ಉಡುಪಿ ಖಾಸಗಿ ಕಾಲೇಜಿನ ವೀಡಿಯೋ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ

ಉಡುಪಿ: ಉಡುಪಿಯ ಖಾಸಗಿ ಕಾಲೇಜುವೊಂದರ ವಿಡಿಯೋ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದೆ. ಉಡುಪಿಯ ಖಾಸಗಿ ಕಾಲೇಜಿನಲ್ಲಿ ಜುಲೈ 18 ರಂದು ನಡೆದಿದ್ದ ವಿಡಿಯೋ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಎಬಿವಿಪಿ ಬಿಜೆಪಿ ಸೇರಿದಂತೆ ಅನೇಕ ಸಂಘಟನೆಗಳು ಈ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿತ್ತು, ಇನ್ನು ಈ ಪ್ರಕರಣದ ತನಿಖೆ ಎಸ್ಐಟಿಗೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಬಿಜೆಪಿ ಮನವಿ ಮಾಡಿತ್ತು. ಸಿಐಡಿ ತಂಡ ನಾಳೆ ಉಡುಪಿಗೆ ಭೇಟಿ ನೀಡಲಿದೆ ಎಂದು […]

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ: ‘ಇಂಡಿಯಾ’ ಮೈತ್ರಿಕೂಟ ನಾಯಕರಿಂದ ಶ್ಲಾಘನೆ

ನವದೆಹಲಿ: ‘ಇಂಡಿಯಾ’ ಮೈತ್ರಿಕೂಟ ನಾಯಕರು ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸಂಸದರಾಗಿ ಮರುಸ್ಥಾಪನೆ ಮಾಡಿರುವುದನ್ನು ಶ್ಲಾಘಿಸಿದ್ದಾರೆ. ಇದು “ಸತ್ಯದ ವಿಜಯ” ಎಂದು ಅವರು ಬಣ್ಣಿಸಿದ್ದಾರೆ. ಅವರ ಅನರ್ಹತೆಯನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ಅವರ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ಲೋಕಸಭೆ ಸೆಕ್ರೆಟರಿಯೇಟ್ ಅಧಿಸೂಚನೆಯನ್ನು ಪ್ರಕಟಿಸಿದೆ. ಘೋಷಣೆ ಬಂದ ಕೂಡಲೇ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರು ಗಾಂಧಿ ಪರವಾಗಿ ನೃತ್ಯ ಮಾಡಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಣೆ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಮಾನನಷ್ಟ […]

ಹಿರಿಯಡ್ಕ: ಸುಶೀಲ ಟೀಚರ್ ನಿಧನ; ಜಿಲ್ಲಾ ಬಿಜೆಪಿ ತೀವ್ರ ಸಂತಾಪ

ಹಿರಿಯಡ್ಕ: ಬೊಮ್ಮರಬೆಟ್ಟು ಗ್ರಾಮದ ಎಚ್. ಸುಶೀಲ ಟೀಚರ್‌ ಇತ್ತೀಚೆಗೆ ನಿಧನರಾಗಿದ್ದು, ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 1962ನೇ ಇಸವಿಯಿಂದ 2020 ಇಸವಿಯವರೆಗೆ 58 ವರ್ಷ ಬಾಲವಾಡಿಯಲ್ಲಿ ಮಕ್ಕಳ ಹಾಗೂ ಪೋಷಕರ ನೆಚ್ಚಿನ ಶಿಕ್ಷಕಿಯಾಗಿ, 45 ವರ್ಷ ಹೊಲಿಗೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅವರ ಸಹೋದರಿ ಎಚ್. ಯೋಗಿನಿ ಅವರ ಜೊತೆ ಸಹಾಯಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಇಬ್ಬರು ಜೊತೆಯಾಗಿ ಸರಿ ಸುಮಾರು 33 ವರ್ಷದಿಂದ ಅಂಚೆ […]

ಸೌಜನ್ಯ ಪ್ರಕರಣ ಹಳಿ ತಪ್ಪಿಸಿದವರು ಯಾರೆಂದು ಬಲ್ಲೆ; ರಹಸ್ಯ ಬಿಚ್ಚಿಟ್ಟರೆ ಸಾಯಿಸಬಹುದು: ವಸಂತ ಬಂಗೇರ

ಬೆಳ್ತಂಗಡಿ: ಸೌಜನ್ಯ ಪ್ರಕರಣದ ರಹಸ್ಯ ಬಿಚ್ಚಿಟ್ಟರೆ ನನ್ನನ್ನು ಸಾಯಿಸಬಹುದು. ಆದರೆ ಆ ರಹಸ್ಯವನ್ನು ಸಾಯುವ ಮುನ್ನ ನಾನು ಹೇಳದೇ ಬಿಡುವುದಿಲ್ಲ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬೆಳ್ತಂಗಡಿಯ ಸೌಜನ್ಯ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲಾಗಿದ್ದು ಇದರ ಹಿಂದೆ ಇರುವವರು ಯಾರೆಂದು ನನಗೆ ಗೊತ್ತಿದೆ ಎಂದರು. ನಾನು ಶಾಸಕನಾಗಿದ್ದಾಗ ಅಧಿವೇಶನದಲ್ಲಿ ಸೌಜನ್ಯಾ ಕೇಸ್ ಅನ್ನು ಸಿಬಿಐಗೆ ವಹಿಸಲು ಆಗ್ರಹಿಸಿದ್ದೆ. ಸಿದ್ದರಾಮಯ್ಯನವರು ಕೆಲವರನ್ನ ತುಂಬಾ ಒಳ್ಳೆಯವರು ಎಂದು ನಂಬಿದ್ದರು. ಅಧಿವೇಶನಕ್ಕೂ ಮುನ್ನ […]

ಜ್ಞಾನಸುಧಾ ಕಾಲೇಜಿನಲ್ಲಿ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನೆ

ಕಾರ್ಕಳ: ಪಠ್ಯ ಶಿಕ್ಷಣದ ಜೊತೆಗೆ ಎನ್.ಎಸ್.ಎಸ್ ನಂತಹ ಪಠ್ಯೇತರ ಚಟುವಟಿಕೆಗಳು ನಮ್ಮ ಶೈಕ್ಷಣಿಕ ಜೀವನದಲ್ಲಿ ಜೀವನ ಕೌಶಲ್ಯಗಳನ್ನು ಕಲಿಸಿಕೊಡುತ್ತದೆ ಎಂದು ಜ್ಞಾನಸುಧಾ ವಾಣಿಜ್ಯ ವಿಭಾಗದ ಹಳೆವಿದ್ಯಾರ್ಥಿಗಳಾದ ಸಿ.ಎ. ರಘುರಾಮ್ ಪ್ರಭು ಹೇಳಿದರು. ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಎನ್.ಎಸ್.ಎಸ್.ನ ವಿವಿಧ ಚಟುವಟಿಕೆಗಳು ಶೈಕ್ಷಣಿಕ ಜೀವನದ ನಂತರ ನಮ್ಮ ವೃತ್ತಿ ಜೀವನಕ್ಕೆ, ಸಾಮಾಜಿಕ ಬದುಕಿಗೆ ಸಹಕಾರಿಯಾಗುತ್ತದೆ. ವಾಣಿಜ್ಯ ವಿಭಾಗದ ಸ್ಪರ್ಧಾತ್ಮಕ ಪ್ರಪಂಚಕ್ಕೆ ನಾವು ಕೌಶಲ್ಯಭರಿತರಾಗಿ ತೆರೆದುಕೊಳ್ಳಬೇಕಾಗಿದೆ ಎಂದರು. ಸಿಎ […]