ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಪರಿಣಾಮ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿ ಬಂದ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ ನದಿ, ತೊರೆಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮಳೆ, ಗಾಳಿಗೆ ಈವರೆಗೆ 50ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. 300ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. 10ಕ್ಕೂ ಅಧಿಕ ಟ್ರಾನ್ಸ್‌ಫಾರ್ಮರ್​ಗಳು ಕೆಟ್ಟು ಹೋಗಿವೆ. ತೋಟಗಾರಿಕಾ ಬೆಳೆಗಳು ನೆಲಕಚ್ಚಿದ್ದರೆ, ನದಿಗಳ ಪ್ರವಾಹದಿಂದ ಅಲ್ಲಲ್ಲಿ ಭತ್ತದ ಬೆಳೆ ಪ್ರವಾಹಕ್ಕೆ ಕೊಚ್ಚಿಹೋಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, 50ಕ್ಕೂ ಅಧಿಕ […]

ಗ್ರೀಸ್ ದೇಶದ ಹಲವಾರು ಕಡೆಗಳಲ್ಲಿ ಭೀಕರ ಕಾಳ್ಗಿಚ್ಚು: 19 ಸಾವಿರ ಜನ ಸ್ಥಳಾಂತರ

ಅಥೆನ್ಸ್​ (ಗ್ರೀಸ್) : ಗ್ರೀಸ್​ನ 82 ಸ್ಥಳಗಳಲ್ಲಿ ವ್ಯಾಪಿಸಿರುವ ಕಾಳ್ಗಿಚ್ಚು ನಂದಿಸಲು ಅಗ್ನಿಶಾಮಕ ಪಡೆಗಳು ಹರಸಾಹಸ ಪಡುತ್ತಿವೆ. ಈ ಪೈಕಿ ಭಾನುವಾರದಂದು 64 ಸ್ಥಳಗಳಲ್ಲಿ ಹೊಸದಾಗಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ರಾತ್ರಿ ಸಮಯದಲ್ಲಿ ಅಗ್ನಿಶಾಮಕ ವಿಮಾನ ಹಾಗೂ ಹೆಲಿಕಾಪ್ಟರ್​ಗಳು ಸಂಚರಿಸಲು ಸಾಧ್ಯವಾಗದ ಕಾರಣದಿಂದ ಅಗ್ನಿಶಾಮಕ ಪಡೆ ಸಿಬ್ಬಂದಿಗೆ ಬೆಂಕಿ ನಂದಿಸುವುದು ಸವಾಲಾಗಿದೆ. ಗ್ರೀಸ್ ದೇಶದ ಹಲವಾರು ಕಡೆಗಳಲ್ಲಿ ಕಾಣಿಸಿಕೊಂಡ ಭೀಕರ ಕಾಳ್ಗಿಚ್ಚು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ 12 ಗ್ರಾಮಗಳಿಂದ ಜನರ ಸ್ಥಳಾಂತರ: 12 ಗ್ರಾಮಗಳು ಮತ್ತು […]

‘ ವಿಶ್ವದ ಪ್ರಮುಖ 50 ಸ್ಟ್ರೀಟ್​​ ಫುಡ್‌ಗಳ​ ಪಟ್ಟಿಯಲ್ಲಿ ಮೈಸೂರು ಪಾಕ್​’ಗೆ 14ನೇ ಸ್ಥಾನ

ಮೈಸೂರು: ವಿಶ್ವದ ಪ್ರಮುಖ ಅತ್ಯುತ್ತಮ ಸ್ಟ್ರೀಟ್‌ ಫುಡ್‌ಗಳಲ್ಲಿ ಮೈಸೂರಿನ ಪ್ರಸಿದ್ಧ ಮೈಸೂರು ಪಾಕ್‌ಗೆ 14ನೇ ಸ್ಥಾನ ದೊರೆತಿದೆ. ವಿಶ್ವಮಾನ್ಯತೆ ಪಡೆದ ಹೆಮ್ಮೆಯ ಸಿಹಿತಿಂಡಿಯ ಕುರಿತು ಮೂಲಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರು ಮಹಾರಾಜರಿಂದ ನಾಮಕರಣಗೊಂಡ ಸಿಹಿ ತಿಂಡಿಯೇ ಇಂದಿನ ಮೈಸೂರು ಪಾಕ್. ಮೈಸೂರಿನ ಪ್ರಸಿದ್ಧ ಸಿಹಿತಿಂಡಿ ಮೈಸೂರು ಪಾಕ್‌​ ವಿಶ್ವದ ಪ್ರಮುಖ 50 ಅತ್ಯುತ್ತಮ ಸ್ಟ್ರೀಟ್‌ ಫುಡ್ ಖಾದ್ಯಗಳಲ್ಲಿ 14ನೇ ಸ್ಥಾನ ಪಡೆದಿದೆ. ಇಷ್ಟಕ್ಕೂ ಇದಕ್ಕೆ ಮೈಸೂರು ಪಾಕ್​ ಎಂಬ ಹೆಸರು ಬಂದಿದ್ದು ಹೇಗೆ?. ಮೂಲಸ್ಥರ ಮಾತುಗಳು ಇಲ್ಲಿವೆ. […]

ಜನಪ್ರಿಯ ಮಾಧ್ಯಮ ಟ್ವಿಟರ್​ ಲೋಗೋ ಬದಲಾವಣೆ

ಲಂಡನ್: ಜಗತ್ತಿನ ನಂಬರ್​ 1 ಧನಿಕ ಎಲಾನ್​ ಮಸ್ಕ್​ ಒಡೆತನದ ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್​ ತನ್ನ ಲೋಗೊ ಮತ್ತು ಹೆಸರನ್ನು ಬದಲಿಸಿಕೊಂಡಿದೆ. ನೀಲಿ ಹಕ್ಕಿ ಜಾಗದಲ್ಲೀಗ ಕಪ್ಪು ಬಿಳಿಯ X ಎಂಬ ವಿನ್ಯಾಸ ಕಾಣಿಸಿಕೊಂಡಿದೆ. ಜನಪ್ರಿಯ ಮಾಧ್ಯಮ ಟ್ವಿಟರ್​ ಲೋಗೋ ಬದಲಾಗಿದೆ. ಮಾಲೀಕ ಎಲಾನ್​ ಮಸ್ಕ್​ ಹೊಸ ಲೋಗೋವನ್ನು ಅನಾವಣ ಮಾಡಿದರು. ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋದಲ್ಲಿನ ಟ್ವಿಟರ್​ನ ಕೇಂದ್ರ ಕಚೇರಿಯಲ್ಲಿ ಮಾಲೀಕ ಎಲಾನ್​ ಮಸ್ಕ್​ X ಹೊಸ ಲೋಗೋವನ್ನು ಸೋಮವಾರ ಬಿಡುಗಡೆ ಮಾಡಿದರು. ಇದು ಸದ್ಯ ಕಂಪ್ಯೂಟರ್​ಗಳ […]

ನಾಳೆ(ಜು.25) ದ.ಕ. ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಹಾಗಾಗಿ ನಾಳೆ (ಜು.25) ಕೂಡಾ ದ.ಕ. ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜು.24ರಿಂದ ಜು.25 ರವರೆಗೆ, ರೆಡ್, ಅಲರ್ಟ್, ಘೋಷಣೆಯಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಶಿಕ್ಷಣ, ಸರ್ಕಾರಿ ಅನುದಾನಿತ ಮತ್ತು ಖಾಸಗಿ […]