ಇನ್ನು ಎಂಟು ದಿನ ಬಾಕಿ: ಚಂದ್ರಯಾನ-3 ಕ್ಕೊಂದು ಬಾಹ್ಯಾಕಾಶದ ಪ್ರತಿಸ್ಪರ್ಧಿ ರಶ್ಯಾದ ಲೂನಾ-25!!

ಅನಿರೀಕ್ಷಿತ ಬಾಹ್ಯಾಕಾಶ ಓಟದಲ್ಲಿ, ಭಾರತ ಮತ್ತು ರಷ್ಯಾ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ವಿಶ್ವದ ಪ್ರಥಮ ರಾಷ್ಟ್ರವಾಗಲು ಪೈಪೋಟಿ ನಡೆಸುತ್ತಿವೆ. ರಷ್ಯಾ ಕಳೆದ ವಾರ ಲೂನಾ-25 ಮೂನ್ ಮಿಷನ್ ಅನ್ನು ಪ್ರಾರಂಭಿಸಿದ್ದು, ಇದು ಚಂದ್ರನನ್ನು ಭಾರತದ ಚಂದ್ರಯಾನ -3 ಕ್ಕೂ ಮುಂಚೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಚಂದ್ರಯಾನ-3 ರ ನಂತರ ಲೂನಾ-25 ಅನ್ನು ಉಡಾವಣೆ ಮಾಡಲಾಗಿದ್ದರೂ, ಅದು ಎರಡು ದಿನಗಳ ಮುನ್ನವೇ ಚಂದ್ರನ ಮೇಲೆ ಇಳಿಯಬಹುದು ಎನ್ನಲಾಗಿದೆ.   ಲೂನಾ -25 ರ ನಿಗದಿತ ಲ್ಯಾಂಡಿಂಗ್ ಆಗಸ್ಟ್ […]

ಹಳ್ಳಾಡಿ-ಹರ್ಕಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ: ಹಳ್ಳಾಡಿ-ಹರ್ಕಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯ ನ್ಯಾಯವಾದಿ, ನೋಟರಿ ಶಿರಿಯಾರ ಪ್ರಭಾಕರ್ ನಾಯಕ್ ಭಾಗವಹಿಸಿದರು.

ಮಂಗಳೂರು: ಎಕ್ಸ್ ಪರ್ಟ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: 77 ನೇ ವರ್ಷದ ಸ್ವಾತಂತ್ರ್ಯೋತ್ಸವದ ವೈಭವದ ವಿಜಯೋತ್ಸವವನ್ನು ಗುರುತಿಸಲು ಸ್ವಾತಂತ್ರ್ಯ ದಿನಾಚರಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಅಮೇರಿಕಾದ ಅಡೋಬಿಯ ಪ್ರಿನ್ಸಿಪಾಲ್ ಪ್ರೋಗ್ರಾಮ್ ಮ್ಯಾನೇಜರ್ ಆಗಿರುವ ಆಶಾ ಕಾಮತ್ ಅಭಿಪ್ರಾಯಪಟ್ಟರು. ಮಂಗಳೂರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಶ್ರೀ ಭಗವತಿ ದೇವಸ್ಥಾನದ ಆವರಣದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ಗುಲಾಮಗಿರಿಯ ಸಂಕೋಲೆಯನ್ನು ಮುರಿಯಲು ನಮಗೆ ನೂರಾರು ವರ್ಷಗಳು ಸಂದವು. ನಾವೆಲ್ಲರೂ ಪ್ರಜಾಪ್ರಭುತ್ವವನ್ನು ಆ ಮೂಲಕ ಎತ್ತಿಹಿಡಿಯಬೇಕಾಗಿದೆ. […]

ಕಾರ್ಕಳ: ಕ್ರಿಯೇಟಿವ್ ಪ.ಪೂ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕಾರ್ಕಳ: ಹಿರಿಯರ ನಿಃಸ್ವಾರ್ಥ, ತ್ಯಾಗ, ದೇಶಪ್ರೇಮದ ಪರಾಕಾಷ್ಠೆಯ ಪರಿಣಾಮವಾಗಿ ಇಂದು ನಾವೆಲ್ಲಾ ಸ್ವತಂತ್ರ ಭಾರತದಲ್ಲಿ ಜೀವಿಸುತ್ತಿದ್ದೇವೆ. ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆಯಲು ನಮ್ಮ ಪೂರ್ವಜರು ಭಾರತವೆಂಬುದು ಶ್ರೇಷ್ಠ ಭಾರತವಾಗಬೇಕೆಂದು ಬಲಿದಾನಗೈದರು. ಇಂತಹ ಅಮೃತಕಾಲವನ್ನು ನಾವು ಸಂಪತ್ತಿನಂತೆ ಕಾಪಾಡಿಕೊಳ್ಳಬೇಕು ಎಂದು ಕಾರ್ಕಳದ ಖ್ಯಾತ ನ್ಯಾಯವಾದಿ ಎಂ ಕೆ ವಿಜಯಕುಮಾರ್ ಕರೆ ನೀಡಿದರು. ಅವರು ಮಂಗಳವಾರದಂದು ಕಾರ್ಕಳ ಕ್ರಿಯೇಟಿವ್ ಪ.ಪೂ ಕಾಲೇಜಿನಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿ ಇಂತಹ ಭರತ ಭೂಮಿಯಲ್ಲಿ ಜನಿಸಿರುವುದೇ ಪುಣ್ಯ. ಈ ದೇಶದ ಪ್ರಜೆಗಳಾಗಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ […]

ಕಾಪು: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತ್ಪಂತ್ರ್ಯೋತ್ಸವ ಸಂಭ್ರಮಾಚರಣೆ

ಕಾಪು: 77ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಾಜೀವ್ ಭವನದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿನಯ್ ಕುಮಾರ್ ಸೊರಕೆ ನೆರವೇರಿಸಿದರು. ಬಳಿಕ ಮಾತನಾಡಿ, ಭಾರತದ ಸಾರ್ವಭೌಮತೆ, ಅಖಂಡತೆ, ಸಮಾನತೆ, ಸಾಮರಸ್ಯತೆ ಮತ್ತು ಸಹೋದರತ್ವದ ಉಳಿವಿಗಾಗಿ ಭಾರತೀಯರಾದ ನಾವೆಲ್ಲರೂ ಪಣತೊಡಬೇಕು. ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆನಿಸಿದ ಭಾರತದ ಸಂವಿಧಾನವನ್ನು ರಕ್ಷಿಸುವ ರಕ್ಷಕರಾಗಿ, ದ್ವೇಷ, ಹಿಂಸೆ ಮತ್ತು ಕೋಮುವಾದವನ್ನು ಹಿಮ್ಮೆಟ್ಟಿಸಿ, ವಿಶೇಷವಾಗಿ ಮಹಿಳೆಯರ ರಕ್ಷಣೆಯನ್ನು ಹೊಣೆಗಾರಿಕೆಯೆಂದು ಭಾವಿಸಿ ಸತ್ಪ್ರಜೆಗಳಾಗಿ ಜೀವನ ನಡೆಸುವ ಧ್ಯೇಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಅನಿವಾರ್ಯತೆ […]