ಉಡುಪಿಯ ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ ಪದಪ್ರಧಾನ
ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲಯನ್ ಅನುಪಮ ಜಯಕುಮಾರ್ ಮತ್ತು ಅವರ ತಂಡದ ಕಾರ್ಯಕಾರಿ ಸಮಿತಿಯ ಪದ ಪ್ರಧಾನ ಕಾರ್ಯಕ್ರಮವು ಉಡುಪಿಯ ಪುರಭವನದಲ್ಲಿ ಗುರುವಾರ ನಡೆಯಿತು.ಲಯನ್ಸ್ ಜಿಲ್ಲೆಯ ಮಾಜಿ ಗವರ್ನರ್ ೮, ಜಯಕುಮಾರ್ ಶೆಟ್ಟಿ ಇಂದ್ರಾಳಿ ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿ ಶುಭ ಹಾರೈಸಿದರು. ಕಳೆದ ವರ್ಷ ಅಧ್ಯಕ್ಷ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ ಪ್ರಮುಖರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಕಾರ್ಯಕ್ರಮದಲ್ಲಿ ‘ಧೀರ ಮಹಿಳೆ’ ಪ್ರಶಸ್ತಿ ಪುರಸ್ಕೃತ […]
ಭಾರತ-ಐರ್ಲೆಂಡ್ ಮೊದಲ ಟಿ-20ಗೆ ಪ್ರಸಿದ್ಧ ಕೃಷ್ಣ, ರಿಂಕು ಪಾದಾರ್ಪಣೆ
ಡಬ್ಲಿನ್ (ಐರ್ಲೆಂಡ್): ಇಲ್ಲಿನ ದಿ ವಿಲೇಜ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.ಈ ಸರಣಿಯ ಮೂಲಕ ಪ್ರಸಿದ್ಧ ಕೃಷ್ಣ ಮತ್ತು ರಿಂಕು ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಇಬ್ಬರು ಆಟಗಾರರಿಗೆ ಜಸ್ಪ್ರೀತ್ ಬುಮ್ರಾ ಕ್ಯಾಪ್ ಕೊಟ್ಟು ಸ್ವಾಗತಿಸಿದರು. ಐರ್ಲೆಂಡ್-ಭಾರತ ನಡುವಿನ ಮೂರು ಟಿ20 ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ. ಐರ್ಲೆಂಡ್: […]
‘ ಎಂಟನೇ ದಿನವೂ ಉತ್ತಮ ಕಲೆಕ್ಷನ್ ಮಾಡಿದ ರಜನಿ ಸಿನಿಮಾ: ಜೈಲರ್’ಗೆ ಯಶಸ್ಸಿನ ಅಭಿಷೇಕ
‘ಜೈಲರ್’ ಚಿತ್ರವು ಎಂಟನೇ ದಿನವೂ ಭಾರತದ ಬಾಕ್ಸ್ ಆಫೀಸ್ನಲ್ಲಿ ಸರಿಸುಮಾರು 10 ಕೋಟಿ ರೂಪಾಯಿ ಗಳಿಸಿದೆ.ವಿಶ್ವದಾದ್ಯಂತ 375 ಕೋಟಿ ರೂ. ದಾಟಿದ ‘ಜೈಲರ್’: ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 10 ರಂದು ತೆರೆಗೆ ಅಪ್ಪಳಿಸಿತು. ಈ ಚಿತ್ರವನ್ನು ಭಾರತದ ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತದ ಹೊರತಾಗಿಯೂ ಯುಎಇ, ಯುಎಸ್, ಯುಕೆ, ಸಿಂಗಾಪುರ್, ಮಲೇಷ್ಯಾ ಮತ್ತು ವಿಶ್ವದ ಇತರೆ ಭಾಗಗಳಲ್ಲಿಯೂ ‘ಜೈಲರ್’ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ 375 ಕೋಟಿ ರೂಪಾಯಿ ದಾಟಿರುವ […]
ಶ್ರಾವಣ ಮಾಸದ ಆರಂಭದ ಹಿನ್ನೆಲೆ :ಬಾಳೆಹಣ್ಣಿನ ಬೆಲೆ ಏರಿಕೆ
ಬೆಂಗಳೂರು: ಶ್ರಾವಣ ಮಾಸದಲ್ಲಿ ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದಂತೆಯೇ ಬಾಳೆ ಬೆಲೆ ಸದ್ದಿಲ್ಲದೇ ಹೆಚ್ಚಾಗಿದೆ. ಬಹುಮುಖ್ಯ ಬೇಡಿಕೆಯುಳ್ಳ ಈ ಹಣ್ಣಿನ ಬೆಲೆ ಶತಕ ದಾಟಿರುವುದು ಗ್ರಾಹಕರಿಗೆ ತಲೆಬಿಸಿ ತರಿಸಿದೆ. ಬೇಡಿಕೆ ಹಾಗೂ ಪೂರೈಕೆ ವ್ಯತ್ಯಾಸದಿಂದ ಈ ವಾರ ನಗರದಲ್ಲಿ ಒಂದು ಕೆ.ಜಿ. ಏಲಕ್ಕಿ ಬಾಳೆಹಣ್ಣಿನ ದರ 100 ರಿಂದ 140 ರೂ ಆಗಿದೆ.ಟೊಮೆಟೊ, ತರಕಾರಿ ಬೆಲೆ ಏರಿಕೆ ಬಿಸಿಯಿಂದ ಹೊರಬಾರದ ಜನರಿಗೆ ಈಗ ಬಾಳೆಹಣ್ಣಿನ ಬೆಲೆ ಹೆಚ್ಚಳ ಮತ್ತೊಂದು ಆಘಾತ ಉಂಟುಮಾಡಿದೆ. ಶ್ರಾವಣ ಮಾಸದ ಹಬ್ಬಗಳ ಋತು ಆರಂಭವಾಗುತ್ತಿದ್ದಂತೆ […]
‘ಘೂಮರ್’ ರಿಲೀಸ್; ಅಭಿಷೇಕ್ ಬಚ್ಚನ್ ಸಿನಿ ಪ್ರೇಮಿಗಳ ಮೆಚ್ಚುಗೆ
ಟ್ವಿಟರ್ನಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ: ‘ಘೂಮರ್’ ವೀಕ್ಷಿಸಿದ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಸೈಯಾಮಿ ಖೇರ್ ಅಭಿನಯವನ್ನು ಶ್ಲಾಘಿಸಿದ್ದಾರೆ. “ಘೂಮರ್ ತುಂಬಾ ಚೆನ್ನಾಗಿದೆ. ಉತ್ತಮ ಸ್ಫೂರ್ತಿದಾಯಕ ಕ್ರಿಕೆಟ್ ಆಧಾರಿತ ಕಥೆಯಾಗಿದೆ. ನೋಡುಗರ ಭಾವನೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಚಿತ್ರದ ಅಂತ್ಯವು ಭಾವನಾತ್ಮಕತೆಯನ್ನು ನೀಡುತ್ತದೆ. ಅಭಿಷೇಕ್ ಬಚ್ಚನ್ ಪಾತ್ರವು ತುಂಬಾ ಚೆನ್ನಾಗಿದೆ” ಎಂದು ಬರೆದುಕೊಂಡಿದ್ದಾರೆ. ಚಿತ್ರಕ್ಕೆ ಮೂರು ಸ್ಟಾರ್ ನೀಡಿದ್ದಾರೆ. ಈ ಕ್ರೀಡಾಧಾರಿತ ಚಿತ್ರದಲ್ಲಿ ಜೂನಿಯರ್ ಬಚ್ಚನ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋಚ್ […]