರಾಷ್ಟ್ರ ಮಟ್ಟದಲ್ಲೂ ಇದೇ ರೀತಿಯ […]
ಉಡುಪಿ: ಯುವತಿ ನಾಪತ್ತೆ

ಉಡುಪಿ, ಸೆ.02: ಉಡುಪಿ ತಾಲೂಕು ಬಡಗುಬೆಟ್ಟು ಗ್ರಾಮದ ಮಂಚಿಕೋಡಿ ನಿವಾಸಿ ವೈಷ್ಣವಿ ನಾಯಕ್ (18) ಎಂಬ ಯುವತಿಯು ಸೆಪ್ಟಂಬರ್ 1 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಸಪೂರ ಶರೀರ, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಇಂಗ್ಲೀಷ್, ಹಿಂದಿ, ತುಳು ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.