ಡೆಸ್ಕ್ ಉದ್ಯೋಗಿಗಳಿಂದ ಕೆಲಸದಲ್ಲಿ ಶೇ 75ರಷ್ಟು AI ಬಳಕೆ
ನವದೆಹಲಿ : ಸೇಲ್ಸ್‌ಫೋರ್ಸ್ ಮಾಲೀಕತ್ವದ ಎಂಟರ್‌ಪ್ರೈಸ್ ಚಾಟ್ ಅಪ್ಲಿಕೇಶನ್ ಸ್ಲಾಕ್ ಪ್ರಕಾರ, ತಮ್ಮ ಕೆಲಸದಲ್ಲಿ AI ಅನ್ನು ಅಳವಡಿಸಿಕೊಂಡಿರುವ ಭಾರತೀಯ ಸಂಸ್ಥೆಗಳು ಅಳವಡಿಸಿಕೊಳ್ಳದ ಕಂಪನಿಗಳಿಗಿಂತ ಶೇಕಡಾ 53 ರಷ್ಟು ಹೆಚ್ಚು ಉತ್ಪಾದಕತೆಯ ಮಟ್ಟ ಹೊಂದಿವೆ ಎಂದು ವರದಿ ತೋರಿಸಿದೆ.ಸುಮಾರು 75 ಪ್ರತಿಶತದಷ್ಟು ಭಾರತೀಯ ಉದ್ಯೋಗಿಗಳು ಕೆಲಸದಲ್ಲಿ ಉತ್ಪಾದಕತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ) ಮತ್ತು ಸ್ವಯಂಚಾಲಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೊಸ ವರದಿಯೊಂದು ಗುರುವಾರ ತಿಳಿಸಿದೆ.ಶೇ 75 ರಷ್ಟು ಭಾರತೀಯ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಕೃತಕ ಬುದ್ಧಿಮತ್ತೆ […]
ಮಹಾರಾಷ್ಟ್ರದಲ್ಲಿ ಮಳೆ ಅಬ್ಬರದ ಹಿನ್ನೆಲೆ ಚಿಕ್ಕೋಡಿಯ ಹಲವು ಸೇತುವೆಗಳು ಜಲಾವೃತ
ಚಿಕ್ಕೋಡಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿದ ಧಾರಾಕಾರ ಮಳೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹಲವು ಕೆಳ ಹಂತದ ಸೇತುವೆಗಳು ಜಲಾವೃತವಾಗಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾನದಿಗೆ 49,500 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ, ಮೈದುಂಬಿ ಹರಿಯುತ್ತಿದೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಳವಾಗಿದೆ. ವಿನಯಕುಮಾರ ರಜಪೂತ ಎಂಬುವವರಿಗೆ ಸೇರಿದ ಕಾರಿನ ಮೇಲೆ ಮರವೊಂದು ಬಿದ್ದಿದೆ. ಅದೃಷ್ಟವಶಾತ್ ಸಾವಿನ ದವಡೆಯಿಂದ ಅವರು ಪಾರಾಗಿದ್ದಾರೆ. ಜಿಲ್ಲೆಯಾದ್ಯಂತ ಈಗಾಗಲೇ 83 ಸೇತುವೆಗಳ […]
ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ Sensex 67,571 – Nifty 19,979
ಮುಂಬೈ : ಭಾರತೀಯ ಷೇರು ಮಾರುಕಟ್ಟೆ ತನ್ನ ಏರುಗತಿಯ ಪಯಣವನ್ನು ಇಂದೂ ಮುಂದುವರಿಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಈವರೆಗಿನ ಗರಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿವೆ.ಬಿಎಸ್ಇ ಸೆನ್ಸೆಕ್ಸ್ ಹಿಂದಿನ ದಿನದ ಮುಕ್ತಾಯ 67,097.44ಕ್ಕೆ ಹೋಲಿಸಿದರೆ ಗುರುವಾರ 23 ಪಾಯಿಂಟ್‌ಗಳ ಇಳಿಕೆಯೊಂದಿಗೆ 67,074.34 ನಲ್ಲಿ ಪ್ರಾರಂಭವಾಯಿತು. ವಹಿವಾಟಿನ ಅಂತಿಮ ಗಂಟೆಯಲ್ಲಿ ಸೂಚ್ಯಂಕವು ಉತ್ತಮ ಖರೀದಿಗೆ ಸಾಕ್ಷಿಯಾಯಿತು. ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ ತನ್ನ ಹೊಸ ದಾಖಲೆಯ ಗರಿಷ್ಠ 67,619.17 ಅನ್ನು ತಲುಪಿತು ಮತ್ತು ನಿಫ್ಟಿ ಕೂಡ ತನ್ನ ಹೊಸ […]
`ಏಕಲವ್ಯ ಮಾದರಿ ವಸತಿ ಶಾಲೆ’ಗಳಲ್ಲಿ 5,000 ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ 5,000 ಕ್ಕೂ ಹೆಚ್ಚು ಟಿಜಿಟಿ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. EMRS TGT ಟೀಚರ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಪ್ರಕ್ರಿಯೆ ಪ್ರಾರಂಭವಾದ ನಂತರ, ಮೊದಲನೆಯದಾಗಿ, ನೀವು emrs.tribal.gov.in ಅಧಿಕೃತ ವೆಬ್ಸೈಟ್ಗೆ ಹೋಗಬೇಕು. ವೆಬ್ಸೈಟ್ನ ಮುಖಪುಟದಲ್ಲಿ ಉದ್ಯೋಗ ಅಧಿಸೂಚನೆಗಳಿಗೆ ಲಿಂಕ್ ಕ್ಲಿಕ್ ಮಾಡಿ ಮುಂದಿನ ಪುಟದಲ್ಲಿ ಕೋರಲಾದ ವಿವರಗಳೊಂದಿಗೆ ನೋಂದಣಿ ಮಾಡಬೇಕಾಗುತ್ತದೆ. ನೋಂದಣಿಯ ನಂತರ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಇದರ ನಂತರ, ಅರ್ಜಿ […]
ಸೊಸೈಟಿ ಕಛೇರಿಯಲ್ಲಿ ಮಹಿಳೆ ಆತ್ಮಹತ್ಯೆ ಪ್ರಕರಣ: ಆರೋಪಿ ಆತ್ಮಹತ್ಯೆಗೆ ಶರಣು
ಕಾರ್ಕಳ: ಜು.14ರಂದು ಮಹಿಳೆಯೋರ್ವರು ಕೆಲಸ ಮಾಡುತ್ತಿದ್ದ ಸೊಸೈಟಿಯ ಕಚೇರಿಯಲ್ಲಿ ಅತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಸಂತೋಷ್ ಯಾನೆ ಹರಿತನಯ ದೇವಾಡಿಗ ಹೊಸ್ಮಾರಿನಲ್ಲಿ ಆತ್ಮಹತ್ಯೆ ಶರಣಾಗಿದ್ದಾನೆ. ಹರಿತನಯ ಕಾರ್ಕಳ ಮಾರ್ಕೆಟ್ ರೋಡ್ ನ ಮಹಿಳಾ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮೀಳಾ ಎಂಬುವವರನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಪ್ರಮೀಳಾ ನೇಣು ಬಿಗಿದುಕೊಂಡು ಬ್ಯಾಂಕ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತಂತೆ ಪ್ರಮೀಳಾ ಸಹೋದರ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿತ್ತು. ಶನಿವಾರದಿಂದ […]