ಅಂಚೆ ಇಲಾಖೆಯಿಂದ ಡಿಜಿಟಲ್ ಇಂಡಿಯಾ ಫಾರ್ ನ್ಯೂ ಇಂಡಿಯಾ ಕುರಿತು ಪತ್ರ ಲೇಖನ ಸ್ಪರ್ಧೆ

ಉಡುಪಿ: ಭಾರತೀಯ ಅಂಚೆ ಇಲಾಖೆಯ ವತಿಯಿಂದ ನವ ಭಾರತದ ನಿರ್ಮಾಣಕ್ಕಾಗಿ ಡಿಜಿಟಲ್ ಇಂಡಿಯಾ (ಡಿಜಿಟಲ್ ಇಂಡಿಯಾ ಫಾರ್ ನ್ಯೂ ಇಂಡಿಯಾ) ಎಂಬ ವಿಷಯದ ಕುರಿತು 18 ವರ್ಷ ಒಳಗಿನವರಿಗೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಮುಕ್ತವಾಗಿ ಭಾಗವಹಿಸಲು ಪತ್ರ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಾಳುಗಳು ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಅಂತರ್ದೇಶಿಯ ಪತ್ರದಲ್ಲಿ ಐದು ನೂರು ಶಬ್ದಗಳಿಗೆ ಮೀರದಂತೆ ಅಥವಾ ಎ4 ಹಾಳೆಯಲ್ಲಿ ಒಂದು ಸಾವಿರ ಶಬ್ದಗಳು ಮೀರದಂತೆ ಲೇಖನವನ್ನು ಕೈಬರಹದಲ್ಲಿ ಬರೆದು, ಅಂಚೆ ಲಕೋಟೆಯಲ್ಲಿ […]

ರೋಟರಿ ಮಣಿಪಾಲ ಹಿಲ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿ ಗೀತೆ ಸ್ಪರ್ಧಾ ಕಾರ್ಯಕ್ರಮ

ಮಣಿಪಾಲ: ರೋಟರಿ ಮಣಿಪಾಲ ಹಿಲ್ಸ್, ಹುಡ್ಕೋ ಫ್ರೆಂಡ್ಸ್ ಹಾಗೂ ಮಣಿಪಾಲ ಕೆರೋಕೆ ಯವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗಾಗಿ ಜಿಲ್ಲಾಮಟ್ಟದ ದೇಶ ಭಕ್ತಿ ಗೀತೆ ಸ್ಪರ್ಧೆ ಸತತ 5ನೇ ವರ್ಷ ಆಯೋಜಿಸಲಾಗಿದ್ದು, ಸುಮಾರು ನೂರಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಮಾಜಿ ರೋಟರಿ ಜಿಲ್ಲಾ ರಾಜ್ಯಪಾಲ ಹಾಗೂ ಯುವ ಉದ್ಯಮಿ ರೋ. ಅಭಿನಂದನ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ನಾಗರಿಕರಲ್ಲಿ ದೇಶಭಕ್ತಿಯನ್ನು ಜಾಗೃತಿಗೊಳಿಸುವ ಕಾರ್ಯಕ್ರಮವನ್ನು ಶ್ಲಾಘಿಸಿದರು. ಶಾಸಕ ಯಶ್ ಪಾಲ್ ಸುವರ್ಣ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ […]

ನಾಳೆ (ಆ. 24) ವಿವಿಧೆಡೆ ವಿದ್ಯುತ್ ವ್ಯತ್ಯಯ

ಉಡುಪಿ: 33/11 ಕೆ.ವಿ ಶಿರ್ವ ಎಂ.ಯು.ಎಸ್.ಎಸ್ ನಲ್ಲಿ 5 ಎಂ.ವಿ.ಎ. ಎಸ್.ಎಫ್-6 ಬ್ರೇಕರ್ ಚಾರ್ಜಿಂಗ್ ಮತ್ತು ಕೆಪಾಸಿಟರ್ ಬ್ಯಾಂಕ್-1 ಮತ್ತು 2 ಚಾರ್ಜಿಂಗ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಸದರಿ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಾದ ಉಳಿಯಾರಗೋಳಿ, ಬಂಟಕಲ್ಲು, ಮೂಡಬೆಟ್ಟು, ಪಾಂಗಳ, ಶಿರ್ವ, ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಪಾಜೈ, ಕುರ್ಕಾಲು, ಇನ್ನಂಜೆ, ಪಡುಬೆಳ್ಳೆ, ಮಟ್ಟಾರು, ಪದವು, ಪಾಂಬೂರು, ಪಿಲಾರು ಖಾನ, ಪೆರ್ನಾಲು, ಕುತ್ಯಾರು, ಪುಂಚಲಕಾಡು, ಕಳತ್ತೂರು, ಚಂದ್ರನಗರ, ಮಲ್ಲಾರು, ಪೊಲಿಪು, ಕೊಪ್ಪಲಂಗಡಿ, ಪಣಿಯೂರು, ಕಾಪು ಬಡಾ ಗ್ರಾಮ(ಉಚ್ಚಿಲ), […]

ಬನ್ನಂಜೆ: ಆ. 25 ರಂದು ಮಹೀಂದ್ರ ರೂರಲ್ ಹೌಸಿಂಗ್ ಪ್ರೈ.ಲಿ ನಲ್ಲಿ ನೇರ ಸಂದರ್ಶನ

ಬನ್ನಂಜೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಆಗಸ್ಟ್ 25 ರಂದು ಬೆಳಗ್ಗೆ 10.30 ಕ್ಕೆ ನಗರದ ಬನ್ನಂಜೆ ರೋಡ್ ಶ್ರೀರಾಮ್ ಬಿಲ್ಡಿಂಗ್ 2 ನೇ ಮಹಡಿಯ ಮಹೀಂದ್ರ ರೂರಲ್ ಹೌಸಿಂಗ್ ಪ್ರೈ.ಲಿ ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ ಮತ್ತು ಡಿಪ್ಲೋಮಾ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ […]

ರೋಹಿಣಿ ಸಿಂಧೂರಿ ಮಾನಹಾನಿ ಪ್ರಕರಣ: ಪ್ರಕರಣ ರದ್ದು ಕೋರಿ ರೂಪಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ತನ್ನ ವಿರುದ್ದ ಮಿಥ್ಯಾರೋಪ ಮಾಡಿರುವ ಕಾರಣ ಐಎಎಸ್​​ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲು ಮಾಡಿದ್ದ ಮಾನಹಾನಿ ಕೇಸ್​​​ ವಿಚಾರದಲ್ಲಿ ಐಪಿಎಸ್​ ಅಧಿಕಾರಿ ಡಿ. ರೂಪಾ‌ ಮೌದ್ಗಿಲ್ ಗೆ ಹಿನ್ನಡೆಯಾಗಿದೆ. ಪ್ರಕರಣ ರದ್ದು ಕೋರಿ ರೂಪಾ ಹೈಕೋರ್ಟ್​​ಗೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. 2023 ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಡಿದ್ದ ಮಾನಹಾನಿ ಪೋಸ್ಟ್​ಗಳನ್ನು ಹಂಚಿಕೊಂಡಿದ್ದ ಡಿ ರೂಪಾ ಅವರ ವಿರುದ್ಧ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮಾನನಷ್ಟ ಪ್ರಕರಣ ದಾಖಲು […]