ಮೈನವಿರೇಳಿಸುತ್ತಿದ್ದ ಆ ದೇಶಪ್ರೇಮ! ಎಲ್ಲಿದೆ ಈಗ ಕಂಡು ಕಾಣದೇ ಮರೆಮಾಚಿರುವಾಗ
ಭಾರತವನ್ನು ನಾವು ಹಬ್ಬಗಳ ದೇಶವೆಂದು ಕರೆಯುವುದನ್ನು ಕೇಳಿದ್ದೇವೆ. ಆಗಸ್ಟ್ ತಿಂಗಳು ಅಂದಾಕ್ಷಣನೇ ಹಬ್ಬಗಳ ಸುರಿಮಳೆಯೇ ಆಗುತ್ತದೆ. ನಾಗರ ಪಂಚಮಿ, ಶ್ರಾವಣ ಮಾಸ, ವರಮಾಹಾಲಕ್ಷ್ಮೀ ಇವೆಲ್ಲದರ ಮಧ್ಯೆ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆ ಹೌದು 15ನೇ ತಾರೀಖು ಬಂದ್ರೆ ಸಾಕು ಅವತ್ತು ಎಲ್ಲಿಲ್ಲದ ದೇಶ ಪ್ರೇಮ, ಆ ಬಿಳಿ ಶಾಲಾ ಸಮವಸ್ತ್ರದಲ್ಲಂತೂ ಅದೊಂದು ಗಾಂಭೀರ್ಯತೆ, ಆ ಹುಮಸ್ಸು, ಶಾಲಾ ಆವರಣವಂತೂ ಮದುವಣಗಿತ್ತಿಯಂತೆ ಅಲಂಕಾರಗೊಂಡು ನಾಚಿಕೆಯಿಂದ ನಗುತ್ತಿರುತ್ತಿತ್ತು, ಧ್ವಜಾರೋಹಣದಲ್ಲಿ ಅರಳುವ ಆ ಧ್ವಜದ ಮಧ್ಯೆ ಬೀಳುವ ಹೂವು ದಳಗಳು. ಅಬ್ಬಾ! […]
ಜನಸ್ನೇಹಿ ಪೊಲೀಸ್ ಕ್ಯೂಆರ್ ಕೋಡ್ ಬಿಡುಗಡೆ : ಪೊಲೀಸ್ ಫೀಡ್ ಬ್ಯಾಕ್ ಆಯಪ್
ಕಲಬುರಗಿ: ”ಪೊಲೀಸ್ ಠಾಣೆಯಲ್ಲಿ ನೊಂದವರಿಗೆ ಸರಿಯಾಗಿ ಸ್ಪಂದನೆ ಸಿಗೋದಿಲ್ಲ. ಪೊಲೀಸರು ಸರಿಯಾದ ರೀತಿ ಸ್ಪಂದಿಸುತ್ತಿಲ್ಲ, ದೂರು ಸ್ವೀಕರಿಸುತ್ತಿಲ್ಲ, ದೂರು ಸ್ವೀಕರಿಸಲು ವಿಳಂಬ ಮಾಡ್ತಾರೆ ಅಥವಾ ದೂರು ನೀಡಲು ಹೋದಾಗ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹಾಕ್ತಾರೆ. ಇಂತಹ ಆರೋಪಗಳು ಆಗಾಗ ಕೇಳಿ ಬರುತ್ತವೆ. ಪೊಲೀಸ್ ಠಾಣೆಗೆ ಹೋಗಲು ಇಂದಿಗೂ ಅನೇಕ ಮಂದಿ ಹಿಂಜರಿಯುತ್ತಾರೆ. ಇಂತಹ ಹಲವು ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಪೊಲೀಸ್ ಫೀಡ್ ಬ್ಯಾಕ್ ಆಯಪ್ ಕ್ಯೂಆರ್ […]
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೊಟ್ಟ ಮೊದಲ ಶತಕಕ್ಕೆ 33 ವರ್ಷ!
