ಅಮೇರಿಕಾದ ಪೇಟೆಂಟ್ ಪಡೆದ ಡಾ. ಎಂ. ವಿಜಯಭಾನು ಶೆಟ್ಟಿ ಅವರ ಆಲ್ಝೈಮರ್ ಔಷಧಿ ‘ಮುನಿಪ್ರಜ್ಞಾ’
ಮಣಿಪಾಲ: ಡಾ. ಕೃಷ್ಣ ಲೈಫ್ ಸೈನ್ಸಸ್ ಲಿಮಿಟೆಡ್ ಮಣಿಪಾಲದ ಎಂ.ಡಿ, ಡಾ. ಎಂ. ವಿಜಯಭಾನು ಶೆಟ್ಟಿಯವರು ಅಭಿವೃದ್ಧಿ ಪಡಿಸಿದ ಅಲ್ಝೈಮರ್ ಮತ್ತು ಪಾರ್ಕಿನ್‌ಸೋನಿಸಮ್‌ನ ಆಯುರ್ವೇದ ಔಷಧಿ ಮುನಿಪ್ರಜ್ಞಾ ಮಾತ್ರೆಗಳಿಗೆ ಅಮೆರಿಕಾದ ಡೈರೆಕ್ಟರ್ ಆಫ್ ಪೇಟೆಂಟ್ ಆ್ಯಂಡ್ ಟ್ರೇಡ್ ಮಾರ್ಕ್ ಆಫೀಸಿನಿಂದ ಪೇಟೆಂಟ್ ಲಭಿಸಿರುತ್ತದೆ. ಇವರು ತಯಾರಿಸಿದ ಸಿಹಿಮೂತ್ರ ರೋಗದ ಇನ್ಸೋಲ್-ಎನ್, ಹೃದಯ ರಕ್ಷಣೆಯ ಹಾರ್ಟೋಜನ್, ಕ್ಯಾನ್ಸರ್ ಕಾಯಿಲೆ ಚಿಕಿತ್ಸೆಯ ಮುನೆಕ್ಸ್, ಮೂತ್ರಕೋಶದ ತೊಂದರೆಗಳಿಗೆ ಮುನಿಪ್ರಭಾ, ಮಾದಕದ್ರವ್ಯ ಚಟಬಿಡಿಸುವ ಹರ್ಬಾಡಿಕ್ಟ್, ಲಿಪಿಡ್ ಕೊಲೆಸ್ಟ್ರಾಲ್ ಹಿಡಿತದಲ್ಲಿಡುವ ಹರ್ಬೋಟ್ರಿಮ್, ಥೈರಾಯ್ಡ್ ತೊಂದರೆ […]
ಆಧಾರ್ ಗೆ ಲಿಂಕ್ ಮಾಡದ ಪ್ಯಾನ್ ಖಾತೆಗಳು ಹೆಚ್ಚಿನ ಟಿಡಿಎಸ್-ಟಿಸಿಎಸ್ ಗೆ ಕಾರಣವಾಗಬಹುದು: ಆದಾಯ ತೆರಿಗೆ ಇಲಾಖೆ
ನವದೆಹಲಿ: ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದ ಕಾರಣ ಕಾರ್ಯನಿರತವಲ್ಲದ(inoperative) ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ನಿಷ್ಕ್ರಿಯ ಪ್ಯಾನ್(inactive)ಗೆ ಸಮಾನವಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಕಾರ್ಯಾಚರಣೆಯಲ್ಲಿ ಇಲ್ಲದ ಪ್ಯಾನ್ ನಿಷ್ಕ್ರಿಯ ಪ್ಯಾನ್ ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪ್ಯಾನ್- ಆಧಾರ್ ಲಿಂಕ್ ಆಗಿರುವುದನ್ನು ಲೆಕ್ಕಿಸದೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಸಬಹುದು ಎಂದು ತೆರಿಗೆ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಬಾಕಿ ಉಳಿದಿರುವ ಮರುಪಾವತಿಗಳು ಮತ್ತು ಅಂತಹ ಮರುಪಾವತಿಗಳ ಮೇಲಿನ ಬಡ್ಡಿಯನ್ನು ಇಂತಹ ಪ್ಯಾನ್ ಗಳಿಗೆ […]
