ಉಡುಪಿ ಜಾವಾ ಯೆಜ಼್ದಿ ಮೋಟಾರ್ ಸೈಕಲ್ ಕ್ಲಬ್ ವತಿಯಿಂದ 21 ನೇ ಅಂತರಾಷ್ಟ್ರೀಯ ಜಾವಾ ಡೇ
ಉಡುಪಿ: ಉಡುಪಿ ಜಾವಾ ಯೆಜ಼್ದಿ ಮೋಟಾರ್ ಸೈಕಲ್ ಕ್ಲಬ್ ವತಿಯಿಂದ ಭಾನುವಾರದಂದು 21 ನೇ ಅಂತರಾಷ್ಟ್ರೀಯ ಜಾವಾ ಡೇ-2023 ಅನ್ನು ಆಚರಿಸಲಾಯಿತು. ಅಂತರರಾಷ್ಟ್ರೀಯ ಜಾವಾ ಯೆಜ಼್ದಿ ದಿನವನ್ನು ವರ್ಷಂಪ್ರತಿ ಜುಲೈ ಎರಡನೇ ಭಾನುವಾರದಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಜಿಲ್ಲೆಯ ಯಜ಼್ದಿ ಮೋಟಾರ್ ಸೈಕಲ್ ಮಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಟಪಾಡಿ: ತ್ರಿಶಾ ಕ್ಲಾಸಸ್ ನ ಸಿ.ಎ ಹಾಗೂ ಸಿ.ಎಸ್ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕಟಪಾಡಿ: ಸಿ.ಎ, ಸಿ.ಎಸ್ ಮೊದಲಾದ ವೃತ್ತಿಪರ ಕೋರ್ಸ್ ಗಳ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿ.ಎ ಫೈನಲ್ , ಇಂಟರ್ ಮೀಡಿಯೆಟ್ ಮತ್ತು ಸಿ.ಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 80ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಂಸ್ಥೆಯ ಅಧ್ಯಕ್ಷ ಸಿಎ ಗೋಪಾಲ ಕೃಷ್ಣಭಟ್ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ವಿದ್ಯಾರ್ಥಿಗಳ ಸಾಧನೆಗೆ ಬಹಳ ಹೆಮ್ಮೆ ಎನಿಸುತ್ತಿದೆ. ಇದರಲ್ಲಿ ಪೋಷಕರ ಪಾತ್ರವೂ ಬಹಳ ದೊಡ್ದದು. […]
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾದಕ ವ್ಯಸನಿಗಳಿಗೆ ಆಪ್ತ ಸಮಾಲೋಚನಾ ಕಾರ್ಯಕ್ರಮ
ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಎ.ವಿ.ಬಾಳಿಗ ಆಸ್ಪತ್ರೆ ಇವರ ಸಹಯೋಗದಲ್ಲಿ ವಿವಿಧ ಠಾಣೆಗಳಲ್ಲಿ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಭಾಗಿಯಾದ ಸುಮಾರು 200 ಮಾದಕ ವ್ಯಸನಿಗಳಿಗೆ ಹಾಗೂ ಅವರ ಪೋಷಕರಿಗೆ 1 ದಿನದ ಆಪ್ತ ಸಮಾಲೋಚನೆ ಕಾರ್ಯಕ್ರಮವನ್ನು ಭಾನುವಾರದಂದು ಡಾ.ಎ.ವಿ ಬಾಳಿಗ ಮೆಮೋರಿಯಲ್ ಹಾಸ್ಪಿಟಲ್ ನಲ್ಲಿ ಆಯೋಜಿಸಲಾಯಿತು. ದುಷ್ಚಟಗಳಿಗೆ ಒಳಗಾದ ವ್ಯಕ್ತಿಗಳಿಗೆ ವ್ಯಸನಗಳಿಂದ ಹೊರ ಬರಲು ಉಚಿತವಾಗಿ ಆಪ್ತ ಸಮಾಲೋಚನಾ ಕಾರ್ಯಕ್ರಮಗಳನ್ನು ಪ್ರತೀ ಭಾನುವಾರ ಹಮ್ಮಿಕೊಳ್ಳುತ್ತಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಜಿಲ್ಲಾ ಎಸ್ಪಿ […]
ಸರಳೇಬೆಟ್ಟು: ಜು.23 ರಂದು ಸಸ್ಯೋತ್ಸವ-ಸಸಿಗಳ ಉಚಿತ ವಿತರಣಾ ಮೇಳ
ಸರಳೇಬೆಟ್ಟು: ಶಿವ ಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪರಿವಾರ್ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಸ್ನೇಹ ಸಂಗಮ ಸರಳೇಬೆಟ್ಟು, ಮಣಿಪಾಲ ಇವರ ಸಹಯೋಗದಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇವರ ಘನ ಉಪಸ್ಥಿತಿಯಲ್ಲಿ ಜು.23 ರಂದು ಕಲಾಮಂಡಲ ಸರಳೇಬೆಟ್ಟು ಇದರ ಆವರಣದಲ್ಲಿ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉತ್ತಮ ತಳಿಯ ಕಸಿ ಸಸ್ಯಗಳು, ಹೂವು-ಹಣ್ಣು ಹಂಪಲು ಹಾಗೂ ಅರಣ್ಯ ಸಂಪತ್ತಿನ ಎಲ್ಲಾ ಜಾತಿಯ ಗಿಡಗಳ ಉಚಿತ ವಿತರಣಾ ಮೇಳವು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೂರ್ಮಾ ರಾವ್ ಅವರಿಗೆ ಬೀಳ್ಕೊಡುಗೆ
ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಿರ್ಗಮನ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರನ್ನು ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕೂರ್ಮಾರಾವ್ ಅವರ ತಾಳ್ಮೆ, ಕರ್ತವ್ಯ ನಿಷ್ಠೆ, ನಾಯಕತ್ವ ಗುಣವನ್ನು ಶ್ಲಾಘಿಸಿ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಪೂರ್ಣಿಮಾ, ಸಹಾಯಕ ನಿರ್ದೇಶಕಿ ಕನ್ನಡ ಸಂಸ್ಕೃತಿ ಇಲಾಖೆ, ನರಸಿಂಹ ಮೂರ್ತಿ ರಾವ್, ಭುವನಪ್ರಸಾದ ಹೆಗ್ಡೆ, ರಾಮಾಂಜಿ ಉಪಸ್ಥಿತರಿದ್ದರು.