ಸೆಲೆಬ್ರಿಟಿಗಳು, ಹೂಡಿಕೆದಾರರು ಭಾಗಿ ಅಮೆಜಾನ್​ ಪ್ರೈಮ್​​ನಲ್ಲಿ ಬರಲಿದೆ ಸ್ಟಾರ್ಟಪ್ ಕೇಂದ್ರಿತ ಶೋ

ನವದೆಹಲಿ :ಅಮೆಜಾನ್ ಇಂಡಿಯಾ ಪ್ರತಿನಿಧಿಗಳು ಹಲವಾರು ಏಂಜೆಲ್ ಹೂಡಿಕೆದಾರರು ಮತ್ತು ವೆಂಚರ್ ಫಂಡ್‌ಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಸಹ ಪ್ರೈಮ್ ವಿಡಿಯೋ ಸರಣಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅಮೆಜಾನ್ ಪ್ರೈಮ್ ಸ್ಟಾರ್ಟಪ್ ಸರಣಿಯು ಶಾರ್ಕ್ ಟ್ಯಾಂಕ್ ಇಂಡಿಯಾ ಮಾದರಿಯಲ್ಲೇ ಇರಲಿದೆ. ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಈಗಾಗಲೇ ಶಾರ್ಕ್ ಟ್ಯಾಂಕ್ ಇಂಡಿಯಾದ ಎರಡು ಸೀಸನ್‌ಗಳು ಪ್ರಸಾರವಾಗಿವೆ. ಸೋನಿ ಇಂಡಿಯಾದಲ್ಲಿನ ಶಾರ್ಕ್ ಟ್ಯಾಂಕ್ ಶೋ ಅಮೇರಿಕನ್ ಶಾರ್ಕ್ ಟ್ಯಾಂಕ್‌ನ ಶೋ ದ ಭಾರತೀಯ ಫ್ರ್ಯಾಂಚೈಸ್ ಆಗಿದೆ. ಉದ್ಯಮಿಗಳು ಸ್ಟಾರ್ಟಪ್​​ […]

‘ಡೇರ್​ ಡೆವಿಲ್​ ಮುಸ್ತಫಾ’ ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಕೆ ,ಚಿತ್ರ ತಂಡದಿಂದ ಬಿರಿಯಾನಿ, ಪುಳಿಯೋಗರೆ ಪಾರ್ಟಿ

ಒಳ್ಳೆಯ ಸಿನಿಮಾಗಳು ತೆರೆ ಕಂಡಾಗ ಖಂಡಿತವಾಗಿಯೂ ಜನರು ಬೆಂಲಿಸುತ್ತಾರೆ ಅನ್ನೋ ನಂಬಿಕೆ ಗಾಂಧಿನಗರದಲ್ಲಿದೆ. ಅದಕ್ಕೆ ‘ಡೇರ್​ ಡೆವಿಲ್​ ಮುಸ್ತಫಾ’ ಉದಾಹರಣೆ. ಈ ಸಿನಿಮಾ ಮೇ 19ಕ್ಕೆ ತೆರೆ ಕಂಡಿದೆ. ಚಿತ್ರಕ್ಕೆ ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾವನ್ನು ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ಅರ್ಪಿಸಿದ್ದು, ಕೆ.ಆರ್.ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ […]

