ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ ಯೋಜನೆ ಪುನರಾರಂಭ ಪರಿಶೀಲನೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ ಯೋಜನೆಗೆ ಮರು ಚಾಲನೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ಕುರಿತು ಮತನಾಡಿದ ಸಿಎಂ, ಶಾಲಾ ಮಕ್ಕಳ ಸೈಕಲ್ ವಿತರಣೆ ಯೋಜನೆ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ಯೋಜನೆ ಪುನಾರಂಭಿಸುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. 2006-07ರಲ್ಲಿ ಆರಂಭಗೊಂಡ ಈ ಯೋಜನೆಯಡಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಸರಕಾರಿ ಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ಉಚಿತವಾಗಿ ಸೈಕಲ್‌ಗಳನ್ನು […]
ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಭಾರತವನ್ನು ಪ್ರತಿನಿಧಿಸಿಲಿದ್ದಾಳೆ ರೆಚೆಲ್ ಅನಿಶಾ ಕ್ರಾಸ್ತಾ
ವಾಮಂಜೂರು: ಇಲ್ಲಿನ ನಿವಾಸಿ ರೆಚೆಲ್ ಅನಿಶಾ ಕ್ರಾಸ್ತಾ, ಆಗಸ್ಟ್ 1 ರಿಂದ 12 ರ ವರೆಗೆ ಸೌತ್ ಕೊರಿಯಾದಲ್ಲಿ ನಡೆಯಲಿರುವ 25ನೇ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಭಾಗವಹಿಸಲಿದ್ದಾಳೆ. 2020-21 ಸಾಲಿನಲ್ಲಿ ಸ್ಕೌಟ್ಸ್ ಗೈಡ್ಸ್ ರಾಜ್ಯ ಪುರಸ್ಕಾರವನ್ನು ಪಡೆದಿರುವ ರೆಚೆಲ್ ಕ್ರಾಸ್ತಾ ಪ್ರಸ್ತುತ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಈಕೆ ವಾಮಂಜೂರಿನ ರೋಶನ್ ಹಾಗೂ ಲವೀನಾ ಕ್ರಾಸ್ತಾ ದಂಪತಿಯ ಪುತ್ರಿ.
ಗೃಹಲಕ್ಷ್ಮಿ ಯೋಜನೆ: ಯಾವುದೇ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ; ನಿಗದಿತ ಕೇಂದ್ರಗಳಲ್ಲೇ ಅರ್ಜಿ ಸಲ್ಲಿಕೆ
ಉಡುಪಿ: ಜು. 22ರಿಂದ ಗೃಹ ಲಕ್ಷ್ಮೀ ಯೋಜನೆಗೆ ನಿಮ್ಮ ಸಮೀಪದ ಯಾವುದೇ ಗ್ರಾಮ ಒನ್ ಸೇವಾ ಕೇಂದ್ರ, ಗ್ರಾಮ ವನ್ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ನಿನ್ನೆ ಮೊಬೈಲಿಗೆ ಬಂದ ಮೆಸೇಜಿನಲ್ಲಿ ನಿಗದಿತ ದಿನದಂದು ನಿಗದಿತ ಸಮಯಕ್ಕೆ ಸೂಚಿಸಿದ ಗ್ರಾಮ ಒನ್ ಸೇವಾ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶ ರದ್ದಾಗಿದೆ. ಇನ್ನು ಮುಂದೆ ನಿಮ್ಮ ಜಿಲ್ಲಾ ವ್ಯಾಪ್ತಿಯ ಯಾವುದೇ ಗ್ರಾಮ ಒನ್ ಸೇವಾ […]
ಜು. 25 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜುಲೈ 25 ಮತ್ತು 26 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. ಶಿರಿಯಾರ ಶಾಖಾ ವ್ಯಾಪ್ತಿಯಲ್ಲಿ Structure replacement, additional TC Work, Railway Crossing shifting Work ಮತ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 110/11 ಕೆ.ವಿ ಮಧುವನ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬಿಲ್ಲಾಡಿ, ಮಂದಾರ್ತಿ ಮತ್ತು ಶಿರಿಯಾರ ಫೀಡರ್‌ಗಳ ಶಿರಿಯಾರ, ಶಿರೂರು, ಅಚ್ಲಾಡಿ, ಸೈಬ್ರಕಟ್ಟೆ, […]
ಆಗಸ್ಟ್ 1 ರಿಂದ ನಂದಿನ ಹಾಲಿನ ದರ 3 ರೂ ನಷ್ಟು ಹೆಚ್ಚಳ: ಕೆಎಂಎಫ್ ಪ್ರಸ್ತಾವನೆ
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಆಗಸ್ಟ್ 1 ರಿಂದ ರಾಜ್ಯಾದ್ಯಂತ ನಂದಿನಿ ಹಾಲಿನ ದರವನ್ನು 3 ರೂ ನಷ್ಟು ಹೆಚ್ಚಿಸಲು ಮುಂದಾಗಿದೆ. ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಳುಹಿಸಲಾಗಿದೆ ಮತ್ತು ಸಂಪುಟ ಅನುಮೋದನೆ ನಂತರ ಕರ್ನಾಟಕ ಸರ್ಕಾರವು ನಿರ್ಧಾರವನ್ನು ಪ್ರಕಟಿಸಲಿದೆ. ಶುಕ್ರವಾರ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕರ್ನಾಟಕ ಸಹಕಾರ ಸಚಿವ ಕೆ ರಂಜಣ್ಣ, ಹಾಲಿನ ಉತ್ಪಾದನಾ ವೆಚ್ಚದ ಏರಿಕೆಯನ್ನು ಪರಿಹರಿಸಲು ಮತ್ತು ಉತ್ಪಾದಕರಿಗೆ ಸಹಾಯ ಮಾಡಲು ಹಾಲಿನ ದರವನ್ನು ಹೆಚ್ಚಿಸುವ ಪ್ರಸ್ತಾಪವಿದೆ. […]