PUBG ಮೂಲಕ ಭೇಟಿಯಾದವನ ಜೊತೆ ಮದುವೆಯಾಗಲು ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ!!

ನವದೆಹಲಿ: ಜನಪ್ರಿಯ ಆನ್‌ಲೈನ್ ಗೇಮ್ PUBG ಮೂಲಕ ಭೇಟಿಯಾದ ಪಾಕಿಸ್ತಾನಿ ಮಹಿಳೆ ಮತ್ತು ಭಾರತೀಯ ಪುರುಷನ ಪ್ರೇಮಕಥೆಯು ಇಬ್ಬರನ್ನೂ ಜೈಲು ಸೇರುವಂತೆ ಮಾಡಿದೆ. 27 ವರ್ಷದ ಸೀಮಾ ಗುಲಾಮ್ ಹೈದರ್, 22 ವರ್ಷದ ಸಚಿನ್ ಮೀನಾ ಅವರನ್ನು ಒಂದೆರಡು ವರ್ಷಗಳ ಹಿಂದೆ ವರ್ಚುವಲ್ ಗೇಮಿಂಗ್ ಪ್ಲಾಟ್‌ಫಾರ್ಮ್ PUBG ಮೂಲಕ ಭೇಟಿಯಾಗಿದ್ದಾರೆ ಮತ್ತು ಭಾರತದಲ್ಲಿ ನೆಲೆಸಲು ಆಕೆ ತನ್ನ ನಾಲ್ಕು ಮಕ್ಕಳೊಂದಿಗೆ ಬಂದಿಳಿದಿದ್ದಾಳೆ. ಮೇ ತಿಂಗಳಲ್ಲಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಆಕೆ ಮತ್ತು ಆಕೆಯ ಪ್ರೇಮಿ ಉತ್ತರ ಪ್ರದೇಶದ […]

ರಾಷ್ಟ್ರೀಯ ಲೋಕ್ ಅದಾಲತ್: ಒಂದೇ ದಿನದಲ್ಲಿ ಒಟ್ಟು 32930 ಪ್ರಕರಣ ಇತ್ಯರ್ಥ

ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ಜುಲೈ 08 ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತನ್ನು ಆಯೋಜಿಸಿ ಒಂದೇ ದಿನ ಒಟ್ಟು 32930 ಪ್ರಕರಣಗಳನ್ನು (ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ -62, ಚೆಕ್ಕು ಅಮಾನ್ಯ ಪ್ರಕರಣ-294, ಬ್ಯಾಂಕ್ / ಹಣ ವಸೂಲಾತಿ ಪ್ರಕರಣ-14, ಎಂ.ವಿ.ಸಿ ಪ್ರಕರಣ-166, ವೈವಾಹಿಕ ಪ್ರಕರಣ-5, ಸಿವಿಲ್ ಪ್ರಕರಣ-211, ಇತರೇ ಕ್ರಿಮಿನಲ್ ಪ್ರಕರಣ-3630 ಹಾಗೂ ವ್ಯಾಜ್ಯ ಪೂರ್ವ ದಾವೆ-28548) ರಾಜೀ ಮುಖಾಂತರ […]

ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ಪರಿಶೀಲಿಸಿದ ಶಾಸಕ ಯಶ್ ಪಾಲ್ ಸುವರ್ಣ

ಉಡುಪಿ: ಇಲ್ಲಿನ ಸಂತೆಕಟ್ಟೆ ರಾಷ್ಟೀಯ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿ ತೀವ್ರ ಮಳೆಯ ಹಿನ್ನೆಲೆಯಲ್ಲಿ ಕುಂಠಿತವಾಗಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಹೆದ್ದಾರಿಯಲ್ಲಿ ಸುಗಮ ಸಂಚಾರ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಯಶ್ ಪಾಲ್ ಸುವರ್ಣ ಸ್ಥಳ ಪರಿಶೀಲನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜುಲೈ 14 ರಂದು ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ ಪ್ರಧಾನ ಕಚೇರಿ ಸ್ಥಳಾಂತರ ಕಾರ್ಯಕ್ರಮ

ಉಡುಪಿ: ಇಲ್ಲಿನ ಪೂಂಜಾ ಟವರ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ ಪ್ರಧಾನ ಕಚೇರಿ ಸ್ಥಳಾಂತರ ಕಾರ್ಯಕ್ರಮವು ಜುಲೈ 14 ಶುಕ್ರವಾರದಂದು ಬೆಳಿಗ್ಗೆ 11 ಗಂಟೆಗೆ ಜರುಗಲಿರುವುದು. ನೂತನ ಕಚೇರಿಯು ಇನ್ನು ಮುಂದೆ ಕೋರ್ಟ್ ರೋಡ್ ಗಿರಿಯಾಸ್ ಹತ್ತಿರವಿರುವ ಕಾರ್ತಿಕ್ ಟವರ್ಸ್ ನ ಒಂದನೇ ಮಹಡಿಯಲ್ಲಿ ಕಾರ್ಯ ನಿರ್ವಹಿಸಲಿರುವುದು. ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕ ಯಶ್ ಪಾಲ್ ಸುವರ್ಣ ಭಾಗವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ದ.ಕ.ಜಿ. ಕೇಂದ್ರ […]

ತ್ರಿಶಾ ಕ್ಲಾಸಸ್: ಸಿ.ಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅದ್ಭುತ ಸಾಧನೆ

ಉಡುಪಿ: ಸತತ ಇಪ್ಪತ್ತೈದು ವರ್ಷಗಳಿಂದ ಸಿ.ಎ-ಸಿ.ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆ ತ್ರಿಶಾ ಕ್ಲಾಸಸ್ ಇದರ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿ.ಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಸಿ.ಎ ಇಂಟರ್ ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್ ಗಳಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ, ನಿಸರ್ಗ ಎಸ್ ಕುಂದಾಪುರ್ (537), ವರ್ಧನ್ ವಿಜಯ್ ಆಚಾರ್(488), ಪ್ರಥಮ್ ಕಾಮತ್(480) , ಶ್ರೀಕರ್(459), ತಹಶೀರ್ ಹುಸೈನ್(456), ನಂದಿನಿ […]