ಸುಮೇರು ಇಂಟೀರಿಯರ್ ಡಿಸೈನರ್ ಎಂಡ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ನಲ್ಲಿ ಉದ್ಯೋಗಾವಕಾಶ

ಉಡುಪಿ: ಇಲ್ಲಿನ ಸುಮೇರು ಇಂಟೀರಿಯರ್ ಡಿಸೈನರ್ ಎಂಡ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ನಲ್ಲಿಆರ್ಕಿಟೆಕ್ಟ್, ಬಿಇ-ಸಿವಿಲ್, ಡಿಪ್ಲೊಮಾ-ಸಿವಿಲ್, ಆಟೋಕ್ಯಾಡ್ ಮತ್ತು 3ಡಿ ಡ್ರಾಫ್ಟಿಂಗ್ ನಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳಿವೆ. ವಿಳಾಸ: 1 ನೇ ಮಹಡಿ, ಮಾಡರ್ನ್ ಟವರ್, ಕಿದಿಯೂರು ಹೋಟೇಲ್ ಬಳಿ, ಉಡುಪಿ. ನಿಮ್ಮ ಸಿವಿ ಗಳನ್ನು 9632901600 ಅಥವಾ [email protected] ಗೆ ಕಳುಹಿಸಿ.

ಜಗದೀಶ್ ಕೆಮ್ಮಣ್ಣು ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ

ಕುಂದಾಪುರ: ಜೆಸಿಐ ಇಂಡಿಯಾ ವಲಯ 15 ರ ಬೆಳವಣಿಗೆ, ಅಭಿವೃದ್ದಿ ಮತ್ತು ವ್ಯವಹಾರ ಸಮ್ಮೇಳನ ‘ವೃದ್ದಿ’ ಕಾರ್ಯಕ್ರಮವು ಜೆಸಿಐ ಶಂಕರನಾರಾಯಣದ ಆತಿಥ್ಯದಲ್ಲಿ ಹಾಲಾಡಿಯ ಶಾಲಿನಿ ಜಿ. ಶಂಕರ್ ಕನ್ ವೆನ್ಶನ್ ಸೆಂಟರ್ ನಲ್ಲಿ ಜು.23 ರಂದು ಜರುಗಿತು. ಜೆಸಿಐ ಆಂದೋಲನದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಸೇವೆ ಸಲ್ಲಿಸಿದ ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ಕೋಟ ಮೂರ್ತೆದಾರರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ಹಿಂದುಳಿದ ವರ್ಗದ ಸಹಕಾರಿ ಸಂಸ್ಥೆಯನ್ನು ತನ್ನ ಕಾರ್ಯವೈಖರಿಯ ಮೂಲಕ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘವೆಂಬ ಹೆಗ್ಗಳಿಕೆಗೆ […]

ಆ.5 ರಂದು ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬೃಹತ್ ಉದ್ಯೋಗ ಮೇಳ

ಉಡುಪಿ: ಬ್ರಹ್ಮಾವರದ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆ. 5 ರಂದು ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸುಬ್ರಹ್ಮಣ್ಯ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಉದ್ಯೋಗ ಮೇಳದಲ್ಲಿ 20 ಅಧಿಕ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಉದ್ಯೋಗ ಪಡೆಯಲು ಉತ್ತಮ ಅವಕಾಶವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗುವುದು. ಉದ್ಯೋಗಮೇಳದಲ್ಲಿ ಭಾಗವಹಿಸಲು ನೋಂದಣಿ ಉಚಿತವಾಗಿದ್ದು, ಕಡ್ಡಾಯವಾಗಿ ನೋಂದಣಿ ಆಗತಕ್ಕದ್ದು ಎಂದು ಅವರು ಮಾಹಿತಿ ನೀಡಿದರು. […]

ಕಟಪಾಡಿ: ಜು 29-30 ರಂದು ಎಸ್.ವಿ.ಎಸ್ ಹೈಸ್ಕೂಲ್ ನಲ್ಲಿ ಹಲಸು ಮೇಳ

ಕಟಪಾಡಿ: ಯುವ ಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ಹಾಗೂ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಉಡುಪಿ ಇದರ ಸಹಯೋಗದೊಂದಿಗೆ ಜುಲೈ 29 ಮತ್ತು 30 ರಂದು ಕಟಪಾಡಿಯ ಎಸ್.ವಿ.ಎಸ್ ಹೈಸ್ಕೂಲ್ ನಲ್ಲಿ ಪ್ರಥಮ ಬಾರಿಗೆ 2 ದಿನದ ಹಲಸು ಮೇಳವನ್ನು ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಉಡುಪಿಯ ನಿರ್ದೇಶಕ ಹೇಮಂತ್ ಕುಮಾರ್, ಕಾಪು ಪೊಲೀಸ್ ಠಾಣಾ ಸಬ್ ಇನ್ ಸ್ಪೆಕ್ಟರ್ ಶೈಲ ಮುರಗೊಡ್, ಎಸ್. […]

ಜು. 27 ರಿಂದ ಆ. 26 ರವರೆಗೆ ನಿಯೋಲೈಫ್ ವೆಲ್ನೆಸ್ ಸೆಂಟರ್ ನಲ್ಲಿ ಈಶಾ ಹಠ ಯೋಗ

ಉಡುಪಿ: ನಿಯೋಲೈಫ್ ವೆಲ್ ನೆಸ್ ಸೆಂಟರ್ ಸಹಯೋಗದಲ್ಲಿ ನಿಶ್ಚಲ ಯೋಗ ಪ್ರಸ್ತುತ ಪಡಿಸುತ್ತಿದೆ ಒಂದು ತಿಂಗಳ ಈಶಾ ಹಠ ಯೋಗ ಕಾರ್ಯಕ್ರಮ ಬೆನ್ನು ಮೂಳೆ ಬಲವರ್ಧನೆ ಹಾಗೂ ಆತಂಕ ಶಮನಗೊಳಿಸಲು ಈಶಾ ಹಠಯೋಗವು ಸಹಕಾರಿಯಾಗಿದೆ. ಕಾರ್ಯಕ್ರಮದ ವಿವರ: ಜುಲೈ 27 ರಿಂದ ಆಗಸ್ಟ್ 26 ರವರೆಗೆ ಸಾಪ್ತಾಹಿಕ 6 ದಿನಗಳು ಸಂಜೆ 6:15 ರಿಂದ 7:00 ರ ವರೆಗೆ. ೧೨ ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು. ಕಾರ್ಯಕ್ರಮ ಶುಲ್ಕ: 1500 ರೂ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : https://forms.gle/AfXyTYG4qsm4C8w9A […]