ಕನಸಿನ ಮನೆಯಲ್ಲಿ ನೆಮ್ಮದಿಯಿಂದ ಬದುಕಲು ಹೋಂ ಇನ್ಶೂರೆನ್ಸ್ ಆಯ್ಕೆ ಮಾಡುವುದು ಸೂಕ್ತ: ಬಜಾಜ್ ಅಲಿಯಾನ್ಸ್ ನಿಂದ ಸಲಹೆ ಸೂಚನೆಗಳು ಇಲ್ಲಿವೆ

ಹೆಚ್ಚಿನ ಜನರಿಗೆ, ಮನೆ ಖರೀದಿಸುವುದು ಅವರ ಜೀವನದಲ್ಲಿ ಅವರ ದೊಡ್ಡ ಹೂಡಿಕೆ ಮತ್ತು ಮೈಲಿಗಲ್ಲಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಸ್ವಂತ ಮನೆಯನ್ನು ಹೊಂದುವ ಆಕಾಂಕ್ಷೆಯನ್ನು ಹೊಂದಿರುತ್ತಾರೆ ಮತ್ತು ಇದು ನಮ್ಮ ಅತ್ಯಂತ ಬೆಲೆಬಾಳುವ ಸ್ವತ್ತುಗಳಲ್ಲಿ ಒಂದಾಗಿರುತ್ತದೆ, ಅದನ್ನು ನಾವು ಸಾಧ್ಯವಿರುವ ಎಲ್ಲಾ ವಿಧಾನಗಳ ಮೂಲಕ ಸುರಕ್ಷಿತವಾಗಿರಿಸಬೇಕು. ಆದಾಗ್ಯೂ, ಮನೆ ಮಾಲೀಕತ್ವವು ವಿವಿಧ ಅಪಾಯಗಳು, ಬೆಂಕಿ, ಅಪಘಾತಗಳು, ದರೋಡೆ, ನೈಸರ್ಗಿಕ ವಿಪತ್ತುಗಳು ಮತ್ತು ಗಣನೀಯ ಅರ್ಥಿಕ ನಷ್ಟ ಮತ್ತು ಭಾವನಾತ್ಮಕ ನೋವನ್ನು ಉಂಟುಮಾಡುವ ಇತರ ಅನಿರೀಕ್ಷಿತ ಘಟನೆಗಳಂತಹ ಸಂಭಾವ್ಯ ಅಪಾಯಗಳೊಂದಿಗೆ […]

ಲೋನ್ ಆ್ಯಪ್ ಗಳ ಕಾಟಕ್ಕೆ ಬಲಿಯಾದ ಬೆಳ್ತಂಗಡಿಯ ಉದಯೋನ್ಮುಖ ಕಬ್ಬಡ್ಡಿ ಆಟಗಾರ ಸ್ವರಾಜ್??

ಬೆಳ್ತಂಗಡಿ: ತಾಲೂಕಿನ ಪುದುವೆಟ್ಟು ಗ್ರಾಮದ ಉದಯೋನ್ಮುಖ ಕಬ್ಬಡ್ಡಿ ಆಟಗಾರ ಸ್ವರಾಜ್ ಆ. 31 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿತ್ತು. ವರದಿಗಳ ಪ್ರಕಾರ ಲೋನ್ ಆ್ಯಪ್ ಗಳ ಬೆದರಿಕೆಯಿಂದಾಗಿ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೃತ ಸ್ವರಾಜ್ ಹಲವು ಆನ್ಲೈನ್ ಲೋನ್ ಆ್ಯಪ್ ಗಳಿಂದ ಸಾಲ ಪಡೆದಿದ್ದ. ಹಣವನ್ನು ಕಂಪನಿಗೆ ಕಂತುಗಳಲ್ಲಿ ಮರು ಪಾವತಿ ಕೂಡ ಮಾಡುತ್ತಿದ್ದ. ಆದರೂ ಬಡ್ಡಿ ಹಾಕಿ ಹೆಚ್ಚುವರಿ ಹಣ ಪಾವತಿ ಮಾಡಲು ಸ್ವರಾಜ್ ಗೆ ಬೆದರಿಕೆ ಕರೆಗಳು ಬರುತ್ತಿದ್ದವು […]

ಸೆ. 12 ರಂದು ಉಡುಪಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸೆಪ್ಟಂಬರ್ 12 ರಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾಗವಹಿಸುವ ಸ್ಪರ್ಧಿಗಳು ಬೆಳಗ್ಗೆ 9 ಗಂಟೆಯ ಒಳಗಾಗಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದಾಗಿದೆ. ಸ್ಪರ್ಧೆಗಳ ವಿವರ: ಪುರುಷ ಹಾಗೂ ಮಹಿಳೆಯರಿಗೆ ಅಥ್ಲೆಟಿಕ್ಸ್ ಸ್ಫರ್ಧೆಗಳು, ಪುರುಷರಿಗೆ ಗುಂಪು ಆಟಗಳಾದ ವಾಲಿಬಾಲ್, ಖೋ- ಖೋ, ಕಬಡ್ಡಿ, ಫುಟ್‌ಬಾಲ್, […]

ಕೊಡೆತ್ತೂರುಗುತ್ತು ಕುಟುಂಬಿಕರಿಗೆ ಕಟೀಲು ದೇಗುಲದ ಅನುವಂಶಿಕ ಆಡಳಿತ ಟ್ರಸ್ಟಿ ಹಕ್ಕು: ಕೋರ್ಟು ತೀರ್ಪು

ಕಿನ್ನಿಗೋಳಿ: ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಟ್ರಸ್ಟಿ ಹಕ್ಕು ಕೊಡೆತ್ತೂರುಗುತ್ತು ಕುಟುಂಬದ ಹಿರಿಯ ಸದಸ್ಯರಿಗೆ ಸೇರಿದ್ದು ಎಂದು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ ಎಂದು ಕೊಡೆತ್ತೂರುಗುತ್ತು ಅರುಣ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಅವರು ಗುರುವಾರದಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದರು. ಪುತ್ತಿಗೆ ಗುತ್ತಿನ ಸನತ್ ಕುಮಾರ್ ಶೆಟ್ಟಿ ತಾನು ಕೊಡೆತ್ತೂರುಗುತ್ತಿಗೆ ಸಂಬಂಧಿಸಿದವರು ಎಂದು ಹೇಳಿ ಕಟೀಲು ದೇವಳದ ಟ್ರಸ್ಟಿಯಾಗಲು ಪ್ರಯತ್ನಿಸಿ ಕೊಡೆತ್ತೂರುಗುತ್ತಿಗೆ ಸಲ್ಲಬೇಕಾದ ಹಲವಾರು ಗೌರವ […]

ಕಾಪು ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಉಪನ್ಯಾಸಕರ ಹುದ್ದೆ ಖಾಲಿ

ಕಾಪು: ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಯಾಂತ್ರಿಕ ವಿಭಾಗ ಮತ್ತು ಗಣಕಯಂತ್ರ ವಿಭಾಗಗಳಲ್ಲಿ 4 ವರ್ಷಗಳ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಂದ ತಾತ್ಕಾಲಿಕವಾಗಿ ಅರೆಕಾಲಿಕ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ [email protected] ಅಥವಾ ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್, ಕಾಪು ಮೊ.ನಂ: 9480773870 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.