ಐಪಿಸಿ, ಸಿ.ಆರ್.ಪಿ. ಸಿ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ ಬದಲಾವಣೆ: ಲೋಕಸಭೆಯಲ್ಲಿ ಮಸೂದೆ ಪರಿಚಯಿಸಿದ ಕೇಂದ್ರ

ನವದೆಹಲಿ: ಭಾರತೀಯ ದಂಡ ಸಂಹಿತೆ (IPC), ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ (Evidence Act)ಯನ್ನು ಬದಲಿಸಲು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕೆಳಗಿನ ಮಸೂದೆಗಳನ್ನು ಮಂಡಿಸಿದರು ಭಾರತೀಯ ನ್ಯಾಯ ಸಂಹಿತಾ, 2023 (ಅಪರಾಧಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಕ್ರೋಢೀಕರಿಸಲು ಮತ್ತು ತಿದ್ದುಪಡಿ ಮಾಡಲು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದರ ಪ್ರಾಸಂಗಿಕ ವಿಷಯಗಳಿಗೆ) ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, […]
ನಾಳೆ ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ

ಉಡುಪಿ: ಜಿಲ್ಲೆಯ ಚೇಂಪಿ ಶ್ರೀ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂಟಪದಲ್ಲಿ ಆ.12 ರಂದು ಸಂಜೆ 7 ರಿಂದ 9 ರವರೆಗೆ ನ ಪ್ರಖ್ಯಾತ ಗಾಯಕ ಪಂII ಜಯತೀರ್ಥ ಮೇವುಂಡಿ ಇವರಿಂದ ಭಕ್ತಿ ಸಂಗೀತ ಸಂತವಾಣಿ ಮತ್ತು ದಾಸವಾಣಿ ಕಾರ್ಯಕ್ರಮವು ನಡೆಯಲಿದೆ. ದೇವಸ್ಥಾನದ ದಶಮಾನೋತ್ಸವ ಪ್ರಯುಕ್ತ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಬಂದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಳದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಕ್ಸ್ ಆಫೀಸಿನಲ್ಲಿ ಸ್ಟಾರ್ ನಟರ ಮುಖಾಮುಖಿ: ಸನ್ನಿ ಡಿಯೋಲ್ ನ ಗದರ್- 2 ವರ್ಸಸ್ ಅಕ್ಷಯ್ ಕುಮಾರ್ ನ ಓಎಂಜಿ- 2 ಇಂದು ಬೆಳ್ಳಿತೆರೆಗೆ

ಬಹುನಿರೀಕ್ಷಿತ ಚಲನಚಿತ್ರಗಳಾದ ಗದರ್- 2 ಮತ್ತು ಓಎಂಜಿ- 2 ದೊಡ್ಡ ಪರದೆಯ ಮೇಲೆ ಇಂದು ಮುಖಾಮುಖಿಯಾಗಿದ್ದು, ಬಾಲಿವುಡ್ ನ ಇಬ್ಬರು ದೊಡ್ಡ ತಾರೆಗಳಾದ ಸನ್ನಿ ಡಿಯೋಲ್ ಮತ್ತು ಅಕ್ಷಯ್ ಕುಮಾರ್ ಎದುರು ಬದುರಾಗಿದ್ದಾರೆ. ವಿಶೇಷವೆಂದರೆ, ಎರಡೂ ಚಲನಚಿತ್ರಗಳ ಮೊದಲನೆ ಭಾಗವು ಅದಾಗಲೇ ಹಲವು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದು, ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆಹೊಡೆದಿದ್ದವು. ಇದೀಗ ಎರಡೂ ಚಿತ್ರಗಳ ಎರಡನೆ ಭಾಗಗಳು ಮುಖಾಮುಖಿಯಾಗಿದ್ದು ಗಲ್ಲಾಪೆಟ್ಟಿಗೆಯ ರಾಜ ಯಾರಾಗುತ್ತಾರೆ ಎನ್ನುವುದನ್ನು ಕಾಲವೆ ಹೇಳಬೇಕು. ಭಾರತ-ಪಾಕಿಸ್ತಾನ ವಿಭಜನೆಯ ಕಥಾ ಹಂದರದಲ್ಲಿ ಹದಿನೇಳು ವರ್ಷಗಳ […]
ಆಗಸ್ಟ್ 15 ರಂದು ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ವತಿಯಿಂದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಆಗಸ್ಟ್ 15 ರಂದು ಬೆಳಗ್ಗೆ 9 ಗಂಟೆಗೆ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಲಿದ್ದು, ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಕೃಷಿ […]
ಎಂಐಟಿ ಕಾಲೇಜಿನಲ್ಲಿ ಎನ್ ಸಿ ಸಿ ವಿದ್ಯಾರ್ಥಿಗಳಿಗಾಗಿ ರೋಯಿಂಗ್ ಸಿಮ್ಯುಲೇಟರ್ ಅನಾವರಣ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಘಟಕವಾದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ, ಎನ್ ಸಿ ಸಿ ವಿದ್ಯಾರ್ಥಿಗಳ ರೋಯಿಂಗ್ ಮತ್ತು ದೈಹಿಕ ತರಬೇತಿಯನ್ನು ಸುಧಾರಿಸಲು ಮತ್ತು ಹೊಸತನವನ್ನು ಉತ್ತೇಜಿಸಲು ಮೊತ್ತ ಮೊದಲ ಬಾರಿಗೆ ರೋಯಿಂಗ್ ಸಿಮ್ಯುಲೇಟರ್ ಅನ್ನು ಅನಾವರಣಗೊಳಿಸಲಾಯಿತು. ಸಮಾರಂಭದಲ್ಲಿ ಮಾಹೆ ಉಪಕುಲಪತಿ, ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ ವೆಂಕಟೇಶ್, ಹಾಗೂ ಎಂಐಟಿ ಮತ್ತು ಮಾಹೆಯ ಇತರ ಗಣ್ಯರು ಉಪಸ್ಥಿತರಿದ್ದರು. ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ ವೆಂಕಟೇಶ್ ಮಾತನಾಡಿ, ಇಂತಹ ಹಲವು ವಿನೂತನ […]