ಮಣಿಪಾಲ: ದ್ವಿಚಕ್ರ ವಾಹನಗಳ ಮಾಲೀಕರಿಗೆ ಸೂಚನೆ
ಉಡುಪಿ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಮಾಹೆ ಕ್ಯಾಂಪಸ್‌ನಲ್ಲಿ ಜುಲೈ 16 ರಂದು ವಾರೀಸುದಾರರಿಲ್ಲದ ದ್ವಿಚಕ್ರ ವಾಹನಗಳಾದ ಕಪ್ಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಹೊಂಡಾ ಆಕ್ಟಿವಾ, ಕೆಎ 05 ಹೆಚ್‌ಡಿ 9020 ಬಿಳಿ ಮತ್ತು ಕೆಂಪು ಬಣ್ಣದ ಸ್ಕೂಟಿ ಪೆಪ್, ಕೆಎ 02 ಜೆ 6294 ಕಪ್ಪು ಬಣ್ಣದ ಕೆನೆಟಿಕ್ ಸ್ಕೂಟಿ, ಕೆಎ 20 ಎಸ್ 44 ಕೆಂಪು ಬಿಳಿ ಬಣ್ಣದ ನೋವಾ ಮಾದರಿಯ ಸ್ಕೂಟರ್, ಕೆಎ 20 ಆರ್ 1295 ಕೆಂಪು ಬಿಳಿ […]
ಆ.13 ರಂದು ಶ್ರೀ ವಿಷ್ಣು ಫ್ರೆಂಡ್ಸ್ ಅಜೆಕಾರು ಇದರ ಆಶ್ರಯದಲ್ಲಿ ಪ್ರಥಮ ವರ್ಷದ “ಕೆಸರ್ ಡೊಂಜಿ ದಿನ”
ಅಜೆಕಾರು: ಕಾರ್ಕಳ ತಾಲೂಕಿನ ಅಜೆಕಾರು ಶ್ರೀ ವಿಷ್ಣು ಫ್ರೆಂಡ್ಸ್ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ಬಾಂಧವರ ಕೆಸರ್ ಡೊಂಜಿ ದಿನವನ್ನು ಆಗಸ್ಟ್ 13 ಆದಿತ್ಯವಾರ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬಳಿ ಜಯಂತಿಮಾರ್ ಕಂಬಳದಲ್ಲಿ ನಡೆಯಲಿದೆ. ಮರ್ಣೆ ಗ್ರಾಮದ ಹಿಂದೂ ಸಮಾಜದ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಕಬ್ಬಡಿ, ವಾಲಿಬಾಲ್, ಹಗ್ಗ ಜಗ್ಗಾಟ, ವಿವಿಧ ಬಗೆಯ ಆಟೋಟ ಸ್ಪರ್ಧೆಗಳು ನಡೆಯಲಿರುವುದು. ತಾರ ಮೆರುಗಾಗಿ ತುಳು ಚಿತ್ರನಟರಾದ ದೀಪಕ್ ರೈ ಪಾಣಾಜೆ, […]
ಸೌಜನ್ಯಾ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ದ.ಕ/ಉಡುಪಿ ಬಿಜೆಪಿ ಶಾಸಕರಿಂದ ಪ್ರತಿಭಟನೆ: ನಳಿನ್ ಕುಮಾರ್
ಮಂಗಳೂರು: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸುವಂತೆ ಆಗ್ರಹಿಸಿ ಆ. 27 ರಂದು ಬೆಳ್ತಂಗಡಿಯ ತಾಲೂಕು ಕಚೇರಿ ಮುಂಭಾಗದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ಶಾಸಕರಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಪ್ರತಿಭಟನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಲಾಗುವುದು. ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಡುಪಿ: ನೂತನ ಎಡಿಸಿಯಾಗಿ ಮಮತಾ ದೇವಿ ನೇಮಕ
ಉಡುಪಿ: ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ವರ್ಗಾವಣೆಗೊಂಡಿದ್ದು, ನೂತನ ಅಪರ ಜಿಲ್ಲಾಧಿಕಾರಿಯಾಗಿ ಮಮತಾ ದೇವಿ ಜಿಎಸ್ ನೇಮಕಗೊಂಡಿದ್ದಾರೆ.
ಪುತ್ತಿಗೆ ಶ್ರೀಗಳ ಸುವರ್ಣ ಚಾತುರ್ಮಾಸ್ಯ ಕಾರ್ಯಕ್ರಮ
ಉಡುಪಿ: ಶುಕ್ರವಾರದಂದು ಮಠದ ಭಕ್ತರಾದ ಬೆಂಗಳೂರಿನ ವೆಂಕಟರಮಣ ಸೋಮಯಾಜಿ ಅವರು ಭಾವೀ ಪರ್ಯಾಯ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರನ್ನು ಆದರದಿಂದ ಬರಮಾಡಿಕೊಂಡು ವೈಭವೋಪೇತವಾಗಿ ಸಂಸ್ಥಾನಪೂಜೆ ಹಾಗೂ ಭಿಕ್ಷಾವಂದನೆ ಇತ್ಯಾದಿ ಕಾರ್ಯಕ್ರಮಗಳನ್ನು ನೆರವೇರಿಸಿ ಗುರುಗಳ ಹಾಗೂ ಶ್ರೀ ವಿಠಲ ದೇವರ ಅನುಗ್ರಹ ಪಡೆದುಕೊಂಡಾರು. ಈ ಸಂದರ್ಭದಲ್ಲಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಅಭಿಯಾನ ನಡೆಯಿತು.