PUBG ಪ್ರೇಮ ಪ್ರಕರಣ: ಪಾಕಿಸ್ತಾನಿ ಗೂಢಾಚಾರಿಣಿ ಶಂಕೆ; ಉತ್ತರ ಪ್ರದೇಶದ ಎಟಿಎಸ್ ಬಲೆಯಲ್ಲಿ ಸೀಮಾ ಹೈದರ್
ಹೊಸದಿಲ್ಲಿ: PUBG ಆನಲೈನ್ ಗೇಮ್ ನಲ್ಲಿ ಭೇಟಿಯಾದ ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಗುಲಾಮ್ ಹೈದರ್ ಅನ್ನು ಉತ್ತರ ಪ್ರದೇಶ ಎಟಿಎಸ್ ಪೊಲೀಸರು ಬಂಧಿಸಿದ್ದಾರೆ. ಏತನ್ಮಧ್ಯೆ, ಆಕೆ ದೆಹಲಿಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಳು ಎಂದು ನೋಯ್ಡಾ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದು, ಭಾರತದ ಸಚಿನ್ ಮೀನಾ ಎಂಬ ವ್ಯಕ್ತಿಯನ್ನು 2019 ರಲ್ಲಿ ಆನ್‌ಲೈನ್ ಗೇಮ್ ಪ್ಲೇಯರ್ ಅನ್‌ನೌನ್ಸ್ […]
ಪೂನಾದ ಆಸ್ಪತ್ರೆಯೊಂದಕ್ಕೆ ಆಯುರ್ವೇದ ಚಿಕಿತ್ಸಕರು ಬೇಕಾಗಿದ್ದಾರೆ
ಪೂನಾದಲ್ಲಿರುವ ಆಸ್ಪತ್ರೆಯೊಂದಕ್ಕೆ ಅನುಭವಿ ಆಯುರ್ವೇದ ಚಿಕಿತ್ಸಕರು ಬೇಕಾಗಿದ್ದು, ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: 9767892255 ಸಂಪರ್ಕಿಸಿ
ನಾಟಾ ಪರೀಕ್ಷೆ: ಕ್ರಿಯೇಟಿವ್ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ
ಕಾರ್ಕಳ: ದೇಶಾದಾದ್ಯಂತ ಆರ್ಕಿಟೆಕ್ಚರ್ ಕೋರ್ಸ್ ಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನಡೆಸಲಾದ ನಾಟಾ (NATA) ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಯಾದ ಪ್ರಣವ್ ಪಿ ಸಂಜಿ ಇವರಿಗೆ ರಾಜ್ಯ ಮಟ್ಟದ 28 ನೇ ರ‍್ಯಾಂಕ್, ದೀಕ್ಷಾ ಪಾಂಡು 42 ನೇ ರ‍್ಯಾಂಕ್, ವರುಣ್ ಜಿ ನಾಯಕ್ 67 ನೇ ರ‍್ಯಾಂಕ್ ಲಭಿಸಿದೆ. ಉಳಿದಂತೆ ಸಹನಾ ಎನ್ ಸಿ 104 ನೇ ರ‍್ಯಾಂಕ್, ನಾಗಮನಸ್ವಿನಿ ಕೆ 134 ನೇ ರ‍್ಯಾಂಕ್, ಧರಿನಾಥ್ ಬಸವರಾಜ್ ಕುಂಬಾರ್ 138 ನೇ ರ‍್ಯಾಂಕ್, ದೀಪಕ್ ಕೆ ಎಸ್ […]