ಭರ್ಜರಿ ತಯಾರಿ , ದಿನಪೂರ್ತಿ ಕಾರ್ಯಕ್ರಮ : ಶಿವಣ್ಣನ ಹುಟ್ಟುಹಬ್ಬ

ಕೋವಿಡ್‌ ಆತಂಕ ಆನಂತರ ನಟ ಪುನೀತ್‌ ರಾಜಕುಮಾರ್‌ ಅವರ ಅಗಲಿಕೆಯ ದುಃಖದಿಂದಾಗಿ ನಟ ಶಿವರಾಜಕುಮಾರ್‌, ಸುಮಾರು ನಾಲ್ಕು ವರ್ಷಗಳಿಂದ ಅದ್ಧೂರಿ ಬರ್ತ್‌ಡೇ, ಸಂಭ್ರಮಾಚರಣೆಗಳಿಂದ ದೂರ ಉಳಿದಿದ್ದರು. ಆದರೆ ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಸಾರ್ವಜನಿಕವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲು ಶಿವರಾಜಕುಮಾರ್‌ ಸಮ್ಮತಿಸಿದ್ದು, ಅದಕ್ಕಾಗಿ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ. ದಿನಪೂರ್ತಿ ಕಾರ್ಯಕ್ರಮ: ಜು.11ರ ಸಂಜೆಯಿಂದಲೇ ಶಿವರಾಜಕುಮಾರ್‌ ಅವರ ಹುಟ್ಟುಹಬ್ಬ ಕಾರ್ಯಕ್ರಮ ಆರಂಭವಾಗಲಿದ್ದು, ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣ ನಿವಾಸದಲ್ಲಿ ರಾತ್ರಿ 12 ಗಂಟೆಗೆ ಬೃಹತ್‌ ಕೇಕ್‌ ಕತ್ತರಿಸಲಾಗುತ್ತಿದ್ದು, […]

ಆಹಾರದ ಮೇಲಿನ ತೆರಿಗೆ (GST) ಶೇ 5% ಕ್ಕೆ ಇಳಿಕೆ ಸಿನಿಮಾ ಮಂದಿರಕ್ಕೆ ತೆರಳುವವರಿಗೆ ಸಿಹಿ ಸುದ್ದಿ

ನವದೆಹಲಿ:ಸಿನೆಮಾ ಟಿಕೆಟ್ ಮಾರಾಟ ಮತ್ತು ಪಾಪ್ಕಾರ್ನ್ ಅಥವಾ ತಂಪು ಪಾನೀಯಗಳಂತಹ ತಿನ್ನಬಹುದಾದ ವಸ್ತುಗಳ ಸರಬರಾಜು. ಒಟ್ಟುಗೂಡಿಸಿ ಮಾರಾಟ ಮಾಡಿದರೆ, ಸಂಪೂರ್ಣ ಪೂರೈಕೆಯನ್ನು ಸಂಯೋಜಿತ ಪೂರೈಕೆ ಎಂದು ಪರಿಗಣಿಸಬೇಕು ಮತ್ತು ಪ್ರಧಾನ ಪೂರೈಕೆಯ ಅನ್ವಯವಾಗುವ ದರದ ಪ್ರಕಾರ ತೆರಿಗೆ ವಿಧಿಸಬೇಕು, ಪ್ರಸ್ತುತ, 100 ರೂ.ಗಿಂತ ಕಡಿಮೆ ಬೆಲೆಯ ಚಲನಚಿತ್ರ ಟಿಕೆಟ್ಗಳಿಗೆ ಶೇಕಡಾ 12 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಮಿತಿಗಿಂತ ಹೆಚ್ಚಿನದಕ್ಕೆ ಶೇಕಡಾ 18 ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ. ಜುಲೈ 11 ರಂದು ನಡೆದ ಸರಕು ಮತ್ತು ಸೇವಾ ತೆರಿಗೆ […]

ಐಸಿಸಿ ಮಹಿಳಾ ಟಾಪ್ ಟೆನ್ ರ‍್ಯಾಂಕಿಂಗ್‌ ​ನಲ್ಲಿ ಸ್ಥಾನ ಪಡೆದ ಹರ್ಮನ್‌ಪ್ರೀತ್ ಕೌರ್

ದುಬೈ: ಐಸಿಸಿ ಮಹಿಳಾ ಆಟಗಾರರ ಶ್ರೇಯಾಂಕದ ಇತ್ತೀಚಿನ ಅಪ್‌ಡೇಟ್‌ನಲ್ಲಿ ಟಿ-20ಐ ಮತ್ತು ಒಡಿಐ ತಂಡದಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ.ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಬಾಂಗ್ಲಾದೇಶ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಐಸಿಸಿ ಮಹಿಳಾ ಆಟಗಾರ್ತಿ ರ‍್ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿ ಟಾಪ್​ ಟೆನ್​ನಲ್ಲಿ ಅಗ್ರ ಸ್ಥಾನ ಪಡೆದ್ದಾರೆ. ಟಿ-20ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ತಹ್ಲಿಯಾ ಮೆಕ್‌ಗ್ರಾತ್ 784 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಸಹ ಆಟಗಾರ್ತಿ ಬೆತ್ ಮೂನಿ (777) ನಂತರದ […]