ನವದೆಹಲಿ: ಇಂದು ಸಚಿನ್ ತೆಂಡೂಲ್ಕರ್ ‘ಕ್ರಿಕೆಟ್ ದೇವರು’ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ಆದರೆ, 1990ರಲ್ಲಿ 17 ವರ್ಷದ ಈ ಯುವ ಆಟಗಾರನನ್ನು ಎದುರಾಳಿ ತಂಡದ ಬೌಲರ್ಗಳು ಗೇಲಿ ಮಾಡುತ್ತಿದ್ದರು ಎಂಬುದು ಗಮನಾರ್ಹ.’ಶತಕಗಳ ಶತಕ’ ದಾಖಲಿಸಿದ ‘ಜಾಗತಿನ ಕ್ರಿಕೆಟ್ ಮಾಂತ್ರಿಕ’ ಸಚಿನ್ ತೆಂಡೂಲ್ಕರ್ ಅವರ ಬ್ಯಾಟ್‌ನಿಂದ ಮೊದಲ 100 ರನ್ ದಾಖಲಾಗಿ ಇಂದಿಗೆ 33 ವರ್ಷವಾಗುತ್ತಿದೆ. ಶತಕಗಳ ಶತಕ ದಾಖಲಿಸಿದ ಸಚಿನ್ ತೆಂಡೂಲ್ಕರ್ ಅವರ ಮೊದಲ ಶತಕ 33 ವರ್ಷಗಳ ಹಿಂದೆ ಇದೇ ದಿನ ದಾಖಲಾಗಿತ್ತು. 1990ರ ಆಗಸ್ಟ್ […]
₹60 ಲಕ್ಷ ಮೌಲ್ಯದ ವಜ್ರ ಪತ್ತೆ; ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಗುಂಟೂರಿನ ಕುಟುಂಬಕ್ಕೆ ಜಾಕ್ಪಾಟ್!
ವಿಜಯವಾಡ (ಆಂಧ್ರಪ್ರದೇಶ) : ಆಂಧ್ರಪ್ರದೇಶದ ಅನಂತಪುರ, ಎನ್‌ಟಿಆರ್ ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಜನರು ವಜ್ರದ ಹುಡುಕಾಟ ನಡೆಸಿದ್ದು ದೊಡ್ಡ ಸುದ್ದಿಯಾಗಿತ್ತು.ಇದೀಗ ಎನ್‌ಟಿಆರ್ ಜಿಲ್ಲೆಯ ಗುಡಿಮೆಟ್ಲಾ ಗ್ರಾಮದಲ್ಲೂ ವಜ್ರ ಶೋಧ ಶುರುವಾಗಿದ್ದು, ಕುಟುಂಬವೊಂದಕ್ಕೆ 60 ಲಕ್ಷ ರೂಪಾಯಿ ಮೌಲ್ಯದ ದೊಡ್ಡ ವಜ್ರದ ಹರಳು ಸಿಕ್ಕಿದೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯಲ್ಲಿ ಕುಟುಂಬವೊಂದಕ್ಕೆ 60 ಲಕ್ಷ ರೂಪಾಯಿ ಮೌಲ್ಯದ ವಜ್ರ ಸಿಕ್ಕಿದೆ. (ಡೈಮಂಡ್ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ) ಇದಕ್ಕೂ ಮೊದಲು, ಚಂದರ್ಲಾಪ್ಡು ಮಂಡಲದ ವ್ಯಾಪ್ತಿಯ ಗ್ರಾಮಗಳಿಗೆ ರಾಜ್ಯದ ಇತರ […]
ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು : ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಸಭಾಂಗಣದ ಬಳಿ ಇಂದು ಕರ್ನಾಟಕ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣ ರದ್ದುಗೊಳಿಸಲಾಗುವುದು ಎಂದರುಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರದ್ದುಗೊಳಿಸಿ ಸಂವಿಧಾನ ರೀತಿಯಲ್ಲಿ ಶಿಕ್ಷಣ ಕೊಡಲು ಪ್ರಯತ್ನ […]